ETV Bharat / sitara

79ನೇ ವಸಂತಕ್ಕೆ ಕಾಲಿಟ್ಟ ಬಾಲಿವುಡ್‌ ಬಿಗ್ ಬಿ: ಕೇಕ್ ಕತ್ತರಿಸಿ ಅಭಿಮಾನಿಗಳ ಸಂಭ್ರಮ

ಬಿಗ್ ಬಿ ಒಬ್ಬ ನಟನಷ್ಟೇ ಅಲ್ಲ, ಅವರು ತಮ್ಮ ಹಲವು ಚಲನಚಿತ್ರಗಳಿಗೆ ಹಾಡುಗಳನ್ನೂ ಹಾಡಿದ್ದಾರೆ. ಅನೇಕ ಸರ್ಕಾರಿ ಯೋಜನೆಗಳಿಗೆ ಜಾಹೀರಾತು ನೀಡುವ ಮೂಲಕ ಅದರ ಯಶಸ್ಸಿಗೂ ಕಾರಣೀಭೂತರಾಗಿದ್ದಾರೆ. ಜೊತೆಗೆ ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, 1984ರಲ್ಲಿ ಪದ್ಮಶ್ರೀ, 2001ರಲ್ಲಿ ಪದ್ಮಭೂಷಣ ಹಾಗೂ 2015ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ಪಡೆದಿದ್ದಾರೆ.

ಅಮಿತಾಬ್ ಬಚ್ಚನ್
ಅಮಿತಾಬ್ ಬಚ್ಚನ್
author img

By

Published : Oct 11, 2021, 7:52 AM IST

ಮುಂಬೈ: ಇಂದು ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಅವರಿಗೆ 79ನೇ ಹುಟ್ಟುಹಬ್ಬದ ಸಡಗರ. ನೆಚ್ಚಿನ ನಟನ ಜನ್ಮದಿನಾಚರಿಸಲು ಅವರ ಜಲ್ಸಾ ನಿವಾಸದ ಹೊರಗಡೆ ಕಳೆದ ರಾತ್ರಿಯೇ ಜಮಾಯಿಸಿದ ಅಭಿಮಾನಿಗಳು, ಕೇಕ್ ಕತ್ತರಿಸಿ ಹಾಡುಗಳನ್ನು ಹಾಡುತ್ತಾ ಖುಷಿಪಟ್ಟರು.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅಭಿಮಾನಿ ಸೆಜಲ್, "ನಾವು ಅಮಿತಾಬ್ ಬಚ್ಚನ್ ಜನ್ಮದಿನವನ್ನು ಆಚರಿಸಲು ಭಿವಂಡಿಯಿಂದ ಇಲ್ಲಿಗೆ ಬಂದಿದ್ದೇವೆ. ಅವರು ತಮ್ಮ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಂಡಿರಲಿ. ಅವರ ಅಭಿಮಾನಿಯಾಗಿರುವುದು ನಿಜಕ್ಕೂ ಅದೃಷ್ಟ. ಸಿಲ್ಸಿಲಾ, ಯಾರಾನಾ, ಕಭಿ ಖುಷಿ ಕಭಿ ಗಮ್, ಡಾನ್ ನನ್ನ ನೆಚ್ಚಿನ ಸಿನಿಮಾಗಳು' ಎಂದು ಹರ್ಷ ವ್ಯಕ್ತಪಡಿಸಿದರು.

ಅಮಿತಾಬ್ ಬಚ್ಚನ್
ಅಮಿತಾಬ್ ಬಚ್ಚನ್ ನಿವಾಸದ ಹೊರಗೆ ಹುಟ್ಟುಹಬ್ಬ ಆಚರಿಸಿದ ಅಭಿಮಾನಿಗಳು

ಅಮಿತಾಬ್​ ಅಕ್ಟೋಬರ್ 11, 1942 ರಂದು ಅಲಹಾಬಾದ್​ನಲ್ಲಿ ಸಾಮಾಜಿಕ ಕಾರ್ಯಕರ್ತೆ ತೇಜಿ ಬಚ್ಚನ್ ಮತ್ತು ಪ್ರಖ್ಯಾತ ಹಿಂದಿ ಕವಿ ಹರಿವಂಶ್ ರೈ ಬಚ್ಚನ್ ದಂಪತಿಗೆ ಜನಿಸಿದರು. ಬಿಗ್ ಬಿ ಒಬ್ಬ ನಟನಷ್ಟೇ ಅಲ್ಲ, ಅವರು ತಮ್ಮ ಹಲವು ಚಲನಚಿತ್ರಗಳಿಗೆ ಹಾಡುಗಳನ್ನೂ ಹಾಡಿದ್ದಾರೆ. ಅನೇಕ ಸರ್ಕಾರಿ ಯೋಜನೆಗಳಿಗೆ ಜಾಹೀರಾತು ನೀಡುವ ಮೂಲಕ ಅದರ ಯಶಸ್ಸಿಗೂ ಕಾರಣೀಭೂತರಾಗಿದ್ದಾರೆ. ಜೊತೆಗೆ ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, 1984 ರಲ್ಲಿ ಪದ್ಮಶ್ರೀ, 2001 ರಲ್ಲಿ ಪದ್ಮಭೂಷಣ ಹಾಗೂ 2015 ರಲ್ಲಿ ಪದ್ಮವಿಭೂಷಣ ಪ್ರಶಸ್ತಿಗಳನ್ನು ಪಡೆದಿದ್ದಾರೆ.

1969 ರಲ್ಲಿ 'ಸಾತ್ ಹಿಂದುಸ್ತಾನಿ' ಚಿತ್ರದಲ್ಲಿ ಏಳು ನಾಯಕರಲ್ಲಿ ತಾವೂ ಸಹ ಒಬ್ಬರಾಗಿ ತಮ್ಮ ವೃತ್ತಿಜೀವನ ಆರಂಭಿಸಿದರು. ಆದರೆ ಆರಂಭಿಕ ಅವಧಿಯಲ್ಲಿ ಬಚ್ಚನ್ ಅವರ ಅನೇಕ ಚಲನಚಿತ್ರಗಳಿಗೆ ಹೆಚ್ಚು ಬೇಡಿಕೆ ಇರಲಿಲ್ಲ. 1973ರ 'ಜಂಜೀರ್' ಚಿತ್ರದಲ್ಲಿ ಅಭಿನಯಿಸುವ ಮೂಲಕ ಬಾಲಿವುಡ್​ನಲ್ಲಿ ಮನ್ನಣೆ ಪಡೆದರು. ಈ ಚಿತ್ರದಲ್ಲಿ ಅವರು ಇನ್ಸ್​ಪೆಕ್ಟರ್​ ವಿಜಯ್ ಖನ್ನಾ ಪಾತ್ರ ನಿರ್ವಹಿಸಿದ್ದರು. ಅಮಿತಾಬ್ ಈ ಚಿತ್ರಕ್ಕಾಗಿ 'ಆಂಗ್ರಿ ಯಂಗ್ ಮ್ಯಾನ್' ಪ್ರಶಸ್ತಿಯನ್ನು ಪಡೆದುಕೊಂಡರು. ನಟಿ ಜಯ ಬಚ್ಚನ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರಿಗೆ ಅಭಿಷೇಕ್ ಬಚ್ಚನ್ ಮತ್ತು ಶ್ವೇತಾ ನಂದಾ ಎಂಬ ಇಬ್ಬರು ಮಕ್ಕಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.