ETV Bharat / sitara

ಏಪ್ರಿಲ್​​ನಲ್ಲಿ 'ಅರ್ಜುನ್ ಗೌಡ'ನಾಗಿ ತೆರೆ ಮೇಲೆ ಮಿಂಚಲು ರೆಡಿಯಾದ ಡೈನಾಮಿಕ್ ಪ್ರಿನ್ಸ್

ನಟ‌ ಪ್ರಜ್ವಲ್ ದೇವರಾಜ್ ಅಭಿನಯದ 'ಅರ್ಜುನ್ ಗೌಡ' ಸಿನಿಮಾ ಶೂಟಿಂಗ್ ಸಂಪೂರ್ಣ ಮುಕ್ತಾಯಗೊಂಡಿದ್ದು, ಏಪ್ರಿಲ್​ ಅಥವಾ ಮೇ ತಿಂಗಳಿನಲ್ಲಿ ತೆರೆಗೆ ಬರುವುದಕ್ಕೆ ಸಜ್ಜಾಗಿದೆ.

author img

By

Published : Mar 10, 2021, 6:30 PM IST

Arjun Gowda cinema release in April
ಏಪ್ರಿಲ್​​ನಲ್ಲಿ 'ಅರ್ಜುನ್ ಗೌಡ'ನಾಗಿ ತೆರೆ ಮೇಲೆ ಮಿಂಚಲು ರೆಡಿಯಾದ ಡೈನಾಮಿಕ್ ಪ್ರಿನ್ಸ್

'ಡೈನಾಮಿಕ್ ಪ್ರಿನ್ಸ್' ಪ್ರಜ್ವಲ್ ದೇವರಾಜ್-ಪ್ರಿಯಾಂಕಾ ತಿಮ್ಮೇಶ್ ಜೊತೆಯಾಗಿ ನಟಿಸಿರುವ 'ಅರ್ಜುನ್ ಗೌಡ' ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿದ್ದು, ಏಪ್ರಿಲ್​ ಅಥವಾ ಮೇ ತಿಂಗಳಿನಲ್ಲಿ ತೆರೆಗೆ ಬರುವುದಕ್ಕೆ ಸಿದ್ಧವಾಗಿದೆ.

ಏಪ್ರಿಲ್​​ನಲ್ಲಿ 'ಅರ್ಜುನ್ ಗೌಡ' ಸಿನಿಮಾ ಬಿಡುಗಡೆ ಸಾಧ್ಯತೆ

ಪ್ರಜ್ವಲ್ ದೇವರಾಜ್​ ಅವರ ಇನ್ಸ್‌ಪೆಕ್ಟರ್‌ ವಿಕ್ರಂ ಸಿನಿಮಾದ ಸಕ್ಸಸ್ ಬಳಿಕ ಬಿಡುಗಡೆಯಾಗುತ್ತಿರುವ ಎರಡನೇ ಚಿತ್ರ ಇದು. ಈ ಚಿತ್ರದಲ್ಲಿ ಪ್ರಜ್ವಲ್ ರಫ್ ಆ್ಯಂಡ್‌ ಟಫ್​ ಆಗಿ ಕಾಣಿಸಿಕೊಂಡಿದ್ದಾರೆ. ಕಾಮಿಡಿ ಸಿನಿಮಾಗಳನ್ನು ಮಾಡಿ ಗಮನ‌ ಸೆಳೆದಿದ್ದ ನಿರ್ದೇಶಕ ಲಕ್ಕಿ ಶಂಕರ್, ಅರ್ಜುನ್ ಗೌಡ ಚಿತ್ರಕ್ಕೆ ಕಥೆ-ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ಆ್ಯಕ್ಷನ್, ಕಟ್ ಹೇಳಿದ್ದಾರೆ. ಬೆಂಗಳೂರು, ಮುಂಬೈ, ಚೆನೈ ಹಾಗೂ ಕೊಲ್ಕತ್ತ ನಗರಗಳ ಪ್ರಸಿದ್ದ ಸ್ಟುಡಿಯೋಗಳಲ್ಲಿ ಈ ಚಿತ್ರದ ರೆಕಾರ್ಡಿಂಗ್ ‌ನಡೆದಿರುವುದು ವಿಶೇಷ.

ಜೈ ಆನಂದ್ ಈ ಸಿನಿಮಾಕ್ಕೆ ಕ್ಯಾಮರಾ ವರ್ಕ್ ಮಾಡಿದ್ದಾರೆ. ಸಾಹಸ ನಿರ್ದೇಶಕ ಮಾಸ್ ಮಾದ ಈ ಚಿತ್ರದಲ್ಲಿ ಏಳು ಸಾಹಸ ಸನ್ನಿವೇಶಗಳನ್ನು ಕಂಪೋಸ್ ಮಾಡಿದ್ದಾರೆ. ಬಾಲಿವುಡ್​​ನ ರಾಹುಲ್ ದೇವ್, ಸ್ಪರ್ಶ ರೇಖಾ, ಸಾಧುಕೋಕಿಲ, ಕಡ್ಡಿಪುಡಿ ಚಂದ್ರು, ದೀಪಕ್ ಶೆಟ್ಟಿ, ದಿನೇಶ್ ಮಂಗಳೂರು, ಶೋಭಿತ್, ಜೀವನ್, ಹನುಮಂತೇ ಗೌಡ, ಮೋಹನ್ ಜುನೇಜ ಮುಂತಾದವರು ಈ ಚಿತ್ರದ ತಾರಾ ಬಳಗದಲ್ಲಿದ್ದಾರೆ.

ಇದನ್ನೂ ಓದಿ: ಚಿರಂಜೀವಿ ಸರ್ಜಾ ಅಭಿನಯದ ರಣಂ ಚಿತ್ರ ಬಿಡುಗಡೆ ಮುಹೂರ್ತ ಫಿಕ್ಸ್!

ಅದ್ದೂರಿ ಚಿತ್ರಗಳ ನಿರ್ಮಾಣಕ್ಕೆ ಹೆಸರಾದ ನಿರ್ಮಾಪಕ ರಾಮು, ಅರ್ಜುನ್ ಗೌಡ ಚಿತ್ರವನ್ನು ದುಬಾರಿ ವೆಚ್ಚದಲ್ಲಿ ನಿರ್ಮಿಸಿದ್ದು, ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ರಿಲೀಸ್ ಆಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.