ಬೆಂಗಳೂರು : ನಟನಾಗಿ ಬಣ್ಣದ ಪಯಣ ಶುರು ಮಾಡಿದ್ದ ಅಕುಲ್ ಬಾಲಾಜಿ ನಿರೂಪಕನಾಗಿ ಮೋಡಿ ಮಾಡಿರುವುದು ತಿಳಿದಿದೆ. ಅರಳು ಹುರಿದಂತೆ ಪಟಪಟನೆ ಮಾತನಾಡಿ ವೀಕ್ಷಕರನ್ನು ರಂಜಿಸುವ ಅಕುಲ್ ಬಾಲಾಜಿ ಇದೀಗ ಕಿರುತೆರೆಗೆ ಕಮ್ಬ್ಯಾಕ್ ಮಾಡಿದ್ದಾರೆ.
ಓದಿ:ನಿರಾಶ್ರಿತರಿಗೆ 'ಅನ್ನದಾತ'ನಾದ ಹಾಸ್ಯ ನಟ ಚಿಕ್ಕಣ್ಣ
ಬರೋಬ್ಬರಿ ಆರು ವರ್ಷಗಳ ನಂತರ ಬಣ್ಣ ಹಚ್ಚುತ್ತಿರುವ ಅಕುಲ್ ಬಾಲಾಜಿ ತೆಲುಗು ಧಾರಾವಾಹಿಯ ಮೂಲಕ ನಟನೆಯ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ.
ಜೀ ತೆಲುಗು ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಓಹಲು ಗುಸಾಗುಸಲಾಡೆ' ಧಾರಾವಾಹಿಯಲ್ಲಿ ನಾಯಕ ಅಭಿರಾಮ್ ಆಗಿ ಅಕುಲ್ ಬಾಲಾಜಿ ನಟಿಸುತ್ತಿದ್ದಾರೆ.
ಈ ಧಾರಾವಾಹಿಯಲ್ಲಿ ನಾನು ವಿಧುರನ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಇದು ನನಗೆ ತುಂಬಾ ಚಾಲೆಂಜಿಗ್ ಆದ ಪಾತ್ರ. ತುಂಬಾ ವರ್ಷದ ನಂತರ ಮತ್ತೆ ಬಣ್ಣ ಹಚ್ಚುತ್ತಿರುವುದು ಸಂತಸ ತಂದಿದೆ ಎನ್ನುತ್ತಾರೆ ಅಕುಲ್ ಬಾಲಾಜಿ.
ಇದರ ಹೊರತಾಗಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕುಕ್ಕು ವಿಥ್ ಕಿರಿಕ್ಕು ಎಂಬ ರಿಯಾಲಿಟಿ ಶೋನಲ್ಲಿ ನಿರೂಪಕರಾಗಿಯೂ ಅಕುಲ್ ಮೋಡಿ ಮಾಡುತ್ತಿದ್ದಾರೆ.