ವಿಶ್ವವನ್ನೇ ಕಾಡುತ್ತಿರುವ ಕೊರೊನಾ ವೈರಸ್ ತಡೆಗಟ್ಟಲು ದೇಶವನ್ನು 21ದಿನ ಲಾಕ್ಡೌನ್ ಮಾಡಲಾಗಿದೆ. ಆದರೆ ಸಾರ್ವಜನಿಕರು ಮಾತ್ರ ಇದರ ಬಗ್ಗೆ ತಲೆಕೆಡಿಸಿಕೊಳ್ಳದೆ ಮನೆಯಿಂದ ಹೊರಗಡೆ ಬಂದು ಕೊರೊನಾ ವೈರಸ್ ಮೈ ಮೇಲೆ ಎಳೆದುಕೊಳ್ಳುತ್ತಿದ್ದಾರೆ. ದಯಮಾಡಿ ಮನೆಯಿಂದ ಹೊರ ಬಾರದಂತೆ ನಟ ಅರ್ಜುನ್ ಸರ್ಜಾ ಜನರಿಗೆ ಮನವಿ ಮಾಡಿದ್ದಾರೆ
ಈ ಕುರಿತು ವಿಡಿಯೋ ಮಾಡಿ ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದು, ಕೊರೊನಾ ವೈರಸ್ ದೇಶಾದ್ಯಂತ ಯಾವ ರೀತಿ ಹರಡುತ್ತಿದೆ ಎಂಬುದನ್ನು ಮಾಧ್ಯಮಗಳಲ್ಲಿ ನೋಡುತ್ತಿದ್ದೇವೆ. ಆದರೂ ಜನರು ಇದನ್ನು ಅರಿತುಕೊಳ್ಳದೆ ಮನೆಯಿಂದ ಹೊರ ಹೋಗುತ್ತಿದ್ದಾರೆ. ನಿಮ್ಮ ಆರೋಗ್ಯದ ದೃಷ್ಟಿಯಿಂದ ಯಾರೂ ಮನೆಯಿಂದ ಹೊರ ಹೋಗಬೇಡಿ ಎಂದು ಮನವಿ ಮಾಡಿಕೊಂಡರು.
ಎಲ್ಲಾ ನಟರುತಮ್ಮ ಅಭಿಮಾನಿಗಳು, ಸಾರ್ವಜನಿಕರು ಮನೆಯಿಂದ ಹೊರಗಡೆ ಬಾರದ ಹಾಗೆ ಸಾಮಾಜಿಕ ಜಾಲತಾಣಗಳಮೂಲಕ ಜಾಗೃತಿ ಮೂಡಿಸಬೇಕು. ಈ ಮೂಲಕ ಸರ್ಕಾರದ ಜೊತೆ ನಾವೆಲ್ಲ ಕೈಜೊಡಿಸಿ ಕೊರೊನಾ ವಿರುದ್ಧ ಹೋರಾಡಬೇಕು ಎಂದು ವಿಡಿಯೋದಲ್ಲಿ ಮನವಿ ಮಾಡಿದ್ದಾರೆ.