ಹೈದರಾಬಾದ್: ತಮ್ಮ ದೈನಂದಿನ ಜೀವನದ ಬಗ್ಗೆ ಜಾಲತಾಣದಲ್ಲಿ ನೆಟಿಜನ್‌ಗಳೊಂದಿಗೆ ಆಗಾಗ್ಗೆ ಹರಟೆ ಹೊಡೆಯುವ ಟಾಲಿವುಡ್ ನಿರೂಪಕಿ, ನಟಿ ಅನಸೂಯ ಭಾರದ್ವಾಜ್ ನೆಟಿಜನ್ಗಳ ಬಳಿ ಕ್ಷಮೆ ಯಾಚಿಸಿದ್ದಾರೆ. ಏಕೆ ಗೊತ್ತಾ?
ಬುಧವಾರ ಬೆಳಗ್ಗೆ ದೇಶದ ಎಲ್ಲ ಜನರಿಗೆ ಗಣರಾಜ್ಯೋತ್ಸವದ ಶುಭಾಶಯಗಳನ್ನು ಕೋರಿದ್ದ ನಟಿ ಅನಸೂಯ, 'ವಂದೇಮಾತರಂ' ಹಾಡುವ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದರು. ಈ ವಿಡಿಯೋ ನೋಡಿದ ನೆಟಿಜನ್ಸ್ ತರಹೇವಾರಿ ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಈ ನಟಿಯ ಬ್ರಾ ಗಾತ್ರಕ್ಕೂ ದೇವರಿಗೂ ಏನು ಸಂಬಂಧ!? ಅವಹೇಳನಕಾರಿ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿದ ಶ್ವೇತಾ ತಿವಾರಿ
"ಮೇಡಂ, ಇವತ್ತು ಸ್ವಾತಂತ್ರ್ಯ ದಿನವಲ್ಲ... ಗಣರಾಜ್ಯೋತ್ಸವ ದಿನ... ನೀವು ತೊಟ್ಟಿರುವ ಶರ್ಟ್ ಮೇಲೆ ಮಹಾತ್ಮ ಗಾಂಧಿಯವರ ಚಿತ್ರವಿದೆ... ಗಾಂಧಿಗೂ ಗಣರಾಜ್ಯೋತ್ಸವಕ್ಕೂ ಏನು ಸಂಬಂಧ?", "ಏಕೆ ಕುಳಿತುಕೊಂಡು ಹಾಡುತ್ತಿದ್ದೀರಿ? ನಿಮಗೆ ಹಾಗೆ ಹಾಡಲೇಬೇಕು ಅಂತ ಅನ್ನಿಸಿದರೆ ಕೆಳಗಿಳಿದು ಎದ್ದು ನಿಂತು ಈ ಹಾಡನ್ನು ಹಾಡಿ...ಕ್ಷಮೆ ಇರಲಿ'' ಎಂದು ನೆಟಿಜನ್‌ಗಳಿಂದ ಸರಣಿ ಮಾರ್ಮಿಕ ಕಾಮೆಂಟ್‌ಗಳು ಬಂದಿವೆ.
ಆ ಕಾಮೆಂಟ್‌ಗಳಿಗೆ ಪ್ರತಿಕ್ರಿಯಿಸಿದ ಅನಸೂಯ, "ನೀವು ನನ್ನನ್ನು ಕ್ಷಮೆ ಕೇಳಬೇಕಾಗಿಲ್ಲ. ಎದ್ದು ನಿಂತು ಹಾಡನ್ನು ಹಾಡದಿರುವುದಕ್ಕೆ ಹಲವರು ಬೇಸರ ವ್ಯಕ್ತಪಡಿಸಿದ್ದಾರೆ. ಆ ಬಗ್ಗೆ ನನಗೆ ನೋವಿದೆ. ನನ್ನನ್ನು ನೀವು ಕ್ಷಮಿಸಬೇಕು. ''ರಾಷ್ಟ್ರಗೀತೆಯಾದ 'ಜನಗಣಮನ'ಕ್ಕೆ ನಾವು ಎದ್ದು ನಿಲ್ಲೋಣ.. ದೇಶದ ಬಗ್ಗೆ ನಮ್ಮ ಗೌರವವನ್ನು ತೋರಿಸೋಣ.. ನನ್ನ ದೇಶದ ಬಗ್ಗೆ ನನಗೆ ಗೌರವವಿದೆ...'' ಎಂದು ಅವರು ಉತ್ತರ ಸಹ ನೀಡಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಆ ಬಳಿಕವೂ ನೆಗೆಟಿವ್ ಕಾಮೆಂಟ್‌ಗಳು ನಿಲ್ಲದ ಕಾರಣ ತಾಳ್ಮೆ ಕಳೆದುಕೊಂಡ ಅನಸೂಯ, "ನಿಮ್ಮ ಗೋಳಿಗೆ ನಾನು ಏನು ಹೇಳಬೇಕು? ನನಗೆ ಯಾರ ಭಯವೂ ಇಲ್ಲ. ಅದು ಸಹ ರಾಷ್ಟ್ರಗೀತೆ.. ಗಾಂಧಿಗೂ ಸಂವಿಧಾನಕ್ಕೂ ಏನು ಸಂಬಂಧ?, ಜನಗಣಮನ ರಾಷ್ಟ್ರಗೀತೆಯಾದರೆ... ವಂದೇ ಮಾತರಂ ಏನು? ಆಗಸ್ಟ್ 15, 1947 ಸ್ವಾತಂತ್ರ್ಯ ದಿನ ಮತ್ತು ಜನವರಿ 26, 1950 ಗಣರಾಜ್ಯ ದಿನ. ಸ್ವಾತಂತ್ರ್ಯ ದಿನದ ಬಳಿಕ ದೇಶ ಗಣರಾಜ್ಯಗೊಂಡಿದೆ. ಸ್ವಲ್ಪ ವಿವೇಕದಿಂದ ಮಾತನಾಡಿ ಎಂದು ತೀಕ್ಷ್ಣವಾಗಿ ಉತ್ತರಿಸಿದರು.
ನಟಿ ಅನಸೂಯ ಇತ್ತೀಚೆಗಷ್ಟೇ ತಮ್ಮ ಇನ್ಸ್ಟಾ ಫಾಲೋವರ್ಸ್ ಜೊತೆಗೆ ಪ್ರಶ್ನೋತ್ತರ ಕಾರ್ಯಕ್ರಮ ನಡೆಸಿದ್ದಾಗಲೂ ಇದೇ ತರಹದ ಪ್ರಶ್ನೆಗಳನ್ನು ಕೇಳಲಾಗಿತ್ತು. ಆವಾಗಲೂ ಮಾತಲ್ಲೇ ಪೆಟ್ಟು ಕೊಟ್ಟಿದ್ದರು. ‘ಪುಷ್ಪ: ದಿ ರೈಸ್’ ಚಿತ್ರದಲ್ಲಿ ಅನಸೂಯ ಲೇಡಿ ವಿಲನ್ ಪಾತ್ರ ಮಾಡಿದ್ದು, ಜಾಲತಾಣದಲ್ಲಿ ಈ ಬಗ್ಗೆ ಟ್ರೋಲ್ ಮಾಡಲಾಗಿತ್ತು.