ಮುಂಬೈ : ಬಾಲಿವುಡ್ ಚಿತ್ರರಂಗದ ಪ್ರತಿಭಾವಂತ ಗಾಯಕ ಅರ್ಮಾನ್ ಮಲಿಕ್ ಅವರು 2022 ಅನ್ನು 'ಯು' ಎಂಬ ಶೀರ್ಷಿಕೆಯೊಂದಿಗೆ ಪ್ರಾರಂಭಿಸಿದ್ದಾರೆ.
ಅರ್ಮಾನ್ ಮಲಿಕ್ ಅವರು ಇಂಗ್ಲಿಷ್ನ 'ಯು' ಎಂಬ ಶೀರ್ಷಿಕೆಯ ಆಲ್ಬಂ ಸಾಂಗ್ನೊಂದಿಗೆ ಹೊಸ ವರ್ಷವನ್ನು ಬರಮಾಡಿಕೊಂಡಿದ್ದಾರೆ. ಹಾಡಿನ ಕುರಿತು ಮಾಹಿತಿ ಹಂಚಿಕೊಂಡಿರುವ ಅರ್ಮಾನ್, 'ಯು' ವಿಶೇಷ ವ್ಯಕ್ತಿಯನ್ನು ಹುಡುಕುವ ಮತ್ತು ಅವರ ಆಲೋಚನೆಗಳಲ್ಲಿ ಮುಳುಗುವ ಭಾವನೆಯನ್ನು ಒಳಗೊಂಡಿದೆ.
ಕೆಲವೇ ದಿನಗಳಲ್ಲಿ ಪ್ರತಿಯೊಬ್ಬರು ಈ ಹಾಡನ್ನು ಕೇಳುತ್ತಾರೆ ಮತ್ತು ವಿಡಿಯೋವನ್ನು ವೀಕ್ಷಿಸುತ್ತಾರೆ ಎಂದು ತಿಳಿಸುತ್ತಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ ಎಂದಿದ್ದಾರೆ.
ಅರ್ಮಾನ್ ಮಲಿಕ್ ಹಾಡಿರುವ, ಅರಿಸ್ಟಾ ರೆಕಾರ್ಡ್ಸ್ (ಸೋನಿ ಮ್ಯೂಸಿಕ್ USA) ಪ್ರಸ್ತುತಪಡಿಸಿದ ಈ ಹಾಡನ್ನು ಜನವರಿ 7ರಂದು ಯೂಟ್ಯೂಬ್ ಮತ್ತು ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಜಾಗತಿಕವಾಗಿ ಬಿಡುಗಡೆಯಾಗಲಿದೆ.