ಚಿರಂಜೀವಿ ಸರ್ಜಾ ಅಭಿನಯದ 'ಶಿವಾರ್ಜುನ' ಚಿತ್ರತಂಡ ಬಹುತೇಕ ಶೂಟಿಂಗ್ ಮುಗಿಸಿ ಡಬ್ಬಿಂಗ್ ಹಂತದಲ್ಲಿ ಬ್ಯುಸಿಯಾಗಿದೆ. ಚಿತ್ರದಲ್ಲಿ ಚಿರಂಜೀವಿ ತಾಯಿ ಪಾತ್ರದಲ್ಲಿ ತಾರಾ ನಟಿಸಿದ್ದಾರೆ. ಇತ್ತೀಚೆಗೆ ತಾರಾ ತಮ್ಮ ಭಾಗದ ಡಬ್ಬಿಂಗ್ ಮಾಡಿದ್ದಾರೆ. ವಿಶೇಷ ಎಂದರೆ ತಾರಾ ಪುತ್ರ ಕೂಡಾ ಈ ಸಿನಿಮಾಗೆ ಡಬ್ ಮಾಡಿದ್ದಾರೆ.
ತಾರಾ ಅವರ ಪುತ್ರ ಶ್ರೀಕೃಷ್ಣ ಕೂಡಾ 'ಶಿವಾರ್ಜುನ' ಚಿತ್ರಕ್ಕೆ ಡಬ್ಬಿಂಗ್ ಮಾಡಿದ್ದಾರೆ. 'ಶಿವಾರ್ಜುನ' ಚಿತ್ರದ ಮೂಲಕ ತಾರಾ ಪುತ್ರ ಶ್ರೀಕೃಷ್ಣ ಕೂಡಾ ಸ್ಯಾಂಡಲ್ವುಡ್ಗೆ ಕಾಲಿಟ್ಟಿದ್ದಾರೆ. ರಕ್ತದಲ್ಲೇ ಆ್ಯಕ್ಟಿಂಗ್ ಕಲೆ ಶ್ರೀಕೃಷ್ಣನಿಗೂ ಬಂದಿದೆ ಎಂದರೆ ತಪ್ಪಾಗುವುದಿಲ್ಲ. ಸಿನಿಮಾದಲ್ಲಿ ಕೂಡಾ ಶ್ರೀಕೃಷ್ಣ ತಾರಾ ಪುತ್ರನಾಗಿ ನಟಿಸಿದ್ದಾರೆ. ರಿಯಲ್ ಲೈಫ್‌ನ ಅಮ್ಮ-ಮಗ ರೀಲ್ನಲ್ಲೂ ಅಮ್ಮ-ಮಗನಾಗಿ ನಟಿಸಿದ್ದಾರೆ. ಶ್ರೀಕೃಷ್ಣ ಮೊದಲ ಬಾರಿಗೆ ಡಬ್ ಮಾಡಿದ್ದಾರೆ. ತಾರಾ ಕೂಡಾ ಮಗನಿಗೆ ಡಬ್ಬಿಂಗ್ ಪಾಠ ಮಾಡಿದ್ದಾರೆ. ಚಿತ್ರವನ್ನು ಶಿವತೇಜ್ ನಿರ್ದೇಶನ ಮಾಡಿದ್ದು ನಿಶ್ಚಿತಾ ಕಂಬೈನ್ಸ್ ಲಾಂಛನದಲ್ಲಿ ಎಂ.ಬಿ. ಮಂಜುಳ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಚಿತ್ರ ಆ್ಯಕ್ಷನ್ ಹಾಗೂ ಫ್ಯಾಮಿಲಿ ಸೆಂಟಿಮೆಂಟ್ ಕಥೆಯಾಗಿದೆ ಎಂದು ಚಿತ್ರತಂಡ ಹೇಳಿದೆ.