'ಭಾಗಮತಿ' ಸಿನಿಮಾ ನಂತರ ಸಿನಿಮಾಗಳಿಂದ ದೂರವಿದ್ದ ಅನುಷ್ಕಾ ಶೆಟ್ಟಿ ಇದೀಗ 'ನಿಶ್ಯಬ್ಧಂ' ಚಿತ್ರದ ಮೂಲಕ ವಾಪಸಾಗುತ್ತಿದ್ದಾರೆ. ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ವಿಶೇಷ ಚೇತನ ಯುವತಿ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನು ಇಷ್ಟು ವರ್ಷಗಳ ಗ್ಯಾಪ್ನಲ್ಲಿ ಅನುಷ್ಕಾ ತೂಕ ಕೂಡಾ ಕಡಿಮೆ ಮಾಡಿಕೊಂಡು ಬಹಳ ಸ್ಲಿಮ್ ಆಗಿದ್ದಾರೆ.
- " class="align-text-top noRightClick twitterSection" data="">
ಇನ್ನು 'ನಿಶ್ಯಬ್ಧಂ' ಚಿತ್ರತಂಡ ಅನುಷ್ಕಾ ಫಸ್ಟ್ಲುಕ್ ಬಿಡುಗಡೆ ಮಾಡಿದೆ. ಚಿತ್ರದಲ್ಲಿ ಅನುಷ್ಕಾ ಸಾಕ್ಷಿ ಎಂಬ ಪಾತ್ರದಲ್ಲಿ ನಟಿಸುತ್ತಿದ್ದು 'ಸಾಕ್ಷಿ A MUTE ARTIST' ಎಂಬ ಕ್ಯಾಪ್ಷನ್ ನೀಡಲಾಗಿದೆ. ಪೋಸ್ಟರ್ನಲ್ಲಿ ಅನುಷ್ಕಾ ಪೇಂಟಿಂಗ್ ಮಾಡುತ್ತಿದ್ದಾರೆ. ಹೇಮಂತ್ ಮಧುರ್ಕರ್ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಅಂಜಲಿ, ಶಾಲಿನಿ ಪಾಂಡೆ, ಸುಬ್ಬರಾಜು, ಅವಸರಾಲ ಶ್ರೀನಿವಾಸ್ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಹಾಲಿವುಡ್ ನಟ ಮ್ಯಾಡಸನ್ ಕೂಡಾ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆ ಜೊತೆ ಸೇರಿ ಕೋನ ಫಿಲ್ಮ್ ಕಾರ್ಪೊರೇಷನ್ ಈ ಸಿನಿಮಾವನ್ನು ನಿರ್ಮಿಸುತ್ತಿದೆ. ಈ ಮೊದಲು ಬಿಡುಗಡೆಯಾಗಿದ್ದ ಚಿತ್ರದ ಪೋಸ್ಟರ್ ಕೂಡಾ ಎಲ್ಲರ ಗಮನ ಸೆಳೆದಿತ್ತು.