ಚಿಕ್ಕಮಗಳೂರು : ಖಾಸಗಿ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ಸ್ಪರ್ಧಿಯಾಗಿದ್ದ ಬಾಲಕಿ ಸಮನ್ವಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಕ್ಕೆ ಚಿಕ್ಕಮಗಳೂರಿನಲ್ಲಿ ನಟಿ ತಾರಾ ಸಂತಾಪ ಸೂಚಿಸಿದ್ದಾರೆ.
ಚಿಕ್ಕಮಗಳೂರು ನಗರದ ಹೊರವಲಯದಲ್ಲಿರುವ ಅರಣ್ಯ ಅಭಿವೃದ್ಧಿ ನಿಗಮದ ಆವರಣದಲ್ಲಿ ಗಿಡ ನೆಟ್ಟು ನಟಿ ತಾರಾ ಸಂತಾಪ ಸೂಚಿಸಿದ್ದಾರೆ. ಬಾಲಕಿಯ ಸಾವು ನ್ಯಾಯವಲ್ಲ, ನನಗೆ ತುಂಬಾ ದುಃಖ ಆಗುತ್ತಿದೆ. ಸಮನ್ವಿ ಇನ್ನಿಲ್ಲ ಅನ್ನೋ ಸುದ್ದಿ ಕೇಳಿ ನಾನು ಶಾಕ್ಗೆ ಒಳಗಾದೆ.
ಸಮನ್ವಿ ಒಂದು ರೀತಿಯ ಸ್ಪೆಷಲ್ ಮಗು. ನಾನು ಸಂಪಿಗೆ ಗಿಡವನ್ನು ನೆಟ್ಟು ಸಮನ್ವಿಯನ್ನು ಜೀವಂತವಾಗಿರಿಸಿದ್ದೇನೆ. ಆ ಸಂಪಿಗೆ ಗಿಡ ನಳನಳಿಸಿ, ಆಕೆ ಜೀವಂತವಾಗಿರುತ್ತಾಳೆ. ವಿ ರಿಯಲಿ ಲವ್ ಯೂ ಸಮನ್ವಿ ಎಂದು ನಟಿ ತಾರಾ ಕಂಬನಿ ಮಿಡಿದರು.
ಇದನ್ನೂ ಓದಿ: 'ನನ್ನಮ್ಮ ಸೂಪರ್ ಸ್ಟಾರ್' ರಿಯಾಲಿಟಿ ಶೋ ಬಾಲಕಿ ಸಾವು ಪ್ರಕರಣ : ಟಿಪ್ಪರ್ ಚಾಲಕ ಅರೆಸ್ಟ್