2019 ರ ಕೊನೆಯಲ್ಲಿ ರಾಜ್ಯಾದ್ಯಂತ ತೆರೆ ಕಂಡ ಬಹು ನಿರೀಕ್ಷಿತ ಸಿನಿಮಾ ಅವನೇ ಶ್ರೀಮನ್ನಾರಾಯಣ. ಈ ಸಿನಿಮಾ ಮೂರು ದಿನಕ್ಕೆ ಭರ್ಜರಿ ಕಲೆಕ್ಷನ್ ಮಾಡಿದೆ. ರಾಜ್ಯದ 350ಕ್ಕೂ ಹೆಚ್ಚು ಥಿಯೇಟರ್ಗಳಲ್ಲಿ ಬಿಡುಗಡೆಯಾಗಿದ್ರು, ಓವರ್ ಆಲ್ 1400 ಶೋಗಳು ಪ್ರದರ್ಶನಗೊಂಡಿವೆ.
ಈ ಶೋಗಳನ್ನ ಲೆಕ್ಕಾಚಾರ ಹಾಕಿದ್ರೆ, ಅವನೇ ಶ್ರೀಮನ್ನಾರಾಯಣ ನಿರ್ಮಾಪಕರ ಜೇಬು ತುಂಬಿಸಿದೆ. ರಕ್ಷಿತ್ ಶೆಟ್ಟಿ ಪೊಲೀಸ್ ಅವತಾರದಲ್ಲಿ ತರ್ಲೆ, ತಮಾಷೆ ಹಾಗು ಚಿತ್ರದ ಅದ್ದೂರಿ ಮೇಕಿಂಗ್ ಪ್ರೇಕ್ಷಕರಿಗೆ ಇಷ್ಟವಾಗಿದ್ದು, ಮೂರು ದಿನದಲ್ಲಿ ಅವನೇ ಶ್ರೀಮನ್ನಾರಾಯಣ ಸಿನಿಮಾ ಬರೋಬ್ಬರಿ 25 ಕೋಟಿ ಕಲೆಕ್ಷನ್ ಮಾಡಿದೆ.
ಮೊದಲ ದಿನ 7 ಕೋಟಿ, ಎರಡನೇ ದಿನ 8 ಕೋಟಿ ಹಾಗು ಮೂರನೇ ದಿನ 10 ಕೋಟಿ ಕಲೆಕ್ಷನ್ ಮಾಡುವ ಮೂಲಕ ಅವನೇ ಶ್ರೀಮನ್ನಾರಾಯಣ ಸಿನಿಮಾ ಮೂರು ದಿನಕ್ಕೆ 25 ಕೋಟಿ ಲೂಟಿ ಮಾಡಿದೆ ಎಂದು ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನ್ ಹೇಳಿದ್ದಾರೆ.
ಈ ಸಿನಿಮಾಕ್ಕಾಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡಿದ್ದೇವೆ, ಸಿನಿಮಾದಲ್ಲಿ ಉತ್ತಮ ಕಥೆಯಿದೆ. ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವುದೇ ಇದಕ್ಕೆ ಸಾಕ್ಷಿ ಎಂದು ಹೇಳಿದ್ದಾರೆ. ಇನ್ನು ಇದೇ ರೀತಿ ಕಲೆಕ್ಷನ್ ಇದ್ರೆ ನೂರು ಕೋಟಿ ಕ್ಲಬ್ ಸೇರಲಿದೆ. ಸದ್ಯಕ್ಕೆ ಕನ್ನಡದಲ್ಲಿ ಅವನೇ ಶ್ರೀಮನ್ನಾರಾಯಣ ರಿಲೀಸ್ ಆಗಿದ್ದು, ಜನವರಿ 3ರಂದು ತಮಿಳು ಮತ್ತು ಮಲಯಾಳಂ ನಲ್ಲಿ ಹಾಗೂ ಜನವರಿ 16 ರಂದು ಹಿಂದಿಯಲ್ಲಿ ರಿಲೀಸ್ ಆಗಲಿದೆ.