ಇಂದು ವಿಶ್ವದಾದ್ಯಂತ ಕ್ರಿಸ್ ಮಸ್ ಆಚರಣೆಯನ್ನು ಮಾಡಲಾಗುತ್ತಿದೆ. ಎಲ್ಲಾ ಚರ್ಚ್ಗಳಲ್ಲಿ ಇಂದು ಸಂಭ್ರಮ ಮನೆ ಮಾಡಿದೆ. ಅಲ್ಲದೇ ಮನೆಗಳಲ್ಲೂ ಕೂಡ ಕ್ರೈಸ್ತ ಬಾಂಧವರು ಸೇರಿದಂತೆ ಎಲ್ಲಾರೂ ಈ ಹಬ್ಬವನ್ನು ಆಚರಿಸುತ್ತಾರೆ. ಹಬ್ಬದ ಹಿನ್ನೆಲೆಯಲ್ಲಿ ಬಚ್ಚನ್ ಫ್ಯಾಮಿಲಿ ಕೂಡ ಸಂಭ್ರಮಿಸಿದೆ.
ಹೌದು ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಕುಟುಂಬ ಇಂದು ಕ್ರಿಸ್ ಮಸ್ ಹಬ್ಬದ ಸಂಭ್ರಮದಲ್ಲಿ ಮುಳುಗಿದೆ. ಹಬ್ಬದ ಸಡಗರದ ಫೋಟೋವನ್ನು ಅಮಿತಾಬ್ ಮೊಮ್ಮಗಳು ನವ್ಯ ನವೆಲಿ ನಂದ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ನವ್ಯ ಹಂಚಿಕೊಂಡಿರುವ ಫೋಟೋದಲ್ಲಿ ಅಮಿತಾಬ್ ಬಚ್ಚನ್, ಜಯಾ ಬಚ್ಚನ್, ಅಭೀಷೇಕ್, ಐಶ್ವರ್ಯ ರೈ, ಶ್ವೇತಾ, ನವ್ಯಾ, ಅಗಸ್ತ್ಯ ಕಾಣಿಸಿದ್ದಾರೆ.
ನಿನ್ನೆ ಮಾಹಿತಿಯೊಂದನ್ನು ಹಂಚಿಕೊಂಡಿದ್ದ ನವ್ಯ ತಾವು ತಮ್ಮ ಇನ್ಸ್ಟಾಗ್ರಾಮ್ ಖಾತೆಯನ್ನು ಸಾರ್ವಜನಿಕ ಗೊಳಿಸಿರುವುದಾಗಿ ಹೇಳಿದ್ದರು. ಇದೀಗ ಬಚ್ಚನ್ ಕ್ಯೂಟ್ ಫ್ಯಾಮಿಲಿಯ ಫೋಟೋ ನೋಡಿದ ಅಭಿಮಾನಿಗಳು ಸಖತ್ ಖುಷ್ ಆಗಿದ್ದಾರೆ.