ನಟ ವಿಶಾಲ್ ಹಾಗೂ ಅನಿಶಾ ಮದುವೆ ಕ್ಯಾನ್ಸಲ್ ಆಗಿದೆ ಎನ್ನುವ ರೂಮರ್ ಕಳೆದ ಒಂದು ವಾರದ ಹಿಂದೆ ಜೋರಾಗಿ ಕೇಳಿ ಬಂದಿತ್ತು. ಸಹಜವಾಗಿಯೇ ಈ ಸುದ್ದಿ ವಿಶಾಲ್ ಅಭಿಮಾನಿಗಳಿಗೆ ಆಘಾತ ನೀಡಿತ್ತು. ಈ ಬಗ್ಗೆ ಈ ಜೋಡಿ ಎಲ್ಲಿಯೂ ತುಟಿ ಬಿಚ್ಚಿರಲಿಲ್ಲ. ಆದರೆ, ಅನಿಶಾ ತನ್ನ ಭಾವಿಪತಿಗೆ ಬರ್ತ್ಡೇ ವಿಶ್ ಮಾಡಿ, ಅಂತೆ-ಕಂತೆಗಳಿಗೆ ಎಳ್ಳು-ನೀರು ಬಿಟ್ಟಿದ್ದಾರೆ.
ನಿನ್ನೆ 43ನೇ ವಸಂತಕ್ಕೆ ಕಾಲಿಟ್ಟ ವಿಶಾಲ್ಗೆ ತಮ್ಮ ಇನ್ಸ್ಟಾಗ್ರಾಂನಲ್ಲಿ ವಿಶ್ ಮಾಡಿದ್ದಾರೆ ಅನಿಶಾ. ತಮ್ಮಿಬ್ಬರ ಸುಂದರವಾದ ಫೋಟೊವೊಂದನ್ನು ಹಂಚಿಕೊಂಡು, ತಾರೆಗೆ ಹುಟ್ಟುಹಬ್ಬದ ಶುಭಾಶಯ. ಮಿಂಚಲೆಂದೆ ನೀವು ಜನಸಿದ್ದು. ನಿಮ್ಮ ಸೌಂದರ್ಯವನ್ನು ಎಂದೆಂದಿಗೂ ನಾ ಪ್ರೀತಿಸುವೆ. ನಿನ್ನ ಮೇಲೆ ನನಗೆ ನಂಬಿಕೆ ಇದೆ. ಎಂದೆಂದಿಗೂ ನಿನ್ನೆ ಪ್ರೀತಿಸುವೆ ಎಂದು ಬರೆದುಕೊಂಡಿದ್ದಾರೆ.
ಇನ್ನು ಕಳೆದ ಕೆಲ ತಿಂಗಳುಗಳ ಹಿಂದೆ ಆಂಧ್ರದ ಅನಿಶಾ ಜತೆ ವಿಶಾಲ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಶೀಘ್ರದಲ್ಲೇ ಈ ಜೋಡಿ ಹಸೆಮಣೆ ಏರಲಿದೆ. ಆದರೆ, ಕಳೆದ ವಾರ ಇವರಿಬ್ಬರ ಮದುವೆ ರದ್ದುಗೊಂಡಿದೆ ಎನ್ನುವ ಗುಲ್ಲು ಕೇಳಿ ಬಂದಿತ್ತು.