ಉಡುಪಿ: ಅವನೇ ಶ್ರೀಮನ್ ನಾರಾಯಣ ಚಿತ್ರದ ನಾಯಕ ರಕ್ಷಿತ್ ಶೆಟ್ಟಿ ಉಡುಪಿಯ ಕಲ್ಪನಾ ಚಿತ್ರ ಮಂದಿರದಲ್ಲಿ ನಟಿ ಶಾನ್ವಿ ಶ್ರೀ ವತ್ಸ ಮತ್ತು ಸಿನೆಮಾ ತಂಡದೊಂದಿಗೆ ಆಗಮಿಸಿ ಚಲನಚಿತ್ರವನ್ನ ನೋಡಿದರು.
ಚಿತ್ರದ ಪ್ರಚಾರಕ್ಕಾಗಿ ಕೃಷ್ಣನೂರಿಗೆ ಆಗಮಿಸಿದ ರಕ್ಷಿತ್ ಶೆಟ್ಟಿ ಜೊತೆ ಸೆಲ್ಫಿಗೆ ಯುವಜನತೆ ಮುಗಿಬಿದ್ದ ಘಟನೆ ನಡೆಯಿತು. ಇನ್ನು ಸಿನಿಮಾ ಬಗ್ಗೆ ಮಾತನಾಡಿದ ರಕ್ಷಿತ್ ಶೆಟ್ಟಿ, ಸಿನಿಮಾ ನಿರೀಕ್ಷೆಗಿಂತ ಹೆಚ್ಚು ಓಡುತ್ತಿದೆ. ತೆಲುಗು ಹಾಗೂ ಮಲೆಯಾಳಂನಲ್ಲಿ ರೆಸ್ಪಾನ್ಸ್ ಚೆನ್ನಾಗಿದೆ. ಕರಾವಳಿ ಭಾಗದಲ್ಲಿ ನಿರೀಕ್ಷೆಗೂ ಮೀರಿ ಚಿತ್ರ ಆದಾಯ ಗಳಿಸಿದೆ ಎಂದರು.
ಕನ್ನಡ ಸಿನೆಮಾವೊಂದು ಗಡಿ ಮೀರಿ ಬೇರೆಡೆ ಸದ್ದು ಮಾಡ್ತಾ ಇರೋದು ಹೆಮ್ಮೆಯ ವಿಚಾರ ಅಂತಾ ರಕ್ಷಿತ್ ಶೆಟ್ಟಿ ಹೇಳಿದ್ದಾರೆ. ಈ ವೇಳೆ ರಕ್ಷಿತ್ಗೆ ನಟ ಪ್ರಮೋದ್ ಶೆಟ್ಟಿ ಹಾಗೂ ನಟಿ ಶಾನ್ವಿ ಶ್ರೀವತ್ಸ ಸಾಥ್ ನೀಡಿದ್ರು.