ETV Bharat / sitara

ನಾಟಕ ಕಂಪನಿ ಸೇರಿದ ಐಂದ್ರಿತಾ ರೇ... ಕಾರಣ ಏನು ಗೊತ್ತಾ? - Aindritha Ray Sandalwood Cinema

ಐಂದ್ರಿತಾ ಅಭಿನಯದ ಬಾಲಿವುಡ್ ಸಿನಿಮಾ 'ಭವೈ' ಅಕ್ಟೋಬರ್ 1ಕ್ಕೆ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಸ್ಕಾಮ್ 1992 ಚಿತ್ರದ ಖ್ಯಾತಿಯ ಪ್ರತೀಕ್ ಗಾಂಧಿ ನಟಿಸಿರುವ ಈ ಚಿತ್ರದ ಟ್ರೇಲರ್ ಈಗಾಗಲೇ ಬಿಡುಗಡೆಯಾಗಿದ್ದು, ಒಂದಿಷ್ಟು ನಿರೀಕ್ಷೆ ಹೆಚ್ಚಿಸಿದೆ.

aindritha
ಐಂದ್ರಿತಾ
author img

By

Published : Sep 20, 2021, 9:31 AM IST

ಐಂದ್ರಿತಾ ಅಭಿನಯದ 'ಗರುಡ', 'ಪ್ರೇಮಂ ಪೂಜ್ಯಂ' ಮತ್ತು 'ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ' ಚಿತ್ರಗಳು ಬಿಡುಗಡೆಯಾಗುವುದಕ್ಕೆ ಸಜ್ಜಾಗಿವೆ. ಈ ಪೈಕಿ ಪ್ರೇಮಂ ಪೂಜ್ಯಂ ಚಿತ್ರವು ಅಕ್ಟೋಬರ್​ನಲ್ಲಿ ಬಿಡುಗಡೆಯಾಗಲಿದೆ ಎಂಬ ಸುದ್ದಿ ಇರುವುದು ಬಿಟ್ಟರೆ, ಮಿಕ್ಕಂತೆ ಇನ್ನೆರೆಡು ಚಿತ್ರಗಳ ಬಿಡುಗಡೆ ಯಾವಾಗ ಎಂಬುದು ಯಾರಿಗೂ ಗೊತ್ತಿಲ್ಲ.

ಇದೆಲ್ಲದರ ಮಧ್ಯೆ, ಐಂದ್ರಿತಾ ಅಭಿನಯದ ಇನ್ನೊಂದು ಚಿತ್ರ ಅಕ್ಟೋಬರ್ 1ಕ್ಕೆ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಇದ್ಯಾವ ಚಿತ್ರ ಗೊತ್ತಾಗಲಿಲ್ಲವಲ್ಲ ಎಂದು ಅವರ ಅಭಿಮಾನಿಗಳು ಪ್ರಶ್ನಿಸಬಹುದು. ವಿಷಯವೇನೆಂದರೆ, ಐಂದ್ರಿತಾ ಸದ್ದಿಲ್ಲದೇ ಹಿಂದಿ ಚಿತ್ರವೊಂದರಲ್ಲಿ ನಟಿಸಿದ್ದು, ಆ ಚಿತ್ರ ಅಕ್ಟೋಬರ್ 1ಕ್ಕೆ ಬಿಡುಗಡೆಯಾಗುತ್ತಿದೆ. ಸ್ಕಾಮ್ 1992 ಚಿತ್ರದ ಖ್ಯಾತಿಯ ಪ್ರತೀಕ್ ಗಾಂಧಿ ನಟಿಸಿರುವ ಈ ಚಿತ್ರದ ಟ್ರೇಲರ್ ಈಗಾಗಲೇ ಬಿಡುಗಡೆಯಾಗಿದ್ದು, ಒಂದಿಷ್ಟು ನಿರೀಕ್ಷೆ ಹೆಚ್ಚಿಸಿದೆ.

ಐಂದ್ರಿತಾಗೆ ಬಾಲಿವುಡ್ ಹೊಸದೇನಲ್ಲ. 2019ರಲ್ಲಿ 'ಮೇ ಜರೂರ್ ಆವುಂಗಾ' ಎಂಬ ಚಿತ್ರದಲ್ಲಿ ಐಂದ್ರಿತಾ ನಟಿಸಿದ್ದರು. ಅದಾದ ಮೇಲೆ ಅವರು 'ರಾವಣ್ ಲೀಲಾ' ಎಂಬ ಚಿತ್ರವನ್ನು ಒಪ್ಪಿಕೊಂಡಿದ್ದರು. ಆ ಹೆಸರು ವಿವಾದ ಸೃಷ್ಟಿಸಿದ್ದರಿಂದ ಹೆಸರು ಬದಲಾಯಿಸಲಾಗಿದೆ. ಚಿತ್ರಕ್ಕೆ ಇದೀಗ 'ಭವೈ' ಎಂಬ ಹೆಸರನ್ನು ಇಡಲಾಗಿದ್ದು, ಈ ಚಿತ್ರದಲ್ಲಿ ಅವರು ನಾಟಕದ ಕಂಪನಿಯೊಂದರಲ್ಲಿ ಕೆಲಸ ಮಾಡುವ ಕಲಾವಿದೆಯಾಗಿ ಕಾಣಿಸಿಕೊಂಡಿದ್ದಾರೆ.

ಸೀತೆ ಪಾತ್ರ ಮಾಡುವ ನಟಿಯೊಬ್ಬಳು ತನ್ನ ನಿಜ ಜೀವನದಲ್ಲಿ ಏನೆಲ್ಲ ಎದುರಿಸುತ್ತಾಳೆ ಎಂಬುದು ಚಿತ್ರದ ಕಥೆ. ಇದಲ್ಲದೇ, ಖ್ಯಾತ ನಿರ್ದೇಶಕ ವಿಕ್ರಮ್ ಭಟ್ ಅವರ ಹಾರರ್ ಥ್ರಿಲ್ಲರ್ ಶೈಲಿಯ 'ಕೋಲ್ಡ್' ಚಿತ್ರದಲ್ಲಿಯೂ ಐಂದ್ರಿತಾ ನಟಿಸುತ್ತಿದ್ದಾರಂತೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.