ನಿರ್ದೇಶಕ ಪವನ್ ಒಡೆಯರ್ಗೆ ಇಂದು ವಿಶೇಷ ದಿನ. ಯಾಕಂದ್ರೆ, ಪತ್ನಿ ಅಪೇಕ್ಷಾ ಪುರೋಹಿತ್ ಬೆಳಿಗ್ಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಮೂಲಕ ಪವನ್ಗೆ ಜನ್ಮದಿನದ ಭರ್ಜರಿ ಗಿಫ್ಟ್ ಸಿಕ್ಕಿದೆ. ತನ್ನ ಜನ್ಮದಿನದಂದೇ ತಂದೆಯಾಗಿರುವ ಖುಷಿಯ ವಿಚಾರವನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಓದಿ: ಮೊದಲನೇ ಮಗು ನಿರೀಕ್ಷೆಯಲ್ಲಿ ನಿರ್ದೇಶಕ ಪವನ್ ಒಡೆಯರ್ ದಂಪತಿ
ಕಳೆದ ತಿಂಗಳು ಈ ಜೋಡಿ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಓದಿ: ಪವನ್ ಒಡೆಯರ್ ಪತ್ನಿ ಅಪೇಕ್ಷಾ ಪುರೋಹಿತ್ ಬೇಬಿ ಬಂಪ್ ಫೋಟೋ ಶೂಟ್
ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಪವನ್, 'ನನ್ನ ಹುಟ್ಟುಹಬ್ಬಕ್ಕೆ ಅದ್ಭುತ ಉಡುಗೊರೆ ದೊರೆತಿದೆ. ನಾನು ಗಂಡು ಮಗುವಿನ ತಂದೆಯಾಗಿದ್ದೇನೆ. ಜೈ ಚಾಮುಂಡೇಶ್ವರಿ' ಎಂದಿದ್ದಾರೆ.