ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಮತದಾನ ಮಾಡಿರುವ ಮಂಡ್ಯದ ಜನರಿಗೆ, ಅಭಿಮಾನಿಗಳಿಗೆ ಹಾಗೂ ಸ್ನೇಹಿತರಿಗೆ ಧನ್ಯವಾದ ತಿಳಿಸಿದ್ದಾರೆ.
ಇಂದು ತಮ್ಮ ಫೇಸ್ಬುಕ್ನಲ್ಲಿ ಕೃತಜ್ಞತೆ ಸಲ್ಲಿಸಿರುವ ಅವರು, 'ಅಂಬರೀಶ್ ಅಭಿಮಾನಿಗಳಿಗೆ ನೀವು ಕೃತಜ್ಞತೆ ಸಲ್ಲಿಸಿಲ್ಲ ಎಂದು ತುಂಬಾ ಅಭಿಮಾನಿಗಳು ಪ್ರಶ್ನಿಸುತ್ತಿದ್ದರು. ನಮ್ಮ ಮನೆಯ ಸದಸ್ಯರಂತಿರುವ ಅಂಬರೀಶ್ ಅಭಿಮಾನಿಗಳಿಗೆ ಹೇಗೆ ನಾನು ಕೃತಜ್ಞತೆ ಸಲ್ಲಿಸಲಿ? ಯಾವ ರೂಪದಲ್ಲಿ ಕೃತಜ್ಞತೆ ಸಲ್ಲಿಸಲಿ?
ಗೊತ್ತು ನನಗೆ ರಾಜ್ಯದ ಮೂಲೆ ಮೂಲೆಗಳಿಂದ ಅಂಬರೀಶ್ ಅಭಿಮಾನಿಗಳು ನನ್ನನ್ನು ಹುರಿದುಂಬಿಸಿದ್ದಾರೆ. ಮಂಡ್ಯದ ಜನತೆಯಲ್ಲಿ ಸದಾ ವಿನಂತಿಸಿಕೊಂಡಿದ್ದಾರೆ. ಅಮ್ಮನನ್ನು ಗೆಲ್ಲಿಸಿ, ಅತ್ತಿಗೆಯನ್ನು ಗೆಲ್ಲಿಸಿ, ಅಕ್ಕನನ್ನು ಗೆಲ್ಲಿಸಿ ಎಂದು. ಈ ಪ್ರೀತಿ ಸಂಪಾದನೆ ಮಾಡಿರುವ ಅಂಬರೀಶ್ ಆಸ್ತಿಯನ್ನು ಕಾಪಾಡಿಕೊಳ್ಳುವುದು ನನ್ನ ಧರ್ಮ.
ಅಂಬರೀಶ್ ಅನ್ನುವ ಶಕ್ತಿಯೊಂದಿಗೆ ದರ್ಶನ್, ಯಶ್ ಅನ್ನುವ ಶಕ್ತಿಯೂ ಒಟ್ಟಾಗಿವೆ. ಈಗ ಪ್ರತಿಯೊಬ್ಬರೂ ನಮ್ಮ ಮನೆಯ ಸದಸ್ಯರೇ. ಈ ಸದಸ್ಯರಲ್ಲಿ ಯಾವುದೇ ಭೇದ ಭಾವಗಳಿಲ್ಲ. ಎಲ್ಲರೂ ಒಟ್ಟಾಗಿ ನನ್ನ ಬೆಂಗಾವಲಾಗಿ ನಿಂತು ನನ್ನನ್ನು ಬೆಂಬಲಿಸಿದ್ದೀರಿ. ಅಷ್ಟೇ ಅಲ್ಲದೆ ನನ್ನ ಈ ನಡೆಯನ್ನು ನನ್ನ ಹೋರಾಟವನ್ನು ಮೆಚ್ಚಿ ಸಾಕಷ್ಟು ಜನ ರಾಜ್ಯದ ಮೂಲೆ ಮೂಲೆಗಳಿಂದ ನನ್ನನ್ನು ಬೆಂಬಲಿಸಿದ್ದಾರೆ. ಅವರಿಗೂ ನನ್ನ ವಿಶೇಷವಾದ ಕೃತಜ್ಞತೆಗಳು. ಅಲ್ಲದೆ ಈ ಚುನಾವಣೆಯಲ್ಲಿ ಫಲಿತಾಶ ಏನೇ ಬರಲಿ ,ಈ ಹೋರಾಟದ ಹಾದಿಯಲ್ಲಿ ನನ್ನ ಜೊತೆ ಹೆಜ್ಜೆ ಹಾಕಿದ ಎಲ್ಲರಿಗೂ ನನ್ನ ಅಂತರಾಳದ ಕೃತಜ್ಙತೆಗಳು. ಸದಾ ನಿಮ್ಮ ಜೊತೆಗಿರುತ್ತೇನೆ' ಎಂದು ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ.