ಹಲವು ಸಿನಿಮಾಗಳಲ್ಲಿ ಭಿಕ್ಷುಕನ ಪಾತ್ರ, ಕುಡುಕನ ಪಾತ್ರ ಮಾಡಿ ಕನ್ನಡಿಗರನ್ನು ನಕ್ಕು ನಲಿಸಿದ್ದ ಬೀರಾದಾರ್ ಬಿಗ್ ಬಿ ಅಮಿತಾಬ್ ಬಚ್ಚನ್ರ ಮನ ಗೆದ್ದಿದ್ದಾರೆ.
ಹಾಸ್ಯ ನಟ ವೈಜನಾಥ್ ಬಿರಾದಾರ್ಗೆ ಗಿರೀಶ್ ಕಾಸರವಳ್ಳಿ ಅವರ ನಿರ್ದೇಶನದ ‘ಕನಸೆಂಬ ಕುದುರೆಯೇರಿ’ ನಟನೆಗಾಗಿ ಸ್ಪೇನ್ನ ಮ್ಯಾಡ್ರಿಡ್ನಲ್ಲಿ ನಡೆದ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ದೊರೆತಿದೆ.
ಈ ವಿಷಯ ತಿಳಿದ ಅಮಿತಾಬ್ ಬಿರಾದಾರ್ಗೆ ಕರೆ ಮಾಡಿ ‘ಭಾರತೀಯರೊಬ್ಬರಿಗೆ ಈ ಪ್ರಶಸ್ತಿ ದೊರಕಿದ್ದು, ನಮಗೆ ಹೆಮ್ಮೆ’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಬಿರಾದಾರ್ ಸುಮಾರು 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಎಲ್ಲರನ್ನು ರಂಜಿಸಿದ್ದಾರೆ. ಸದ್ಯ ಇವರ 'ಹೊಡಿ ಒಂಬತ್' ಎಂಬ ಸಿನಿಮಾಕ್ಕೆ ಬಣ್ಣ ಹಚ್ಚುತ್ತಿದ್ದಾರೆ.