ಪಾಟ್ನಾ: ದೇಶದಲ್ಲಿ ಪ್ರವಾಹ ಪೀಡಿದ ಪ್ರದೇಶದ ಜನರ ಸಹಾಯಕ್ಕೆ ನಿಂತಿರುವ ಸೂಪರ್ಸ್ಟಾರ್ ಅಮಿತಾಬ್ ಬಚ್ಚನ್ ಬಿಹಾರದಲ್ಲಿ ಪ್ರವಾಹ ಪೀಡಿತ ಜನರಿಗೆ ₹ 51 ಲಕ್ಷ ಹಣದ ಸಹಾಯ ಮಾಡಿದ್ದಾರೆ. ಬಿಹಾರ ಮುಖ್ಯಮಂತ್ರಿ ಪರಿಹಾರ ನಿಧಿಗೆ ತಮ್ಮ ಪ್ರತಿನಿಧಿ ವಿಜಯ್ನಾಥ್ ಮಿಶ್ರಾ ಮೂಲಕ 51 ಲಕ್ಷ ರೂಪಾಯಿಯನ್ನು ಕಳುಹಿಸಿದ್ದಾರೆ.
ಈ ಬಗ್ಗೆ ಬಿಹಾರ ಮುಖ್ಯಮಂತ್ರಿಗೆ ಪತ್ರ ಬರೆದಿರುವ ಅಮಿತ್ ಬಚ್ಚನ್, ಬಿಹಾರದಲ್ಲಿ ಸಂಭವಿಸಿರುವ ನೈಸರ್ಗಿಕ ವಿಕೋಪದಿಂದ ನಾನು ಆಘಾತಕ್ಕೊಳಗಾಗಿದ್ದೇನೆ. ಈ ದುರಂತದಲ್ಲಿ ಸಿಲುಕಿರುವ ಜನರ ಪರಿಸ್ಥಿತಿಯಿಂದ ನಾನು ದುಃಖಿತನಾಗಿದ್ದೇನೆ. ನೆರೆ ಸಂತ್ರಸ್ತರಿಗೆ ನನ್ನಿಂದ ಒಂದು ಸಣ್ಣ ಸಹಾಯ ಮಾಡಲಿದ್ದೇನೆ ಎಂದು ಪತ್ರದಲ್ಲಿ ಬರೆದು, 51 ಲಕ್ಷ ರೂಪಾಯಿಯನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ಕಳುಹಿಸಿದ್ದಾರೆ.
ಬಿಹಾರ ಡೆಪ್ಯುಟಿ ಸಿಎಂರಿಂದ ಬಿಗ್ ಬಿಗೆ ಧನ್ಯವಾದ :
ಅಮಿತಾಬ್ ಬಚ್ಚನ್ರಿಂದ ಚೆಕ್ ಪಡೆದಿರುವ ಬಿಹಾರ ಡೆಪ್ಯೂಟಿ ಸಿಎಂ ಸುಶೀಲ್ಕುಮಾರ್ ಧನ್ಯವಾದ ತಿಳಿಸಿದ್ದಾರೆ. ಈ ಹಿಂದೆ ಅಮಿತಾಬ್ ಬಚ್ಚನ್, ಬಿಹಾರದ 21 ಸಾವಿರ ರೈತರ ಸಾಲವನ್ನು ಬರಿಸಿ ಬಿಹಾರಕ್ಕೆ ಸಹಾಯ ಮಾಡಿದ್ದರು. ಹೀಗೆ ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುತ್ತಾ ಬಂದಿರುವ ಬಿಗ್ಬಿಯ ಈ ಸಹಾಯದ ಹೆಜ್ಜೆ ಇದೇ ಮೊದಲಲ್ಲ. ಈ ಹಿಂದೆ ಉತ್ತರಪ್ರದೇಶದ ಸಾವಿರಾರು ರೈತರಿಗೂ ಸಹಾಯ ಮಾಡಿದ್ದರು.
ಪುಲ್ವಾಮಾ ಹುತಾತ್ಮರ ಕುಟುಂಬಗಳಿಗೆ ಆರ್ಥಿಕ ನೆರವು:
ಅಮಿತಾಬ್ ಬಚ್ಚನ್ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾಗಿರುವ ಯೋಧರ ಕುಟುಂಬಗಳಿಗೆ ಆರ್ಥಿಕ ಸಹಾಯ ಮಾಡಿದ್ದರು.