ಹೈದರಾಬಾದ್: ಮಹಾಮಾರಿ ಕೊರೊನಾ ಸೋಂಕಿಗೊಳಗಾಗಿದ್ದ ನಟಿ ತಮನ್ನಾ ಬಾಟಿಯಾ ಇದೀಗ ವೈರಸ್ನಿಂದ ಸಂಪೂರ್ಣವಾಗಿ ಗುಣಮುಖರಾಗಿ, ಮುಂಬೈ ನಿವಾಸದಲ್ಲಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ.
ಹೈದರಾಬಾದ್ಗೆ ಜಾಹೀರಾತು ಚಿತ್ರೀಕರಣಕ್ಕಾಗಿ ಬಂದಿದ್ದ ವೇಳೆ ಅವರು ಸೋಂಕಿಗೊಳಗಾಗಿದ್ದರು. ಹೀಗಾಗಿ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಇದೀಗ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗಿರುವ ಅವರು ಇದೇ ತಿಂಗಳ 6ರಂದು ಡಿಸ್ಚಾರ್ಜ್ ಆಗಿದ್ದರು.
-
Words cannot describe how grateful I am to the doctors, nurses and the staff at @Continental_hyd. I was so sick, weak & scared but the you made sure that I was comfortable and treated in the best possible way. The kindness, sincere caring, and concern made everything better! 🙏🏼😇 pic.twitter.com/nSKBC19UwU
— Tamannaah Bhatia (@tamannaahspeaks) October 17, 2020 " class="align-text-top noRightClick twitterSection" data="
">Words cannot describe how grateful I am to the doctors, nurses and the staff at @Continental_hyd. I was so sick, weak & scared but the you made sure that I was comfortable and treated in the best possible way. The kindness, sincere caring, and concern made everything better! 🙏🏼😇 pic.twitter.com/nSKBC19UwU
— Tamannaah Bhatia (@tamannaahspeaks) October 17, 2020Words cannot describe how grateful I am to the doctors, nurses and the staff at @Continental_hyd. I was so sick, weak & scared but the you made sure that I was comfortable and treated in the best possible way. The kindness, sincere caring, and concern made everything better! 🙏🏼😇 pic.twitter.com/nSKBC19UwU
— Tamannaah Bhatia (@tamannaahspeaks) October 17, 2020
ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗಿರುವ ತಮನ್ನಾ, ತನಗೆ ಚಿಕಿತ್ಸೆ ನೀಡಿರುವ ವೈದ್ಯರು ಹಾಗೂ ನರ್ಸ್ಗಳೊಂದಿಗೆ ಫೋಟೋ ತೆಗೆಯಿಸಿಕೊಂಡು ತಮ್ಮ ಟ್ವಿಟರ್ನಲ್ಲಿ ಹಾಕಿಕೊಂಡಿದ್ದಾರೆ. ವೈದ್ಯರು, ದಾದಿಯರು ಮತ್ತು ಸಿಬ್ಬಂದಿಗೆ ನಾನು ಕೃತಜ್ಞನಾಗಿದ್ದೇನೆ. ಅವರ ಬಗ್ಗೆ ವಿವರಿಸಲು ಪದಗಳು ಸಿಗುತ್ತಿಲ್ಲ. ನಾನು ತುಂಬಾ ಅನಾರೋಗ್ಯ, ದುರ್ಬಲ ಮತ್ತು ಭಯಭೀತಳಾಗಿದ್ದೇನು. ಆದರೆ ಇದೀಗ ಆರೋಗ್ಯವಾಗಿದ್ದು, ದೇವರ ದಯೆ, ಪ್ರಾಮಾಣಿಕ ಕಾಳಜಿ ನನ್ನನ್ನು ಬಲಿಷ್ಠಗೊಳಿಸಿದೆ ಎಂದಿದ್ದಾರೆ. ಇದೇ ವೇಳೆ, ನನ್ನ ಚೇತರಿಕೆಗೋಸ್ಕರ ಹಾರೈಸಿದ ಅಭಿಮಾನಿಗಳಿಗೂ ಧನ್ಯವಾದಗಳು ಎಂದಿದ್ದಾರೆ.