ETV Bharat / sitara

ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ‘ಅಮೃತಮತಿ’ ಆಯ್ಕೆ - ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

ಪ್ರೊ. ಬರಗೂರು ರಾಮಚಂದ್ರಪ್ಪ ಅವರ ‘ಅಮೃತಮತಿ’ ಸಿನಿಮಾ ಅಟ್ಲಾಂಟ ದೇಶದಲ್ಲಿ ನಡೆಯುವ ಸ್ಪರ್ಧಾತ್ಮಕ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆ ಆಗಿದೆ.

ಸ್ಪರ್ಧಾತ್ಮಕ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ‘ಅಮೃತಮತಿ’ ಆಯ್ಕೆ

author img

By

Published : Jul 13, 2020, 9:02 AM IST

ಹಿರಿಯ ಸಾಹಿತಿ ಹಾಗೂ ಚಿತ್ರ ನಿರ್ದೇಶಕ ಪ್ರೊ. ಬರಗೂರು ರಾಮಚಂದ್ರಪ್ಪ ಅವರ ‘ಅಮೃತಮತಿ’ ಸಿನಿಮಾ ಈಗಾಗಲೇ ಕೆಲವು ವಿದೇಶಿ ಪುರಸ್ಕಾರಗಳಿಗೆ ಭಾಜನವಾಗಿದೆ. ಸದ್ಯ ಅಮೆರಿಕದ ಅಟ್ಲಾಂಟದಲ್ಲಿ ನಡೆಯುವ ಸ್ಪರ್ಧಾತ್ಮಕ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ‘ಅಮೃತಮತಿ’ ಆಯ್ಕೆ ಆಗಿದ್ದು, ಈ ಚಿತ್ರೋತ್ಸವ ಜುಲೈ 29ರಿಂದ ಆಗಸ್ಟ್ 12ರವರೆಗೆ ನಡೆಯಲಿದೆ.

ನೋಯ್ಡಾದಲ್ಲಿ ನಡೆದ 4ನೇ ಭಾರತೀಯ ವಿಶ್ವ ಸಿನಿಮಾ ಉತ್ಸವದಲ್ಲಿ ನಟಿ ಹರಿಪ್ರಿಯಾಗೆ ಅತ್ಯುತ್ತಮ ನಟನೆ ಪ್ರಶಸ್ತಿ ಲಭಿಸಿದೆ. ಇನ್ನು ಮಾರ್ಚ್​ 8ರಂದು 'ಅಮೃತಮತಿ’ ಸಿನಿಮಾ 4ನೇ ಇಂಡಿಯನ್ ವರ್ಲ್ಡ್ ಫಿಲ್ಮ್ ಫೆಸ್ಟಿವಲ್ ನೋಯ್ಡಾದಲ್ಲಿ ಪ್ರದರ್ಶನ ಕಂಡಿತ್ತು.

ಸ್ಪರ್ಧಾತ್ಮಕ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ‘ಅಮೃತಮತಿ’ ಆಯ್ಕೆ
ಸ್ಪರ್ಧಾತ್ಮಕ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ‘ಅಮೃತಮತಿ’ ಆಯ್ಕೆ

13ನೇ ಶತಮಾನದಲ್ಲಿ ಜನ್ನ ರಚಿಸಿದ ‘ಯಶೋಧರ ಚರಿತೆ’ ಆಧಾರಿತ ಸಿನಿಮಾ ಈ ‘ಅಮೃತಮತಿ’. ಪ್ರೊ. ಬರಗೂರು ರಾಮಚಂದ್ರಪ್ಪ ಅವರು ಐತಿಹಾಸಿಕ ಕಾದಂಬರಿಗೆ ಮರು ವ್ಯಾಖ್ಯಾನ ಹಾಗೂ ಮರು ಸೃಷ್ಟಿ ಮಾಡಿ ತೆರೆಗೆ ತಂದಿದ್ದಾರೆ. ಭೋಗ-ಸುಖ, ಬಂಧನ - ಬಿಡುಗಡೆ, ಪ್ರಭುತ್ವ-ಜನತೆ ವೈರುಧ್ಯಗಳ ವಿಚಾರವನ್ನು ತೆರೆ ಮೇಲೆ ತಂದಿದ್ದಾರೆ ‘ಅಮೃತಮತಿ'.

ಎಲ್.ಎಲ್.ಸಿ ಪುಟ್ಟಣ್ಣ ಅವರು ಇಂಚರ ಪುಟ್ಟಣ್ಣ ಪ್ರೊಡಕ್ಷನ್ ಅಡಿ ಈ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ. ಅಮೃತಮತಿ ಆಗಿ ಹರಿಪ್ರಿಯಾ ನಟಿಸಿದ್ದು, ಕಿಶೋರ್, ತಿಲಕ್, ಸುಪ್ರಿಯ ರಾವ್, ಅಂಬರೀಶ್ ಸಾರಂಗಿ, ಸುಂದರ್ ರಾಜ್, ಪ್ರಮೀಳಾ ಜೋಷಾಯ್​, ವತ್ಸಲಾ ಮೋಹನ್ ಹಾಗೂ ಇತರರು ಬಣ್ಣ ಹಚ್ಚಿದ್ದಾರೆ. ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಪ್ರೊ. ಬರಗೂರು ರಾಮಚಂದ್ರಪ್ಪ ಮಾಡಿದ್ದಾರೆ. ಸುರೇಶ್ ಅರಸ್ ಸಂಕಲನ ಮಾಡಿದ್ದು, ನಾಗರಾಜ ಅಡ್ವಾಣಿ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿದ್ದಾರೆ. ಶಮಿತಾ ಮಲ್ನಾಡ್ ಸಂಗೀತ ನಿರ್ದೇಶನಕ್ಕೆ ರಾಜೇಶ್ ಕೃಷ್ಣ, ಜೋಗಿ ಸುನಿತಾ, ಕನ್ನಡ ಕೋಗಿಲೆ ಖಾಸಿಮ್ ಕಂಠದಾನ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.