ETV Bharat / sitara

ಅಲ್ಲು ಅರ್ಜುನ್ 'ಪುಷ್ಪ' ಕನ್ನಡ ಆವೃತ್ತಿಯಲ್ಲಿ ಮೋಡಿ ಮಾಡಲಿದ್ದಾರೆ ವಿಜಯ್ ಪ್ರಕಾಶ್ - ವಿಜಯ್ ಪ್ರಕಾಶ್ ಹಾಡು

ಅಲ್ಲು ಅರ್ಜುನ್ ನಾಯಕನಾಗಿ ನಟಿಸಿರುವ 'ಪುಷ್ಪ' ಪ್ಯಾನ್ ಇಂಡಿಯಾ ಚಿತ್ರತಂಡ ಆಡಿಯೋ ಕುರಿತು ವಿಶೇಷ ಅಪ್ಡೇಟ್ ನೀಡಿದೆ. ಚಿತ್ರದ ಕನ್ನಡ ಹಾಡನ್ನು ಖ್ಯಾತ ಗಾಯಕ, ಕನ್ನಡಿಗ ವಿಜಯ್ ಪ್ರಕಾಶ್ ಹಾಡಲಿದ್ದಾರೆ.

allu-arjuns-pushpa-first-single-on-august-13th-in-5-languages

author img

By

Published : Aug 2, 2021, 8:01 PM IST

Updated : Aug 2, 2021, 8:08 PM IST

ಹೈದರಾಬಾದ್: ಟಾಲಿವುಡ್​ ಸ್ಟೈಲಿಶ್ ಸ್ಟಾರ್​ ಅಲ್ಲು ಅರ್ಜುನ್ ನಾಯಕನಾಗಿ ನಟಿಸಿರುವ 'ಪುಷ್ಪ' ಒಂದು ಬೃಹತ್ ಆ್ಯಕ್ಷನ್ ಎಂಟರ್ಟೈನರ್ ಆಗಿದೆ. ಮುಂಬರುವ ಪ್ಯಾನ್ ಇಂಡಿಯಾ ಚಿತ್ರವನ್ನು ರಕ್ತ ಚಂದನ ಕಳ್ಳಸಾಗಣೆ ಆಧರಿಸಿ ಸುಕುಮಾರ್ ನಿರ್ದೇಶಿಸುತ್ತಿದ್ದಾರೆ. ದೇವಿಶ್ರೀ ಪ್ರಸಾದ್ ಚಿತ್ರದ ಸಂಗೀತ ನಿರ್ದೇಶಕರಾಗಿದ್ದಾರೆ. ಇಂದು ದೇವಿಶ್ರೀ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಚಿತ್ರತಂಡ 'ಪುಷ್ಪ' ಆಡಿಯೋ ಕುರಿತು ವಿಶೇಷ ಅಪ್ಡೇಟ್ ನೀಡಿದೆ. 'ಪುಷ್ಪಾ' ತನ್ನ ಮೊದಲ ಹಾಡನ್ನು ಆಗಸ್ಟ್ 13ರಂದು ಬಿಡುಗಡೆ ಮಾಡುವುದಾಗಿ ಘೋಷಿಸಿದೆ.

ದೇವಿಶ್ರೀ ನಿರ್ದೇಶನದಲ್ಲಿ ಐದು ಭಾಷೆಗಳಲ್ಲಿ ಐದು ಜನಪ್ರಿಯ ಗಾಯಕರು 'ದಕ್ಕೋ ದಕ್ಕೋ ಮೇಕಾ' ಹಾಡನ್ನು ಹಾಡಲಿದ್ದಾರೆ. ಕನ್ನಡದಲ್ಲಿ ವಿಜಯ್ ಪ್ರಕಾಶ್ ಈ ಹಾಡಿಗೆ ದನಿಯಾಗಲಿದ್ದಾರೆ.

ಇನ್ನುಳಿದಂತೆ ವಿಶಾಲ್ ದಾದ್ಲಾನಿ (ಹಿಂದಿ), ರಾಹುಲ್ ನಂಬಿಯಾರ್ (ಮಲಯಾಳಂ), ಶಿವಂ (ತೆಲುಗು) ಮತ್ತು ಬೆನ್ನಿ (ತಮಿಳು) ಕೂಡಾ ಹಾಡಲಿದ್ದಾರೆ.

ಈ ಚಿತ್ರದಲ್ಲಿ ಅಲ್ಲು ಅರ್ಜುನ್ ರಕ್ತ ಚಂದನ ಕಳ್ಳಸಾಗಣೆದಾರ ಪುಷ್ಪರಾಜ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ರಶ್ಮಿ ನಾಯಕಿಯಾಗಿದ್ದು, ಮಲಯಾಳಿ ನಟ ಫಹಾದ್ ಖಳನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಸನ್ನಿ ಲಿಯೋನ್ ಈ ಸಿನಿಮಾದಲ್ಲಿ ವಿಶೇಷ ಹಾಡಿನಲ್ಲಿ ನಟಿಸಬಹುದು ಎಂಬ ಮಾಹಿತಿ ಇದೆ.

ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿರುವ 'ಪುಷ್ಪ' ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸುತ್ತಿದೆ. 'ಪುಷ್ಪ'ದ ಮೊದಲ ಭಾಗದ ಚಿತ್ರೀಕರಣ ಅಂತಿಮ ಹಂತ ತಲುಪಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿದ ನಂತರ, ಪ್ರಚಾರಕ್ಕಾಗಿ ಚಿತ್ರತಂಡ ದೊಡ್ಡ ಪ್ಲಾನ್ ಮಾಡಿಕೊಂಡಿದೆಯಂತೆ.

Last Updated : Aug 2, 2021, 8:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.