ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯಿಸಿರುವ, ಸಚಿನ್ ರವಿ ನಿರ್ದೇಶನದ ಬಹುನಿರೀಕ್ಷಿತ ಅವನೇ ಶ್ರೀಮನ್ನಾರಾಯಣ ಪ್ರೇಕ್ಷಕರ ಮುಂದೆ ಬಂದಿದೆ. ಸಿನಿಮಾ ನೋಡಿದ ಅದೆಷ್ಟೋ ಪ್ರೇಕ್ಷಕ ಪ್ರಭುಗಳು ಇದೊಂದು ಫ್ಯಾಂಟಸಿ ಸಿನಿಮಾ ಆಗಿದ್ದು, ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಪ್ರಯತ್ನ ಅಂತಿದ್ದಾರೆ.
ಆದರೆ ಈ ಮಧ್ಯೆ ಅವನೇ ಶ್ರೀಮನ್ನಾರಾಯಣ ಸಿನಿಮಾದ ಅವಧಿ 3 ಗಂಟೆ 6 ನಿಮಿಷ ಇದೆ. ಸಿನಿಮಾ ನೋಡಿದ ಮಂದಿ ಫಸ್ಟ್ ಆಫ್ ಚೆನ್ನಾಗಿದೆ ಹಾಗೂ ಸೆಕೆಂಡ್ ಆಫ್ ಮಂದಗತಿಯಲ್ಲಿ ಸಾಗುತ್ತದೆ ಎಂದು ಹೇಳುತ್ತಿದ್ದಾರೆ.
ಈ ಬಗ್ಗೆ ಚಿತ್ರತಂಡದ ಗಮನಕ್ಕೆ ಬಂದಿದ್ದು, ಅವನೇ ಶ್ರೀಮನ್ನಾರಾಯಣ ಚಿತ್ರದಲ್ಲಿ 26 ನಿಮಿಷ ತೆಗೆಯಲು ಪ್ಲಾನ್ ಮಾಡಲಾಗಿದೆಯಂತೆ. ಈ ಬಗ್ಗೆ ನಿರ್ದೇಶಕ ಸಚಿನ್ ರವಿ, ರಕ್ಷಿತ್ ಶೆಟ್ಟಿ, ನಿರ್ಮಾಪಕರಾದ ಪುಷ್ಕರ್ ಮಲ್ಲಿಕಾರ್ಜುನ್ ಚರ್ಚೆ ನಡೆಸಿದ್ದು, ಯಾವ ಯಾವ ಸನ್ನಿವೇಶಗಳಿಗೆ ಕತ್ತರಿ ಹಾಕಬೇಕು ಅನ್ನೋದು ಚಾಲೆಂಜಿಂಗ್ ಆಗಿದೆ ಎನ್ನಲಾಗುತ್ತಿದೆ.
ಸಿನಿಮಾದಲ್ಲಿ 26 ನಿಮಿಷವನ್ನ ಟ್ರಿಮ್ ಮಾಡಿದರೆ 2 ಗಂಟೆ 36 ನಿಮಿಷ ಆಗುತ್ತೆ. ಆಗ ಅವನೇ ಶ್ರೀಮನ್ನಾರಾಯಣ ಸಿನಿಮಾಕ್ಕೆ ಡ್ಯುರೇಷನ್ ಕಡಿಮೆಯಾಗಿ ಮತ್ತಷ್ಟು ಸಿನಿಮಾ ಪ್ರಿಯರು ಚಿತ್ರ ಮಂದಿರಗಳ ಕಡೆ ಬರುತ್ತಾರೆ ಎಂಬುದು ಚಿತ್ರತಂಡ ಮತ್ತು ಸಿನಿಮಾ ವಿಮರ್ಶಕರ ಪ್ಲಾನ್ ಆಗಿದೆ ಎನ್ನಲಾಗುತ್ತಿದೆ.