ಗಟ್ಟಿಮೇಳ ಧಾರಾವಾಹಿಯ ಆರತಿ ಇದೀಗ ನಾಗಭೈರವಿಯ ಅವತಾರ ತಾಳಿದ್ದು, ತೆಲುಗು ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ.
ನಟಿ ಅಶ್ವಿನಿ ಈ ಕುರಿತ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟರ್ಗಳಲ್ಲಿ ಅಶ್ವಿನಿ ವಿಭಿನ್ನ ಲುಕ್‍ನಲ್ಲಿ ಕಾಣಿಸಿಕೊಂಡಿದ್ದು, ಫೋಟೋಗಳು ಸಖತ್ ವೈರಲ್ ಆಗಿವೆ.
ಅಶ್ವಿನಿ ಪ್ರಸ್ತುತ ಗಟ್ಟಿಮೇಳ ಧಾರಾವಾಹಿಯಲ್ಲಿ ಆರತಿ ಪಾತ್ರ ನಿರ್ವಹಿಸುತ್ತಿದ್ದು, ಕನ್ನಡಿಗರ ಮನೆ ಮಾತಾಗಿದ್ದಾರೆ. ಇದಕ್ಕೂ ಮೊದಲು ರಾಧಾರಮಣ ಧಾರಾವಾಹಿಯಲ್ಲಿ ತೊದಲು ಮಾತನಾಡುವ ಮುಗ್ದ ಹುಡುಗಿಯ ಪಾತ್ರವನ್ನು ನಿರ್ವಹಿಸಿದ್ದರು. ಅದಾದ ಬಳಿಕ ಇದೀಗ ಗಟ್ಟಿಮೇಳ ಧಾರಾವಾಹಿಯಲ್ಲಿ ಮಿಂಚುತ್ತಿದ್ದಾರೆ. ಇದೀಗ ಮತ್ತೊಂದು ಪರಿಣಾಮಕಾರಿ ಪಾತ್ರದಲ್ಲಿ ಅಶ್ವಿನಿ ಕಾಣಿಸಿಕೊಳ್ಳುತ್ತಿದ್ದು, ನಾಗಭೈರವಿಯ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಟಾಲಿವುಡ್‍ಗೆ ಕಾಲಿಟ್ಟಿದ್ದಾರೆ.
ತೆಲುಗಿನ ‘ನಾಗಭೈರವಿ’ ಧಾರಾವಾಹಿಯಲ್ಲಿ ಅಶ್ವಿನಿ ಎರಡು ಶೇಡ್‍ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಾಗದೇವತೆ ಹಾಗೂ ಬುಡಕಟ್ಟು ಜನಾಂಗದ ಹುಡುಗಿಯಾಗಿ ಅವರು ಬಣ್ಣ ಹಚ್ಚಿದ್ದಾರೆ. ಈ ಮೂಲಕ ವಿಭಿನ್ನ ಪಾತ್ರಗಳಲ್ಲಿ ಮಿಂಚಲಿದ್ದಾರೆ. ಲಾಕ್‍ಡೌನ್‍ಗೂ ಮುನ್ನವೇ ಅವರಿಗೆ ಈ ಆಫರ್ ಬಂದಿತ್ತು. ಹೀಗಾಗಿಯೇ ಅವರು 7 ಕೆ.ಜಿ. ತೂಕವನ್ನು ಸಹ ಇಳಿಸಿಕೊಂಡು ಸಣ್ಣಗಾಗಿದ್ದಾರೆ.
‘ನಾಗಭೈರವಿ’ಯಲ್ಲಿ ವಿಭಿನ್ನ ಎರಡು ಪಾತ್ರಗಳನ್ನು ನಿಭಾಯಿಸುತ್ತಿರುವುದರಿಂದ ಈ ಪ್ರಾಜೆಕ್ಟ್ ಮೂಲಕ ಬಣ್ಣದ ಬದುಕಿಗೆ ದೊಡ್ಡ ತಿರುವು ಸಿಗಲಿದೆ ಎಂಬುದು ಅಶ್ವಿನಿ ಅವರ ನಿರೀಕ್ಷೆ. ಈಗಾಗಲೇ ಸೀರಿಯಲ್ ಪ್ರೋಮೋಗಳು ರಿಲೀಸ್ ಆಗಿದ್ದು, ಅಶ್ವಿನಿ ತಮ್ಮ ವಿಶಿಷ್ಟ ಪಾತ್ರದಿಂದ ಗಮನಸೆಳೆದಿದ್ದಾರೆ. ಅಶ್ವಿನಿಯ ಪರ್ಫಾಮೆನ್ಸ್ ನೋಡಿ ಧಾರಾವಾಹಿ ತಂಡ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದೆ.
ಇನ್ನೂ ವಿಶೇಷವೆಂದರೆ ಈ ಧಾರಾವಾಹಿಯಲ್ಲಿ ಸಾಹಸ ದೃಶ್ಯಗಳಿದ್ದು, ನಟಿ ಅನುಷ್ಕಾ ಶೆಟ್ಟಿಗೆ ಸಾಹಸ ಹೇಳಿಕೊಟ್ಟ ಮಾಸ್ಟರ್, ಅಶ್ವಿನಿಗೆ ಫೈಟ್ ಹೇಳಿಕೊಟ್ಟಿದ್ದಾರೆ. ವಿಭಿನ್ನ ಪಾತ್ರವಾದ ಕಾರಣ ಅಶ್ವಿನಿ ‘ನಾಗಭೈರವಿ’ ಸೀರಿಯಲ್ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
‘ಗಟ್ಟಿಮೇಳ’ ಹಾಗೂ ‘ನಾಗಭೈರವಿ’ ಎರಡೂ ಧಾರಾವಾಹಿಗಳನ್ನು ಮಾಡುತ್ತಿರುವುದರಿಂದ ಅಶ್ವಿನಿ ಇನ್ನು ಫುಲ್ ಬ್ಯುಸಿಯಾಗಲಿದ್ದಾರೆ. ತುಂಬಾ ಶೇಡ್ ಹಾಗೂ ಫೈಟಿಂಗ್ ಸೀನ್‍ಗಳಿರುವುದರಿಂದ ಅಶ್ವಿನಿ ಈ ಧಾರಾವಾಹಿಗೆ ಹೆಚ್ಚು ಸಮಯ ನೀಡುತ್ತಿದ್ದಾರಂತೆ. ಅಲ್ಲದೆ ಇಂತಹ ವಿಭಿನ್ನ ಪಾತ್ರದ ಅವಕಾಶ ಸಿಕ್ಕಿದ್ದಕ್ಕೆ ಅಶ್ವಿನಿ ಫುಲ್ ಖುಷಿಯಾಗಿದ್ದಾರೆ.