ETV Bharat / sitara

ವಿಶ್ರಾಂತಿ ಬಳಿಕ ಭಜರಂಗಿ-2 ಚಿತ್ರದ ಶೂಟಿಂಗ್​​​ಗೆ ಹಾಜರಾಗಲಿದ್ದಾರೆ ಸೆಂಚುರಿ ಸ್ಟಾರ್ - ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ

ಸೆಂಚುರಿ ಸ್ಟಾರ್ ಶಿವರಾಜ್​​​​ಕುಮಾರ್ ಅಭಿನಯದ ‘ಆಯುಷ್ಮಾನ್ ಭವ’ ನವೆಂಬರ್​​ 1 ರಂದು ಬಿಡುಗಡೆ ಆಗಲಿದೆ ಎನ್ನಲಾಗಿದೆ. ಇನ್ನು ಭುಜದ ಶಸ್ತ್ರಚಿಕಿತ್ಸೆ ನಂತರ ವಿಶ್ರಾಂತಿ ಪಡೆಯುತ್ತಿದ್ದ ಶಿವಣ್ಣ ‘ಭಜರಂಗಿ-2‘ ಚಿತ್ರದ ಮೂಲಕ ಚಿತ್ರೀಕರಣಕ್ಕೆ ಹಾಜರಾಗಲಿದ್ದಾರೆ.

ಶಿವರಾಜ್​​ಕುಮಾರ್​​
author img

By

Published : Sep 13, 2019, 7:17 PM IST

ಬಲಭುಜದ ಶಸ್ತ್ರಚಿಕಿತ್ಸೆ ನಂತರ ಕೆಲವು ದಿನಗಳ ಕಾಲ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದ ನಟ ಶಿವರಾಜ್​ಕುಮಾರ್ ಇದೀಗ ಚಿತ್ರೀಕರಣಕ್ಕೆ ಹಾಜರಾಗುತ್ತಿದ್ದಾರೆ. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿರುವುದಕ್ಕೆ ಶಿವಣ್ಣ ಸಂತೋಷದಿಂದ ಇದ್ದಾರೆ.

Ayushman Bhava
‘ಆಯುಷ್ಮಾನ್ ಭವ’

ಇತ್ತೀಚೆಗೆ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಉದ್ಘಾಟನೆ ಮಾಡಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಶಿವಣ್ಣ, ಅವರ ಮುಂದಿನ ಸಿನಿಮಾ ‘ಆಯುಷ್ಮಾನ್ ಭವ’ ನವೆಂಬರ್ 1 ರಂದು ಬಿಡುಗಡೆ ಆಗಲಿದೆ ಎಂಬ ಮಾಹಿತಿ ನೀಡಿದರು. ‘ಶಿವಲಿಂಗ’ ಚಿತ್ರದ ನಂತರ ಪಿ.ವಾಸು ನಿರ್ದೇಶನದಲ್ಲಿ ಮತ್ತೊಮ್ಮೆ ಶಿವಣ್ಣ ಅಭಿನಯಿಸಿರುವ ಈ ಚಿತ್ರವನ್ನು ದ್ವಾರಕೀಶ್ ಚಿತ್ರ ನಿರ್ಮಾಣ ಸಂಸ್ತೆ ನಿರ್ಮಾಣ ಮಾಡಿದೆ. ಮೊದಲು ಈ ಸಿನಿಮಾಗೆ ‘ಆನಂದ್​‘ ಎಂದು ಹೆಸರಿಟ್ಟಿದ್ದು ಆ ಹೆಸರು ಸೂಕ್ತ ಅಲ್ಲ ಎಂದು ಅನ್ನಿಸಿದ್ದರಿಂದ ಚಿತ್ರಕ್ಕೆ ‘ಆಯುಷ್ಮಾನ್​ ಭವ‘ ಎಂದು ಹೆಸರಿಡಲಾಗಿದೆ ಎಂದು ಶಿವಣ್ಣ ಹೇಳಿದರು.

ಸದ್ಯಕ್ಕೆ ಶಿವರಾಜ್​​​​ಕುಮಾರ್​​​​ ಎ.ಹರ್ಷ ಅವರ ‘ಭಜರಂಗಿ-2‘ ಸಿನಿಮಾ ಮೂಲಕ ಚಿತ್ರೀಕರಣಕ್ಕೆ ಹಾಜರಾಗುತ್ತಿದ್ದಾರೆ. ಚಿತ್ರದ ಮಾತಿನ ಭಾಗದ ಚಿತ್ರೀಕರಣ ಆರಂಭವಾಗಿದ್ದು ನೆಲಮಂಗಲದ ಬಳಿ ಚಿತ್ರೀಕರಣ ಜರುಗುತ್ತಿದೆ. ಮತ್ತೊಮ್ಮೆ ವೈದ್ಯರ ಸಲಹೆ ಪಡೆದು ನವೆಂಬರ್​​​​ನಲ್ಲಿ ಸಾಹಸ ದೃಶ್ಯಗಳ ಚಿತ್ರೀಕರಣದಲ್ಲಿ ಶಿವಣ್ಣ ಪಾಲ್ಗೊಳ್ಳಲಿದ್ದಾರೆ. ಜಯಣ್ಣ ಕಂಬೈನ್ಸ್​ ಸಂಸ್ಥೆ ಅಡಿ ತಯಾರಾಗುತ್ತಿರುವ ಶಿವಣ್ಣನ ಮೂರನೇ ಸಿನಿಮಾ ಈ ‘ಭಜರಂಗಿ-2'. ಇದು ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಭಾಷೆಗಳಲ್ಲಿ ಸಿನಿಮಾ ತಯಾರಾಗುತ್ತಿದೆ ಎನ್ನಲಾಗಿದೆ.

ಶಿವಣ್ಣ ಆಯುಶ್ಮಾನ್ ಭಾವ ನವೆಂಬರ್ 1 ರಂದು ಬಿಡುಗಡೆ

ಕರುನಾಡ ಚಕ್ರವರ್ತಿ ಡಾ ಶಿವರಾಜಕುಮಾರ್ ಕೆಲವು ತಿಂಗಳುಗಳ ಬಳಿಕ ಚಿತ್ರೀಕರಣಕ್ಕೆ ಹಾಜರಾಗಿದ್ದಾರೆ. ಅವರ ಬಲ ಭುಜದ ಶಸ್ತ್ರ ಚಿಕಿತ್ಸೆ ಯಶಸ್ವಿ ಆಗಿ ಹಿಂದಿಗಿಂತ ಚನ್ನಾಗಿ ಸಾಹಸ ದೃಶ್ಯ ಮಾಡಬಹುದು ಎಂಬ ಸಂತೋಷದಲ್ಲಿದ್ದಾರೆ ಶಿವಣ್ಣ.

ಮೊನ್ನೆ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಉದ್ಘಾಟನೆ ಮಾಡಿದ ನಂತರ ಈ ಪತ್ರಕರ್ತನೊಂದಿಗೆ ಮಾತನಾಡುತ್ತಾ ಅವರ ಮುಂದಿನ ಬಿಡುಗಡೆ ಸಿನಿಮಾ ಆಯುಷ್ಮನ್ ಭವ ನವೆಂಬರ್ 1 ರಂದು 2019 ಬಿಡುಗಡೆ ಆಗಲಿದೆ ಎಂಬ ವಿಷಯವನ್ನು ಹೇಳಿಕೊಂಡರು. ಶಿವಲಿಂಗ ನಂತರ ಹೆಸರಾಂತ ನಿರ್ದೇಶನ ಪಿ ವಾಸು ಜೊತೆ ಶಿವಣ್ಣ ಮತ್ತೊಮ್ಮೆ ಅಭಿನಯಿಸಿರುವ ಚಿತ್ರ ದ್ವಾರಕೀಶ್ ಚಿತ್ರ ನಿರ್ಮಾಣ ಮಾಡಿದೆ.

ಮನೆಯ ಕಡೆ ಮಗಳು ಡಾ ನಿರುಪಮ ಆರೋಗ್ಯದಲ್ಲಿ ಏರುಪೇರಾಗಿ ಸ್ವಲ್ಪ ಚಿಂತಾಕ್ರಾಂತರಾಗಿದ್ದರು ಶಿವಣ್ಣ. ಆದರೆ ಈಗ ಮಗಳ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಮನಸ್ಸು ನಿರಾಳ ಆಗಿದೆ ಎಂದು ಹೇಳುತ್ತಾ ಅವರ ಮೊದಲ ಸಿನಿಮಾ ಆನಂದ್ ಶೀರ್ಷಿಕೆ ಅಷ್ಟಾಗಿ ಸೂಕ್ತ ಅನ್ನಿಸದೆ ಆಯುಶ್ಮಾನ್ ಭವ ಅಂತಿಮವಾಗಿ ತೀರ್ಮಾನ ಆಗಿರುವುದಕ್ಕೆ ಸಂತೋಷವಿದೆ. ಶೀರ್ಷಿಕೆಗೆ ಚಿತ್ರ ನೋಡಿದ ಮೇಲೆ ಸರಿಯಾದದ್ದು ಎಂದು ಅರಿವಾಗಲಿದೆ. ಸಧ್ಯಕ್ಕೆ ಶಿವಣ್ಣ ಎ ಹರ್ಷ ಅವರ ಭಜರಂಗಿ 2 ಇಂದ ಚಿತ್ರೀಕರಣ ಪ್ರಾರಂಭಿಸುತ್ತಿದ್ದಾರೆ. ಗೌಡರ ಮನೆ (ನಿರ್ಮಾಪಕ ಆರ್ ಎಸ್ ಗೌಡ ಕಟ್ಟಿಸಿದ ಶೂಟಿಂಗ್ ಮನೆ) ನೆಲಮಂಗಲ ಬಳಿ ಚಿತ್ರೀಕರಣಕ್ಕೆ ಸಜ್ಜಾಗಿದೆ.

ಭಜರಂಗಿ 2 ಚಿತ್ರಕ್ಕೆ ಮಾತಿನ ಭಾಗದ ಚಿತ್ರೀಕರಣ ಪ್ರಾರಂಭ ಆಗಿದೆ. ಮತ್ತೊಮ್ಮೆ ವೈಧ್ಯರ ಅನುಮತಿ ಪಡೆದು ನವೆಂಬರ್ ತಿಂಗಳಿನಲ್ಲಿ ಸಾಹಸ ದೃಶ್ಯಗಳಲ್ಲಿ ಶಿವಣ್ಣ ತೊಡಗಿಕೊಳ್ಳಲಿದ್ದಾರೆ.

ಭಜರಂಗಿ 2 ವಿಶೇಷ ಏನಪ್ಪಾ ಅಂದರೆ ಇದು ಜಯಣ್ಣ ಕಂಬೈನ್ಸ್ ಅಡಿಯಲ್ಲಿ ತಾಯರಗುತ್ತಿರುವ ಶಿವಣ್ಣ ಜೊತೆ ಮೂರನೇ ಕಾಂಬಿನೇಷನ್. ಕನ್ನಡ ಅಲ್ಲದೆ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳನ್ನು ಮನಸಿನಲ್ಲಿ ಇಟ್ಟುಕೊಂಡು ಚಿತ್ರಕಥೆ ಸಿದ್ದವಾಗಿದೆ. 

ETV Bharat Logo

Copyright © 2025 Ushodaya Enterprises Pvt. Ltd., All Rights Reserved.