ಇತ್ತೀಚೆಗೆ ಆಡಿಯೋ ರಿಲೀಸ್ ಮಾಡಿ ಚಂದನವನದ ದೊಡ್ಡ ದೊಡ್ಡ ತಾರೆಯರನ್ನು ಒಟ್ಟುಗೂಡಿಸಿದ 'ಆಯುಷ್ಮಾನ್ ಭವ' ಟೀಂ ಇದೀಗ ದೀಪಾವಳಿ ಗಿಫ್ಟ್ ನೀಡಿದೆ. ದೀಪಾವಳಿ ವಿಶೇಷವಾಗಿ 'ಆಯುಷ್ಮಾನ್ಭವ' ಟ್ರೇಲರ್ ರಿಲೀಸ್ ಆಗಿದೆ.
ಈ ಟ್ರೇಲರ್ನಲ್ಲಿ ಶಿವರಾಜ್ ಕುಮಾರ್ ಮಾಸ್ ಲುಕ್‌ನಲ್ಲಿ ಮಿಂಚಿದ್ದು, ಚಿತ್ರ ಸಸ್ಪೆಂಸ್ ಮತ್ತು ಕುಟುಂಬ ಕೂಡಿ ನೋಡುವ ಸಿನಿಮಾವಾಗಿದೆ. ಶಿವರಾಜ್ ಕುಮಾರ್ಗೆ ರಚಿತಾರಾಮ್ ಜೋಡಿಯಾಗಿ ನಟಿಸಿದ್ದು, ಸುಹಾಸಿನಿ, ಅನಂತ್ ನಾಗ್, ಸಾಧು ಕೋಕಿಲ ಸೇರಿದಂತೆ ಬಹುದೊಡ್ಡ ತಾರಾಗಣವೇ ಚಿತ್ರದಲ್ಲಿದೆ.
ಟ್ರೇಲರ್ನಲ್ಲಿ ಕಾಣಿಸಿರುವ ಹಾಗೆ ಸಿನಿಮಾ ಹಾರರ್ ಚಿತ್ರದಂತೆ ಕಾಣುತ್ತದೆ. ಅಲ್ಲದೇ ಈ ಸಿನಿಮಾದಲ್ಲಿ ಶಿವಣ್ಣ ಸಂಗೀತಗಾರನಾಗಿ ಸಂಗೀತದ ಮೂಲಕವೇ ಕಥೆ ಹೇಳುವ ರೀತಿಯಲ್ಲಿದೆ. ಗನ್ ಮತ್ತು ಮಚ್ಚು ಹೆಚ್ಚು ಸದ್ದು ಮಾಡಿದ್ದು ಪ್ರೇಕ್ಷಕರಿಗೆ ಭರಪೂರ ಮನರಂಜನೆಯ ಸಿಗಲಿದೆ.
ಈ ಚಿತ್ರಕ್ಕೆ ಪಿ ವಾಸು ನಿರ್ದೇಶನವಿದ್ದು, ಬಿ.ಎಸ್ ದ್ವಾರಕೀಶ್ ಮತ್ತು ಯೋಗೀಶ್ ದ್ವಾರಕೀಶ್ ನಿರ್ಮಾಣ ಮಾಡುತ್ತಿದ್ದಾರೆ. ಇದೇ ನವೆಂಬರ್ 1 ಕ್ಕೆ ತೆರೆಗಪ್ಪಳಿಸಿಲು ಸಿನಿಮಾ ರೆಡಿಯಾಗಿದ್ದು, ಟ್ರೇಲರ್ ನೋಡಿರುವ ಅಭಿಮಾನಿಗಳಿಗೆ ಸಿನಿಮಾದ ಬಗ್ಗೆ ಕುತೂಹಲ ಹೆಚ್ಚಿದೆ.
- " class="align-text-top noRightClick twitterSection" data="">