ನಾಗಚೈತನ್ಯ ಜೊತೆ ವೈವಾಹಿಕ ಸಂಬಂಧ ಕಡಿದುಕೊಂಡ ಬಳಿಕ ನಟಿ ಸಮಂತಾ ಒಂದರ ಹಿಂದೊಂದು ಸಿನಿಮಾಗಳನ್ನು ಒಪ್ಪಿಕೊಂಡಿದ್ದರು. ಇದೀಗ ಸಮಂತಾ ತಮ್ಮ ವೃತ್ತಿ ಜೀವನದಲ್ಲಿಯೇ ಮೊದಲ ಬಾರಿಗೆ ಐಟಂ ಸಾಂಗ್ವೊಂದರಲ್ಲಿ ನಟಿಸಿ ಸುದ್ದಿಯಾಗಿದ್ದಾರೆ.
ನಟ ಅಲ್ಲು ಅರ್ಜುನ್ ಅವರ ಪುಷ್ಪ ಸಿನಿಮಾದಲ್ಲಿ ನಟಿ ಸಮಂತಾ ಐಟಂ ಸಾಂಗ್ವೊಂದರಲ್ಲಿ ಸೊಂಟ ಬಳುಕಿಸಿದ್ದಾರೆ. ಪುಷ್ಪಾ ಸಿನಿಮಾದ ಈ ವಿಶೇಷ ಹಾಡಿನ ಚಿತ್ರೀಕರಣ ಹೈದರಾಬಾದ್ನ ರಾಮೋಜಿ ಫಿಲ್ಮ್ ಸಿಟಿಯ ಅದ್ಧೂರಿ ಸೆಟ್ನಲ್ಲಿ ನಡೆಸಲಾಗುತ್ತಿದೆ. 5 ದಿನಗಳ ಕಾಲ ಹಾಡಿನ ಚಿತ್ರೀಕರಣ ನಡೆಯಲಿದೆ ಎಂದು ವರದಿಯಾಗಿದೆ.
ಈ ಹಾಡನ್ನು ದೇವಿಶ್ರೀ ಪ್ರಸಾದ್ ಸಂಯೋಜಿಸಿದ್ದಾರೆ. ಸುಕುಮಾರ್ ನಿರ್ದೇಶನದ ಪುಷ್ಪಾ ಡಿಸೆಂಬರ್ 17ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗಿದೆ.