ETV Bharat / sitara

ಗಟ್ಟಿಮೇಳದ ಆರತಿ ಪಾತ್ರಕ್ಕೆ ವಿದಾಯ ಹೇಳಿದ ಅಶ್ವಿನಿ - gattimela serial

"ನಾನು ಇಂದು ಕನ್ನಡ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದೇನೆ ಎಂದರೆ ಅದಕ್ಕೆ ಗಟ್ಟಿಮೇಳ ಧಾರಾವಾಹಿಯ ಆರತಿ ಪಾತ್ರವೇ ಕಾರಣ. ಅದು ನನಗೆ ಸಾಕಷ್ಟು ಜನಪ್ರಿಯತೆ ನೀಡಿದ ಪಾತ್ರವೂ ಹೌದು. ಇದೀಗ ಆ ಪಾತ್ರದಿಂದ ನಾನು ಹೊರಬಂದಿದ್ದು, ಆದಷ್ಟು ಬೇಗ ಬೇರೆ ಪಾತ್ರ, ಧಾರಾವಾಹಿಯ ಮೂಲಕ ನಿಮ್ಮ ಮುಂದೆ ಬರುತ್ತೇನೆ" ಎಂದು ಅಶ್ವಿನಿ ತಿಳಿಸಿದ್ದಾರೆ.

Ashwini lefts from gattimela serial
ಆರತಿ ಪಾತ್ರಕ್ಕೆ ವಿದಾಯ
author img

By

Published : Aug 2, 2021, 4:58 PM IST

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗಟ್ಟಿಮೇಳ ಧಾರಾವಾಹಿಯಲ್ಲಿ ನಾಯಕಿ ಅಮೂಲ್ಯ ಅಕ್ಕ ಆರತಿ ಆಗಿ ಅಭಿನಯಿಸುತ್ತಿದ್ದ ಅಶ್ವಿನಿ ಇದೀಗ ಪಾತ್ರದಿಂದ ಹೊರಬಂದಿದ್ದಾರೆ. ಬರೋಬ್ಬರಿ ಎರಡು ವರ್ಷಗಳ ಕಾಲ ಆರತಿಯಾಗಿ ನಟಿಸಿ ಕನ್ನಡ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿದ್ದ ಅಶ್ವಿನಿ ಇದೀಗ ಆ ಪಾತ್ರಕ್ಕೆ ವಿದಾಯ ಹೇಳಿದ್ದಾರೆ.

"ನನ್ನೆಲ್ಲಾ ಗಟ್ಟಿಮೇಳ ಅಭಿಮಾನಿಗಳಿಗೆ ತುಂಬು ಹೃದಯದ ಧನ್ಯವಾದಗಳು. ಇಲ್ಲಿವರೆಗೂ ನೀವು ನನಗೆ ಸಪೋರ್ಟ್ ಮಾಡಿಕೊಂಡು ಬಂದಿದ್ದೀರ. ನಿಮ್ಮ ಪ್ರೀತಿ ವಿಶ್ವಾಸವನ್ನು ತೋರಿಸಿದ್ದೀರ. ಎಲ್ಲರಿಗೂ ನನ್ನ ಹೃದಯಪೂರ್ವಕ ಧನ್ಯವಾದಗಳನ್ನು ಹೇಳುತ್ತೇನೆ. ಹೌದು, ಕೆಲವು ಕಾರಣಗಳಿಂದ ನಾನು ಗಟ್ಟಿಮೇಳ ಸೀರಿಯಲ್ ಅನ್ನು ಬಿಟ್ಟಿದ್ದೇನೆ. ನಿಮ್ಮೆಲ್ಲರನ್ನು ರಂಜಿಸಲು ಮತ್ತೆ ಬೇರೆ ಒಂದು ಪ್ರಾಜೆಕ್ಟ್‌ ಮೂಲಕ ಖಂಡಿತಾ ನಾನು ಬಂದೇ ಬರುತ್ತೇನೆ. ನಿಮ್ಮೆಲ್ಲರ ಅಭಿಮಾನಕ್ಕೆ ನಾನು ಎಂದಿಗೂ ಚಿರ ಋಣಿ" ಎಂದು ತಮ್ಮ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಸ್ಟೇಟಸ್ ಹಾಕಿಕೊಂಡಿದ್ದಾರೆ ಅಶ್ವಿನಿ.

Ashwini lefts from gattimela serial
ಕಿರುತೆರೆ ನಟಿ ಅಶ್ವಿನಿ
Ashwini lefts from gattimela serial
ಗಟ್ಟಿಮೇಳ ಸಾಕಷ್ಟು ಹೆಸರು ತಂದುಕೊಟ್ಟಿದೆ

ತೆಲುಗಿನ ನಾಗಭೈರವಿ ಧಾರಾವಾಹಿಯಲ್ಲಿ ನಾಗಿಣಿ ಹಾಗೂ ಬುಡಕಟ್ಟಿನ ಹೆಣ್ಣು ಮಗಳಾಗಿ ಕಾಣಿಸಿಕೊಳ್ಳುತ್ತಿರುವ ಅಶ್ವಿನಿ, ಕೆಲ ವೈಯಕ್ತಿಕ ಕಾರಣಗಳಿಂದ ಆರತಿ ಪಾತ್ರದಿಂದ ಹೊರಬಂದಿದ್ದಾರೆ. ಇದರ ಜೊತೆಗೆ " ನಾನು ಡೇಟ್ಸ್ ಕಾರಣದಿಂದಾಗಿ ಗಟ್ಟಿಮೇಳ ಧಾರಾವಾಹಿಯಿಂದ ಹೊರಬಂದಿಲ್ಲ. ಬದಲಿಗೆ ನಿರ್ದಿಷ್ಟ ಕಾರಣದಿಂದ ನಾನು ಧಾರಾವಾಹಿಯಿಂದ, ಆರತಿ ಪಾತ್ರದಿಂದ ಹೊರಬರಬೇಕಾಯಿತು‌. ಆ ಕಾರಣ ಏನು ಎಂದು ನಾನು ಮುಂದಿನ ದಿನಗಳಲ್ಲಿ ಹೇಳಿಕೊಳ್ಳುತ್ತೇನೆ" ಎಂದು ಹೇಳಿದ್ದಾರೆ ಅಶ್ವಿನಿ.

Ashwini lefts from gattimela serial
ಆರತಿ ಪಾತ್ರಕ್ಕೆ ವಿದಾಯ ಹೇಳಿದ ಅಶ್ವಿನಿ
Ashwini lefts from gattimela serial
ಗಟ್ಟಿಮೇಳ ಧಾರಾವಾಹಿಯಿಂದ ಹೊರ ನಡೆದ ಅಶ್ವಿನಿ

ಇದರ ಜೊತೆಗೆ " ನಾನು ಇಂದು ಕನ್ನಡ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದೇನೆ ಎಂದರೆ ಅದಕ್ಕೆ ಗಟ್ಟಿಮೇಳ ಧಾರಾವಾಹಿಯ ಆರತಿ ಪಾತ್ರವೇ ಕಾರಣ. ಅದು ನನಗೆ ಸಾಕಷ್ಟು ಜನಪ್ರಿಯತೆ ನೀಡಿದ ಪಾತ್ರವೂ ಹೌದು. ಇದೀಗ ಆ ಪಾತ್ರದಿಂದ ನಾನು ಹೊರಬಂದಿದ್ದು ಆದಷ್ಟು ಬೇಗ ಬೇರೆ ಪಾತ್ರ, ಧಾರಾವಾಹಿಯ ಮೂಲಕ ನಿಮ್ಮ ಮುಂದೆ ಬರುತ್ತೇನೆ" ಎಂದು ಅಶ್ವಿನಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.