ಸಲ್ಮಾನ್ ಖಾನ್ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಆಗ್ತಾನೆ ಇರ್ತಾರೆ. ತಮ್ಮ ಸಿನಿಮಾ ಪ್ರಚಾರದಲ್ಲಿರಬಹುದು ಅಥವಾ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳುವುದರಲ್ಲಿರಬಹುದು. ಆದ್ರೆ ಈ ಬಾರಿ ಸಲ್ಮಾನ್ ಖಾನ್ ವೈರಲ್ ಆಗ್ತಿರೋದು ಆ ಒಂದು ವಿಚಾರದಿಂದ.
ಸಲ್ಲು ಇತ್ತೀಚೆಗೆ ಅಭಿಮಾನಿಯಬ್ಬನ ಮೊಬೈಲ ಅನ್ನು ಸಿಟ್ಟಿನಿಂದ ಕಿತ್ತುಕೊಂಡಿದ್ದಾರೆ. ಗೋವಾ ವಿಮಾನ ನಿಲ್ದಾಣದಲ್ಲಿ ಸಲ್ಮಾನ್ಖಾನ್ ಅವರ ಅನುಮತಿ ಪಡೆಯದೇ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಯತ್ನಿಸಿದ ಅಭಿಮಾನಿಯ ಫೋನ್ ಅನ್ನು ಕಸಿದುಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
-
Just saw Salman Khan at Goa International Aiport snatching a mobile phone from a fan while clicking a picture, such people do not deserve to be called stars.
— ahraz mulla (@ahry95) January 28, 2020 " class="align-text-top noRightClick twitterSection" data="
Your reaction?@BeingSalmanKhan pic.twitter.com/h6b25MQ8uC
">Just saw Salman Khan at Goa International Aiport snatching a mobile phone from a fan while clicking a picture, such people do not deserve to be called stars.
— ahraz mulla (@ahry95) January 28, 2020
Your reaction?@BeingSalmanKhan pic.twitter.com/h6b25MQ8uCJust saw Salman Khan at Goa International Aiport snatching a mobile phone from a fan while clicking a picture, such people do not deserve to be called stars.
— ahraz mulla (@ahry95) January 28, 2020
Your reaction?@BeingSalmanKhan pic.twitter.com/h6b25MQ8uC
ಈ ವಿಡಿಯೋ ವೈರಲ್ ಆದ ಬಳಿದ ಸೆಲ್ಫಿ ಕ್ಲಿಕ್ಕಿಸಿಕೊಂಡ ಆ ವ್ಯಕ್ತಿ ಯಾರೆಂದು ವಿಚಾರಿಸಲಾಗಿದೆ. ಆ ವ್ಯಕ್ತಿ ಗೋವಾ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುವ ಉದ್ಯೋಗಿ ಎಂದು ತಿಳಿದು ಬಂದಿದೆ.
ಸಲ್ಮಾನ್ ರಾಧೆ ಸಿನಿಮಾ ಶೂಟಿಂಗ್ ಮುಗಿಸಿಕೊಂಡು ಗೋವಾ ಏರ್ಪೋರ್ಟ್ನಲ್ಲಿ ನಡೆದು ಬರುವಾಗ ಈ ಘಟನೆ ನಡೆದಿದೆ. ರಾಧೆ ಸಿನಿಮಾವನ್ನು ಡ್ಯಾನ್ಸ್ ಕೊರಿಯೋಗ್ರಾಫರ್ ಪ್ರಭುದೇವ್ ನಿರ್ದೇಶನ ಮಾಡುತ್ತಿದ್ದಾರೆ.