ಸಿನಿಮಾ ವೃತ್ತಿ ಜೀವನದಲ್ಲಿ ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಅನೇಕ ಸಿನಿಮಾಗಳಲ್ಲಿ ವಿಭಿನ್ನ ಪಾತ್ರ ಮಾಡಿದ್ದಾರೆ. ಮಣಿರತ್ನಂ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾವೊಂದರಲ್ಲಿ ಐಶ್ವರ್ಯ ರೈ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ. ಅದರಲ್ಲಿ ಒಂದು ನಾಯಕಿ ಹಾಗೂ ಮತ್ತೊಂದು ವಿಲನ್ ಪಾತ್ರ.
ಇದನ್ನೂ ಓದಿ: ಸೈಕೋ ಕಿಲ್ಲರ್ ಆಗಿ ಬದಲಾದ ಡ್ಯಾನ್ಸಿಂಗ್ ಸ್ಟಾರ್ ಪ್ರಭುದೇವ
ಮಣಿರತ್ನಂ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಪೊನ್ನಿಯನ್ ಸೆಲ್ವನ್' ಸಿನಿಮಾ ಚಿತ್ರೀಕರಣ ಕೊರೊನಾ ಲಾಕ್ಡೌನ್ ಕಾರಣದಿಂದ ಕೆಲವು ದಿನಗಳ ಕಾಲ ನಿಂತಿತ್ತು. ಇದೀಗ ಚಿತ್ರೀರಕಣ ಮತ್ತೆ ಆರಂಭವಾಗಿದೆ. ಈ ಚಿತ್ರದಲ್ಲಿ ಐಶ್ವರ್ಯ ರೈ ಮಂದಾಕಿನಿ ದೇವಿ ಹಾಗೂ ನಂದಿನಿ ಎಂಬ ಎರಡು ಪಾತ್ರಗಳಲ್ಲಿ ನಟಿಸುತ್ತಿದ್ದಾರಂತೆ. ಈ ಪಾತ್ರಗಳಿಗಾಗಿ ಐಶ್ವರ್ಯ ರೈ ಶ್ರಮ ಪಟ್ಟು ತಯಾರಾಗುತ್ತಿದ್ದಾರಂತೆ. ಸಿನಿಮಾ ಚಿತ್ರೀಕರಣ ಹೈದರಾಬಾದ್ನಲ್ಲಿ ನಡೆಯುತ್ತಿದೆ. ಈ ಸಿನಿಮಾ ಎರಡು ಭಾಗಗಳಲ್ಲಿ ತಯಾರಾಗುತ್ತಿದೆಯಂತೆ. ಮೇ ತಿಂಗಳ ವೇಳೆಗೆ ಮೊದಲ ಭಾಗದ ಚಿತ್ರೀಕರಣ ಪೂರ್ತಿಯಾಗಲಿದ್ದು ಡಿಸೆಂಬರ್ ವೇಳೆಗೆ ಸಿನಿಮಾವನ್ನು ತೆರೆಗೆ ತರಲು ಪ್ಲ್ಯಾನ್ ಮಾಡಲಾಗುತ್ತಿದೆ. ವಿಕ್ರಮ್ ಕಾರ್ತಿ, ಜಯಂ ರವಿ, ವಿಕ್ರಮ್ ಪ್ರಭು, ತ್ರಿಷಾ, ಐಶ್ವರ್ಯ ರಾಜೇಶ್, ಐಶ್ವರ್ಯ ಲಕ್ಷ್ಮಿ ಹಾಗೂ ಇನ್ನಿತರರು ಈ ಚಿತ್ರದ ಪ್ರಧಾನ ಪಾತ್ರದಲ್ಲಿ ನಟಿಸುತ್ತಿದ್ದಾರೆ. 'ಪೊನ್ನಿಯನ್ ಸೆಲ್ವನ್' ಸಿನಿಮಾ ಹಾಡುಗಳಿಗೆ ಎ.ಆರ್. ರೆಹಮಾನ್ ಸಂಗೀತ ನೀಡುತ್ತಿದ್ದಾರೆ.