ETV Bharat / sitara

ಚಿತ್ರದ ಗೆಲುವಿಗೆ ಕಾರಣರಾದ ಕನ್ನಡಿಗರಿಗೆ ಧನ್ಯವಾದ ಹೇಳಿದ 'ಅಧ್ಯಕ್ಷ ಇನ್ ಅಮೆರಿಕ' ತಂಡ - ಅಧ್ಯಕ್ಷ ಇನ್ ಅಮೆರಿಕ ಸಿನಿಮಾ ಸಕ್ಸಸ್ ಪ್ರೆಸ್​​ಮೀಟ್

ನಮ್ಮ ಜೋಡಿಯನ್ನು ಜನರು ಮೆಚ್ಚಿ ನಾವು ನಿರೀಕ್ಷೆ ಮಾಡದೇ ಇರುವಷ್ಟು ಪ್ರೀತಿ ಹಂಚಿದ್ದಾರೆ. ಸಿನಿಮಾ ಖಂಡಿತ ಸಕ್ಸಸ್ ಆಗುತ್ತೆ ಎನ್ನುವುದು ಗೊತ್ತಿತ್ತು. ಆದರೆ ಇಷ್ಟು ದೊಡ್ಡಮಟ್ಟದ ಗೆಲುಗು ಸಿಗಲಿದೆ ಎಂದುಕೊಂಡಿರಲಿಲ್ಲ ಎಂದು ನಟಿ ರಾಗಿಣಿ ಹೇಳಿದ್ದಾರೆ.

'ಅಧ್ಯಕ್ಷ ಇನ್ ಅಮೆರಿಕ' ಚಿತ್ರತಂಡ
author img

By

Published : Oct 17, 2019, 7:49 PM IST

ಶರಣ್ ಹಾಗೂ ತುಪ್ಪದ ಹುಡುಗಿ ರಾಗಿಣಿ ಅಭಿನಯದ 'ಅಧ್ಯಕ್ಷ ಇನ್ ಅಮೆರಿಕ' ಚಿತ್ರ ಯಶಸ್ವಿ ಮೂರನೇ ವಾರ ಪ್ರದರ್ಶನವಾಗುತ್ತಿದೆ. ಬಿಡುಗಡೆಯಾದ‌ ಎಲ್ಲ ಸೆಂಟರ್​​​​ಗಳಲ್ಲೂ ಹೌಸ್​​​​ಪುಲ್ ಪ್ರದರ್ಶನ ಕಾಣುತ್ತಿದ್ದು, ಅಧ್ಯಕ್ಷ ಶರಣ್ ಹ್ಯಾಟ್ರಿಕ್ ಬಾರಿಸಿದ್ದಾರೆ. ಅಲ್ಲದೆ ಅಧ್ಯಕ್ಷ ಬಾಕ್ಸ್ ಆಫೀಸ್​​​ನಲ್ಲೂ ಕಮಾಲ್ ಮಾಡಿದ್ದು ನಿರ್ಮಾಪಕನ ಜೇಬು ತುಂಬಿಸಿದ್ದಾನೆ.

'ಅಧ್ಯಕ್ಷ ಇನ್ ಅಮೆರಿಕ' ಸಕ್ಸಸ್ ಪ್ರೆಸ್​​ಮೀಟ್

ಈ ಖುಷಿ ಹಂಚಿಕೊಳ್ಳಲು ಚಿತ್ರತಂಡ ನಿನ್ನೆ ಸಕ್ಸಸ್ ಮೀಟ್ ಏರ್ಪಡಿಸಿತ್ತು. ನಿರ್ಮಾಪಕರು ಚಿತ್ರದ ನಟ, ನಿರ್ದೇಶಕರಿಗೆ ನೆನಪಿನ ಕಾಣಿಕೆ ನೀಡಿ ಚಿತ್ರದ ಗೆಲುವನ್ನು ಸಂಭ್ರಮಿಸಿದರು. 'ಅಧ್ಯಕ್ಷ ಇನ್ ಅಮೆರಿಕ' ಚಿತ್ರವನ್ನು ಆಂಧ್ರ ಮೂಲದ ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್ ಅಡಿ ಟಿ.ಜಿ. ವಿಶ್ವನಾಥ್ ಹಾಗೂ ವಿವೇಕ್ ಕುಚ್ಚಿಬೋಟ್ಲಾ ನಿರ್ಮಾಣ ಮಾಡಿದ್ದಾರೆ. ಚಿತ್ರವನ್ನು ಗೆಲ್ಲಿಸಿದ ಕನ್ನಡಿಗರಿಗೆ ಚಿತ್ರತಂಡ ಧನ್ಯವಾದ ಹೇಳಿದೆ. ಅಲ್ಲದೇ ಕನ್ನಡ ಭಾಷೆಯಲ್ಲಿ ನಮ್ಮ ಪ್ರೊಡಕ್ಷನ್​​​ನಲ್ಲಿ ನಿರ್ಮಾಣವಾದ ಮೊದಲ ಸಿನಿಮಾ ಇದು ಎಂದು ಸಂತೋಷ ವ್ಯಕ್ತಪಡಿಸಿದರು.

Ragini
ರಾಗಿಣಿ ದ್ವಿವೇದಿ

ಇನ್ನು ಮೊದಲ ಚಿತ್ರದಲ್ಲೇ ಸಕ್ಸಸ್ ಸಿಕ್ಕಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಯೋಗಾನಂದ್, ನನ್ನ ಮುಂದಿನ ಚಿತ್ರಕ್ಕೆ ಇದು ಸ್ಫೂರ್ತಿಯಾಗಿದೆ. ಅಲ್ಲದೇ ಜವಾಬ್ದಾರಿಯೂ ಹೆಚ್ಚಾಗಿದೆ ಎಂದರು. ಚಿತ್ರದಲ್ಲಿ ರಾಗಿಣಿ ಹಾಗೂ ಶರಣ್ ಇಬ್ಬರ ಕಾಂಬಿನೇಷನ್ ಸಖತ್ ವರ್ಕೌಟ್ ಆಗಿದೆ. 'ನಮ್ಮ ಜೋಡಿಯನ್ನು ಜನರು ಮೆಚ್ಚಿ ನಾವು ನಿರೀಕ್ಷೆ ಮಾಡದೆ ಇರುವಷ್ಟು ಪ್ರೀತಿ ಹಂಚಿದ್ದಾರೆ. ಸಿನಿಮಾ ಖಂಡಿತ ಸಕ್ಸಸ್ ಆಗುವುದು ಎಂದು ಗೊತ್ತಿತ್ತು. ಆದರೆ, ಇಷ್ಟು ದೊಡ್ಡಮಟ್ಟದ ಗೆಲುಗು ಸಿಗಲಿದೆ ಎಂದುಕೊಂಡಿರಲಿಲ್ಲ. ನಮಗೆ ಇಷ್ಟು ಪ್ರೀತಿ ಹಂಚಿದ ಕನ್ನಡಿಗರಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು ಎಂದು ಚಿತ್ರವನ್ನು ಒಪ್ಪಿ, ಅಪ್ಪಿಕೊಂಡ ಸಿನಿಪ್ರಿಯರಿಗೆ ರಾಗಿಣಿ ಹಾಗೂ ಶರಣ್ ಧನ್ಯವಾದ ಹೇಳಿದರು.

Intro:ಶರಣ್ ಹಾಗೂ ತುಪ್ಪದ ಹುಡುಗಿ ರಾಗಿಣಿ ಅಭಿನಯದ ಅಧ್ಯಕ್ಷ ಇನ್ ಅಮೇರಿಕಾ ಚಿತ್ರ ಯಶಸ್ವಿ ಮೂರನೇ ವಾರಕ್ಕೆ ಮುನ್ನುಗಿದೆ‌.ಬಿಡುಗಡೆಯಾದ‌ ಎಲ್ಲಾ ಸೆಂಟರ್ ಗಳಲ್ಲೂ ಹೌಸ್ ಪುಲ್ ಪ್ರದರ್ಶನ ಕಾಣ್ತಿದ್ದು, ಅಧ್ಯಕ್ಷ ಶರಣ್ ಹ್ಯಾಟ್ರಿಕ್ ಬಾರಿಸಿದ್ದಾರೆ.ಅಲ್ಲದೆ ಅಧ್ಯಕ್ಷ ಬಾಕ್ಸ್ ಆಫೀಸ್ ನಲ್ಲೂ ಕಮಾಲ್ ಮಾಡಿದ್ದು ನಿರ್ಮಾಪಕರ ಜೇಬು ತುಬಿಸಿದ್ದಾನೆ.ಇನ್ನೂ ಈ ಖುಷಿಯನ್ನು ಹಂಚಿಕೊಳ್ಳಲು ಚಿತ್ರತಂಡ ಸಕ್ಸಸ್ ಮೀಟ್ ಮಾಡಿ,ನಟರು ನಿರ್ದೇಶಕರಿಗೆ ನೆನಪಿನ ಕಾಣಿಕೆ ನೀಡಿ ಚಿತ್ರ ನಿರ್ಮಾಪಕರು ಚಿತ್ರದ ಸಕ್ಸಸ್ ಅನ್ನು ಸಂಭ್ರಮಿಸಿದ್ರು.

Body:ಅಧ್ಯಕ್ಷ ಇನ್ ಅಮೇರಿಕಾ ಚಿತ್ರವನ್ನು ಆಂದ್ರ ಮೂಲಕ ಫೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್ ನಲ್ಲಿ ಟಿ ಜಿ ವಿಶ್ವನಾಥ್ ಹಾಗೂ ವಿವೇಕ್ ಕುಚ್ಚಿಬೋಟ್ಲಾ ಚಿತ್ರವನ್ನು ನಿರ್ಮಾಣ ಮಾಡಿದ್ದು.ಚಿತ್ರವನ್ನು ಗೆಲ್ಲಿಸಿದ ಕನ್ನಡಿಗರಿಗೆ ಚಿತ್ರತಂಡ ಧನ್ಯವಾದ ಹೇಳಿದ್ರು.ಅಲ್ಲದೆ ನಮ್ಮ ಪ್ರೊಡಕ್ಷನ್ ನಲ್ಲಿ ಕನ್ನಡದಲ್ಲಿ ಇದು ಮೊದಲ ಚಿತ್ರ ಮುಂದಿನ ಚಿತ್ರ ಮಾಡುವಾಗ ಈ ಹಿಂದೆ ಅಧ್ಯಕ್ಷ ಇನ್ ಅಮೇರಿಕಾ ಚಿತ್ರ ನಿರ್ಮಾಣ ಮಾಡಿದ್ದೋ ಎಂದು ಹೇಳಿಕೊಳ್ತಿವಿ ಎಂದು ನಿರ್ಮಾಪಕರು ಹೇಳಿದರು.

Conclusion:ಇನ್ನೂ ಮೊದಲ ಚಿತ್ರದಲ್ಲೇ ಸಕ್ಸಸ್ ಸಿಕ್ಕಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಯೋಗಾನಂದ್ , ನನ್ನ ಮುಂದಿನ ಚಿತ್ರಕ್ಕೆ ಇದು ಸ್ಪೂರ್ತಿಯಾಗಿದೆ.ಅಲ್ಲದೆ ಜವಾಬ್ದಾರಿಯೂ ಹೆಚ್ಚಿದೆ ಎಂದು ನಿರ್ದೇಶಕ ಯೋಗನಾಂದ್ ಹರ್ಷ ವ್ಯಕ್ತಪಡಿಸಿದ್ರು.ಇನ್ನೂ ಚಿತ್ರದ ಸಕ್ಸಸ್ ಗೆ ಕನ್ನಡಿಗರಿಗೆ ಧನ್ಯವಾದ ಹೇಳಿದ ಅಧ್ಯಕ್ಷ ಹೊಸ ನಿರ್ದೇಶಕ ಹಾಗೂ ನಿರ್ಮಾಪಕರ ಕನಸು ಈ ಚಿತ್ರದ ಮೂಲಕ ಈಡೇರಿದೆ.ನಮ್ಮ ಚಿತ್ರ ಎಲ್ಲಾ ವಿಭಾಗದಲ್ಲೂ ಗೆದ್ದಿದೆ.ಅಲ್ಲದೆ ಅಧ್ಯಕ್ಷ ‌ಇನ್ ಅಮೇರಿಕಾ ಚಿತ್ರದ ಎರಡೆರಡು ಸಕ್ಸಸ್ ಮೀಟ್ ಮಾಡಿರೋದು ತುಂಬಾ ಖುಷಿಯಾಗ್ತಿದೆ ಎಂದು ಶರಣ್ ಹೇಳಿದ್ರು. ಇನ್ನೂ ಚಿತ್ರದಲ್ಲಿ ರಾಗಿಣಿ ಹಾಗೂ ಶರಣ್ ಅವರ ಕಾಂಬಿನೇಷನ್ ವರ್ಕ್ ಔಟ್ ಆಗಿದ್ದು ,ನಮ್ಮ ಜೋಡಿಯನ್ನು ಜನರು ಮೆಚ್ಚಿ ನಾವು ನೀರಿಕ್ಷೇ ಮಾಡದಷ್ಟು ಪ್ರೀತಿ ಹಂಚಿದ್ದಾರೆ.ನಾನು ಚಿತ್ರ ಸಕ್ಸಸ್ ಆಗುತ್ತೆ ಅಂತ ಗೊತ್ತಿತ್ತು ಅದ್ರೆ ಇಷ್ಟು ದೊಡ್ಡಮಟ್ಟದ ಗೆಲುವು ಸಿಗುತ್ತೆ ಅಂದು ಕೊಂಡಿರಲಿಲ್ಲ ನಮಗೆ ಇಷ್ಟು ಪ್ರೀತಿ ನೀಡಿದ ಕನ್ನಡಿಗರಿಗೆ ಎಷ್ಟು ಥ್ಯಾಂಕ್ಸ್ ಹೇಳಿದ್ರು‌ ಸಾಲದು ಎಂದು ನಟಿ ರಾಗಿಣಿ ಚಿತ್ರದ ಗೆಲುವಿಗೆ ಸಹಕರಿಸಿದ ಸಿನಿಪ್ರಿಯರಿಗೆ ಧನ್ಯವಾದ ಹೇಳಿದ್ರು.

ಸತೀಶ ಎಂಬಿ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.