ETV Bharat / sitara

ಆಂಗ್ಲರ​ ವಿರುದ್ಧ 317ರನ್​ಗಳ ಜಯ: ಕೊಹ್ಲಿ ಪಡೆ ಶ್ಲಾಘಿಸಿ ಬಿಗ್​ ಬಿ, ಅನಿಲ್​ ಕಪೂರ್ ಟ್ವೀಟ್​​! - ಟೆಸ್ಟ್​ ಸರಣಿ ಟೀಂ ಇಂಡಿಯಾ

ಪ್ರವಾಸಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಎರಡನೇ ಟೆಸ್ಟ್​ ಪಂದ್ಯದಲ್ಲಿ ಗೆಲುವು ದಾಖಲು ಮಾಡುವುದರ ಮೂಲಕ ಸರಣಿ ಸಮಬಲ ಮಾಡಿಕೊಂಡಿದೆ.

Amitabh Bachchan
Amitabh Bachchan
author img

By

Published : Feb 16, 2021, 3:02 PM IST

ನವದೆಹಲಿ: ಇಂಗ್ಲೆಂಡ್​ ವಿರುದ್ಧದ ಎರಡನೇ ಟೆಸ್ಟ್​ ಪಂದ್ಯದಲ್ಲಿ ಟೀಂ ಇಂಡಿಯಾ ಬರೋಬ್ಬರಿ 317ರನ್​​ಗಳ ಗೆಲುವು ದಾಖಲು ಮಾಡುವುದರ ಮೂಲಕ ಮೊದಲ ಟೆಸ್ಟ್​ ಸೋಲಿಗೆ ತಿರುಗೇಟು ನೀಡಿದೆ. ಕೊಹ್ಲಿ ಪಡೆ ಗೆಲುವು ಸಾಧಿಸುತ್ತಿದ್ದಂತೆ ಬಾಲಿವುಡ್​ ಮೆಗಾಸ್ಟಾರ್​ ಬಿಗ್​ ಬಿ ಸೇರಿ ಅನೇಕರು ಟ್ವೀಟ್​ ಮಾಡಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

78 ವರ್ಷದ ಬಿಗ್​ ಬಿ ತಮ್ಮ ಟ್ವೀಟರ್​ ಅಕೌಂಟ್​ನಲ್ಲಿ ಟೀಂ ಇಂಡಿಯಾ ತಂಡಕ್ಕೆ ಅಭಿನಂದನೆ ಸಲ್ಲಿಕೆ ಮಾಡಿದ್ದು, T 3816 - Yeeeeeaaaaahhhh and YEEEEAAAAAHHHHH ! ಭಾರತ 317ರನ್​ಗಳ ಗೆಲುವು ದಾಖಲು ಮಾಡಿದೆ. 317ರನ್​ಗಳ ಟೆಸ್ಟ್​ ಗೆಲುವು ನಿಜಕ್ಕೂ ನಂಬಿಕೆಗೆ ಮೀರಿದ್ದು, ಇಂಡಿಯಾ ಇಂಡಿಯಾ ಎಂದು ಬರೆದುಕೊಂಡಿದ್ದಾರೆ.

  • T 3816 - Yeeeeeaaaaahhhh and YEEEEAAAAAHHHHH !
    India Wins by 317 runs .. I mean 317 runs in a Test .. that is INCREDIBLE !
    जड़ें तो पहले ही उखाड़ दी थीं ; अब उन्हें उखाड़ के सुखा भी दिया है !
    INDIA INDIA INDIA !!! 🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳 pic.twitter.com/SnDTNQxsKH

    — Amitabh Bachchan (@SrBachchan) February 16, 2021 " class="align-text-top noRightClick twitterSection" data=" ">

ಅನಿಲ್ ಕಪೂರ್ ಕೂಡ ತಮ್ಮ ಟ್ವೀಟರ್​ನಲ್ಲಿ ಟೀಂ ಇಂಡಿಯಾ ಗೆಲುವಿಗೆ ಅಭಿನಂಧನೆ ಸಲ್ಲಿಸಿದ್ದು, ವಿರಾಟ್​​ ಕೊಹ್ಲಿ ಹಾಗೂ ತಂಡಕ್ಕೆ ಶುಭಾಶಯಗಳು. ವಿಶೇಷವಾಗಿ ಅಶ್ವಿನ್ ಆಟ ನಿಜಕ್ಕೂ ಮೆಚ್ಚುವಂತಹದ್ದು ಎಂದು ಬರೆದುಕೊಂಡಿದ್ದಾರೆ.

ಎಂಎ ಚಿದಂಬರಂ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ಅದ್ಭುತ ಗೆಲುವು ದಾಖಲು ಮಾಡಿದ್ದು, ಸದ್ಯ ಐಸಿಸಿ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಎರಡನೇ ಸ್ಥಾನದಲ್ಲಿ ಮುಂದುವರೆದಿದೆ. ಫೈನಲ್​ಗೆ ಲಗ್ಗೆ ಹಾಕಬೇಕಾದರೆ ಟೀಂ ಇಂಡಿಯಾ 2-1 ಅಥವಾ 3-1 ಅಂತರದಲ್ಲಿ ಟೆಸ್ಟ್​ ಸರಣಿ ಗೆಲ್ಲಬೇಕಾದ ಅನಿವಾರ್ಯತೆ ನಿರ್ಮಾಣಗೊಂಡಿದೆ.

ಓದಿ: ಸರಣಿ ಸಮಬಲ: ಮೊದಲ ಟೆಸ್ಟ್​ ಸೋಲಿಗೆ ಸೇಡು ತೀರಿಸಿಕೊಂಡ ಟೀಂ ಇಂಡಿಯಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.