ನಟ ಪುನೀತ್ ರಾಜ್‌ಕುಮಾರ್ ಅವರನ್ನು ಇಡೀ ದಕ್ಷಿಣ ಭಾರತ ಚಿತ್ರರಂಗವೇ ಮಿಸ್ ಮಾಡಿಕೊಳ್ಳುತ್ತಿದೆ. ಇತ್ತೀಚಿಗೆ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳೆಲ್ಲರೂ ಸೇರಿ 'ಪುನೀತ ನಮನ' ಕಾರ್ಯಕ್ರಮವನ್ನು ನಡೆಸಿದ್ದರು. ಅಷ್ಟರ ಮಟ್ಟಿಗೆ ಅಪ್ಪು ಎಲ್ಲರಲ್ಲೂ ಬೆರೆತು ಹೋಗಿದ್ದಾರೆ.
ಇದೀಗ ನಾಗಮಂಡಲ ಸಿನಿಮಾ ಖ್ಯಾತಿಯ ನಟಿ ವಿಜಯಲಕ್ಷ್ಮೀ (Actress Vijayalakshmi sings song in the memory Puneeth Rajkumar) ಅಪ್ಪುಗಾಗಿ ಗೀತೆ ಹಾಡಿದ್ದಾರೆ.
- " class="align-text-top noRightClick twitterSection" data="">
ಡಾ.ರಾಜ್‌ಕುಮಾರ್ ನಟನೆಯ ಕ್ರಾಂತಿವೀರ ಚಿತ್ರದ 'ಯಾರು ಏನು ಮಾಡುವರು' ಎಂಬ ಹಾಡು ಹಾಡಿರುವ ಅವರು ನಟ ಪುನೀತ್ ಅವರಿಗೆ ಗೀತ ನಮನ ಸಲ್ಲಿಸಿದ್ದಾರೆ.
'ನಾನು ಯಾವಾಗಲು ಟೀಕೆಯ ಭಯದಲ್ಲೇ ಇರುತ್ತೇನೆ. ಕೆಲವು ದಿನಗಳ ಹಿಂದೆ ನಾನು ಗೊಂಬೆ ಹೇಳುತೈತೆ, ಹಾಡು ಹಾಡಿದ್ದೆ. ಈ ಹಾಡನ್ನು ಕೇಳಿ ಮೈಸೂರಿನ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಸಂಘದಿಂದ ನನಗೆ ಕರೆ ಬಂದಿತ್ತು. ಚೆನ್ನಾಗಿ ಹಾಡಿದ್ದೀರಿ ಅಂತ ಮೆಚ್ಚುಗೆ ವ್ಯಕ್ತಪಡಿಸಿದ್ದರು' ಎಂದರು.
ಪುನೀತ್ ಮೇಲಿನ ಅಭಿಮಾನಕ್ಕಾಗಿ ನಾನು ಆ ಹಾಡನ್ನು ಹಾಡಿದ್ದು ಎಂದಿದ್ದು, ಪುನೀತ್ ಸರ್ ಮತ್ತು ನನ್ನ ಜನ್ಮದಿನಾಂಕ ಒಂದೇ. ಅದನ್ನು ಆಗಾಗ ಪಾರ್ವತಮ್ಮ ಅವರು ಕೂಡ ನೆನಪಿಸಿಕೊಳ್ಳುತ್ತಿದ್ದರು. ಅಪ್ಪಾಜಿ ಯಾರ ಮೇಲೂ ದ್ವೇಷ ಇಟ್ಟುಕೊಳ್ಳುತ್ತಿರಲಿಲ್ಲ, ಎಲ್ಲರನ್ನೂ ಕ್ಷಮಿಸುತ್ತಿದ್ದರು. ರಾಘಣ್ಣ ಮತ್ತು ಶಿವಣ್ಣ ಕೂಡ ಒಳ್ಳೆಯ ವ್ಯಕ್ತಿತ್ವದ ನಟರು ಎಂದು ಹೇಳಿದರು.
'ಪುನೀತ್ ರಾಜ್‌ಕುಮಾರ್ ಅದ್ಭುತ ಅಭಿನಯದ ಜೊತೆಗೆ ಸಾಕಷ್ಟು ಸಮಾಜಮುಖಿ ಕೆಲಸಗಳನ್ನು ಮಾಡಿದ್ದಾರೆ. ಸದಾ ಸಿನಿಮಾ ಹಾಗು ಜೀವನವನ್ನು ಬಹಳ ಪ್ರೀತಿಸುತ್ತಿದ್ದು, ಇವತ್ತು ಇಲ್ಲ ಅಂದರೆ ನಂಬೋಕೆ ಆಗೋಲ್ಲ' ಎಂದು ಭಾವುಕರಾದರು.
ವಿಶೇಷ ಅಂದ್ರೆ ನಟಿ ವಿಜಯಲಕ್ಷ್ಮೀ ತಲೆ ಕೂದಲು ಬೋಳಿಸಿಕೊಂಡಿದ್ದಾರೆ. ಈ ಬಗ್ಗೆ ಅಭಿಮಾನಿಗಳಿಗೆ ಕಾರಣ ತಿಳಿಸಿರುವ ಅವರು,' ನನಗೆ ಏನಾಯಿತು ಎಂದು ನೀವೆಲ್ಲಾ ಯೋಚನೆ ಮಾಡುತ್ತಿರಬಹುದು. ಇದು ನಮ್ಮ ಮನೆ ದೇವರ ಹರಕೆ. ಮೊದಲೆಲ್ಲಾ ಇದನ್ನು ತಂದೆ ಮಾಡುತ್ತಿದ್ದರು. ಈಗ ತಂದೆ ಇಲ್ಲ, ಅಕ್ಕನ ಆರೋಗ್ಯ ಸರಿಯಿಲ್ಲ. ಹಾಗಾಗಿ, ಹರಕೆಯ ಜವಾಬ್ದಾರಿ ನಾನು ತೆಗೆದುಕೊಂಡೆ. ಮನೆ ದೇವರಿಗೆ ಕೂದಲು ಕೊಟ್ಟಿದ್ದೇನೆ' ಎಂದರು.
ಇದನ್ನೂ ಓದಿ: ಬುರ್ಜ್ ಖಲೀಫಾದಲ್ಲಿ ಮುದ್ದುಮಗಳ ಹುಟ್ಟುಹಬ್ಬ ಆಚರಿಸಿದ ಅಲ್ಲು ಅರ್ಜುನ್