ಬೆಂಗಳೂರು: ಕೊರೊನಾ ವೈರಸ್ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಮಧ್ಯೆ ಮನೆಯಲ್ಲೇ ಲಾಕ್ಡೌನ್ ಆಗಿರುವ ಸೆಲಬ್ರೆಟಿಗಳು ಟೈಮ್ ಪಾಸ್ ಮಾಡಲು ಹೊಸ ಹೊಸ ಪ್ರಯೋಗಕ್ಕೆ ಮುಂದಾಗುತ್ತಿದ್ದಾರೆ.
ಲಾಕ್ ಡೌನ್ ಸಮಯದಲ್ಲಿ ಎಲ್ಲರೂ ಕಡ್ಡಾಯವಾಗಿ ಮನೆಯಲ್ಲೇ ಇರಬೇಕು. ಸದಾ ಕಾಲ ಶೂಟಿಂಗ್ ಅಂತ ಮನೆಯಿಂದ ಹೊರಗಿರುತ್ತಿದ್ದ ತಾರೆಯರು ಮನೆಯಲ್ಲೆ ಕೂರಬೇಕೆಂದ್ರೆ ಕಷ್ಟ ಸಹಜ. ಆದರೆ ಪ್ರತಿದಿನ ಒಂದಿಲ್ಲೊಂದು ಕೆಲಸ ಮಾಡುತ್ತಾ ಆರಾಮದಲ್ಲಿ ಮನೆಯಲ್ಲಿ ಕಾಲ ಕರೆಯಬಹುದು ಎಂದು ತೋರಿಸಿಕೊಡ್ತಿದ್ದಾರೆ ಕೆಲ ಸೆಲೆಬ್ರಿಟಿಗಳು. ಪ್ರತಿದಿನ ಹೊಸತೇನಾದರೂ ಮಾಡುವ ಮೂಲಕ ಪ್ರೇಕ್ಷಕರಿಗೆ ಹೇಗೆ ಕ್ವಾರಂಟೈನ್ ಸಮಯ ಕಳೆಯಬಹುದು ಎಂದು ಹೇಳಿಕೊಡುತ್ತಿದ್ದಾರೆ ನಟ ಅಕುಲ್ ಬಾಲಾಜಿ.
ಆದರೆ ಇಂದು ಅವರು ಸುದ್ದಿಯಲ್ಲಿರುವುದಕ್ಕೆ ಕಾರಣ ಅವರು ಮಾಡಿಸಿಕೊಂಡ ಹೊಚ್ಚ ಹೊಸ ಹೇರ್ ಸ್ಟೈಲ್. ಅರೆ! ಎಲ್ಲಾ ಕಡೆ ಬಂದ್ ಇರುವಾಗ ಅವರಿಗೆ ಅದ್ಯಾರು ಹೇರ್ ಕಟ್ ಮಾಡಿದರೋ ಎಂದು ಹುಬ್ಬೇರಿಸಬೇಡಿ. ಅಕುಲ್ ಅವರ ನವೀನ ಕೇಶ ವಿನ್ಯಾಸ ಮಾಡಿರುವುದು ಬೇರಾರೂ ಅಲ್ಲ, ಅವರ ಪ್ರೀತಿಯ ಮಡದಿ ಜ್ಯೋತಿ. ತಮ್ಮ ಹೊಸ ಲುಕ್ ಪೋಟೋವನ್ನು ಅಕುಲ್ ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ.