ಸಾಮಾನ್ಯವಾಗಿ ಸ್ಟಾರ್ ನಟರ ಇನ್ಸ್ಟಾಗ್ರಾಮ್ ಪುಟ ನೋಡಿದ್ರೆ ಬರೀ ಅವರ ಪೋಟೋಗಳು, ಸೆಲ್ಫಿಗಳೇ ಕಾಣುತ್ತವೆ. ಇಲ್ಲ ಅಂದ್ರೆ ಅಂದ ಚಂದದ ಫೋಟೋ ಶೂಟ್ ಮಾಡಿಸಿ ಅದನ್ನ ಶೇರ್ ಮಾಡುತ್ತಾರೆ. ಆದ್ರೆ ಇಂದು ತೆಲುಗು ಸೂಪರ್ಸ್ಟಾರ್ ರಾಮ್ ಚರಣ್ ಫೋಟೋ ಒಂದನ್ನು ಶೇರ್ ಮಾಡಿದ್ದು, ಅದರಲ್ಲಿ ಮೂರು ಜನ ಲೆಜೆಂಡರಿ ಸ್ಟಾರ್ ನಟರು ಕಾಣಿಸಿಕೊಂಡಿದ್ದಾರೆ.
- " class="align-text-top noRightClick twitterSection" data="
">
ರಾಜಮೌಳಿ ಆರ್ ಆರ್ ಆರ್ ಸಿನಿಮಾ ಮಾಡುತ್ತಿದ್ದು, ಈ ಸಿನಿಮಾದಲ್ಲಿ ರಾಮ್ ಚರಣ್, ಜೂನಿಯರ್ ಎಂಟಿಆರ್, ಅಜಯ್ ದೇವಗನ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಬಾಲಿವುಡ್ ಸ್ಟಾರ್ ಅಜಯ್ ದೇವಗನ್ ಆರ್ಆರ್ಆರ್ ಸೆಟ್ಗೆ ಆಗಮಿಸಿದ್ದು, ಆ ಖುಷಿಯಲ್ಲಿ ತಾವು ಮೂರು ಜನ ಇರುವ ಫೋಟೋವನ್ನು ರಾಮ್ ಚರಣ್ ಪೋಸ್ಟ್ ಮಾಡಿದ್ದಾರೆ.
ಸೋಷಿಯಲ್ ಮಿಡಿಯಾದಲ್ಲಿ ಈ ಬಗ್ಗೆ ಬರೆದುಕೊಂಡಿರುವ ರಾಮ್ ಚರಣ್, ಆರ್ಆರ್ಆರ್ ಸೆಟ್ಗೆ ಸ್ವಾಗತ ಅಜಯ್ ಸರ್. ನಿಮ್ಮ ಪರ್ಸನಾಲಿಟಿಗೆ ನಾನು ದೊಡ್ಡ ಅಭಿಮಾನಿ ಎಂದಿದ್ದಾರೆ.
- " class="align-text-top noRightClick twitterSection" data="
">
ಜೂನಿಯರ್ ಎಂಟಿಆರ್ ಕೂಡ ಒಂದು ಫೋಟೋವನ್ನು ಶೇರ್ ಮಾಡಿದ್ದು, ಇದ್ರಲ್ಲಿ ನಿರ್ದೇಶಕ ರಾಜಮೌಳಿ ಕೂಡ ಇದ್ದಾರೆ. ಇವರು ಕೂಡ ಪೋಸ್ಟ್ನಲ್ಲಿ ಅಜಯ್ ದೇವಗನ್ಗೆ ಸ್ವಾಗತ ಕೋರಿದ್ದಾರೆ