ಹೈದರಾಬಾದ್: ಹಾಲಿವುಡ್ ಲೋಕದ ಬೆನ್ ಅಫ್ಲೆಕ್ ಮತ್ತು ಗಾಯಕಿ ಜೆನ್ನಿಫರ್ ಲೊಪೆಜ್ ಜನಪ್ರಿಯ ಜೋಡಿ ಸದಾ ಒಂದಿಲ್ಲೊಂದು ರೀತಿಯಲ್ಲಿ ಸುದ್ದಿಯಲ್ಲಿರುತ್ತಾರೆ. 2002ರಲ್ಲಿ ಎಂಗೇಜ್ಮೆಂಟ್ ಮಾಡಿಕೊಂಡು, 'ಬೆನ್ನಿಫರ್' ಎಂದೇ ಜನಪ್ರಿಯವಾಗಿದ್ದ ಇವರು, ಕಾರಣಾಂತರಗಳಿಂದ ದೂರವಾಗಿದ್ದರು. ಈಗ ಇಬ್ಬರೂ ಹತ್ತಿರವಾಗಿದ್ದು, ಬದುಕಿನ ರಸಕ್ಷಣಗಳನ್ನು ಅನುಭವಿಸುತ್ತಿದ್ದಾರೆ.
ಹೌದು, 17 ವರ್ಷಗಳಿಂದ ದೂರವಾಗಿದ್ದ ಜೆನ್ನಿಫರ್ ಮತ್ತು ಬೆನ್ ಇದೀಗ ಒಂದಾಗಿದ್ದಾರೆ. ಜೆನ್ನಿಫರ್ ಲೊಪೆಜ್ ತಮ್ಮ 52ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಕಿತ್ತಳೆ ಬಣ್ಣದ ಬಿಕಿನಿ ತೊಟ್ಟು ತನ್ನಿಯನ ಜೊತೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಈ ಫೋಟೋಗಳನ್ನು ಬಾಲಿವುಡ್ ನಟಿ ಮಲೈಕಾ ಅರೋರಾ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. "52! Age is just a number. She is my inspiration' ಎಂದಿದ್ದಾರೆ.
ಈ ಜೋಡಿ 2002ರಲ್ಲಿ ಪರಸ್ಪರ ಪ್ರೀತಿಸಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆಗಿನ ಕಾಲಕ್ಕೆ, ಇವರು ಹೈಪ್ರೊಫೈಲ್ ಕಪಲ್ ಎನ್ನಿಸಿಕೊಂಡಿದ್ದರು. ಆದರೆ, ಅವರ ಸಂಬಂಧದ ಮಧ್ಯೆ ಬಿರುಕು ಮೂಡಿ ಇಬ್ಬರೂ ದೂರವಾಗಿದ್ದರು. ಮುಂದೆ, ಜೆನ್ನಿಫರ್, ಮಾರ್ಕ್ ಆಂಟೋನಿ ಅವರನ್ನು ವರಿಸುತ್ತಾರೆ. ಬೆನ್ ಅವರು ಜೆನ್ನಿಫರ್ ಗಾರ್ನರ್ ಅವರನ್ನು ಮದುವೆಯಾದರು. ಇಬ್ಬರಿಗೂ ಮಕ್ಕಳಾಗಿತ್ತು. ಆದರೆ, ಕೆಲವೇ ವರ್ಷಗಳಲ್ಲಿ ಕಾರಣಾಂತರಗಳಿಂದ ಇಬ್ಬರ ಮದುವೆಯೂ ಮುರಿದುಬಿದ್ದಿತ್ತು.
ಇದನ್ನೂ ಓದಿ: ನೀಲಿ ಚಿತ್ರದ ಪ್ರಕರಣಕ್ಕೆ ನಾಲ್ಕು ಸಾಕ್ಷಿ: ಕುಂದ್ರಾಗೆ ಕಂಟಕವಾಗುತ್ತಾ ಉದ್ಯೋಗಿಗಳ ಹೇಳಿಕೆ?