ETV Bharat / sitara

ಏನಿಲ್ಲ.. ಏನಿಲ್ಲ ನನ್ನ ಅವನ ನಡುವೆ ಏನಿಲ್ಲ...! - ನಟಿ ರಶ್ಮಿಕಾ ಮಂದಣ್ಣ

ಖಾಸಗಿ ಎಫ್​​​ಎಂ ರೆಡಿಯೋಗೆ ನೀಡಿರುವ ಸಂದರ್ಶನದಲ್ಲಿ ವಿಜಯ್ ಹಾಗೂ ತಮ್ಮ ನಡುವಿನ ಗೆಳೆತನದ ಬಗ್ಗೆ ರಶ್ಮಿಕಾ ಮಾತನಾಡಿದ್ದಾರೆ. ವಿಜಯ್ ನಂಗೆ ಒಳ್ಳೆಯ ಸ್ನೇಹಿತನಷ್ಟೆ ಎಂದು ಕಡ್ಡಿಮುರಿದಂತೆ ಉತ್ತರ ಕೊಟ್ಟಿದ್ದಾರೆ ಮಡಿಕೇರಿ ಬೆಡಗಿ.

actress Rashmika Mandanna
author img

By

Published : Aug 17, 2019, 1:31 PM IST

ತಮ್ಮ ಹಾಗೂ ವಿಜಯ್ ದೇವರಕೊಂಡ ಬಗ್ಗೆ ಕೇಳಿ ಬರುತ್ತಿರುವ ಡೇಟಿಂಗ್ ವದಂತಿಗೆ ನಟಿ ರಶ್ಮಿಕಾ ಮಂದಣ್ಣ ಫುಲ್​ ಸ್ಟಾಪ್​ ನೀಡಿದ್ದಾರೆ.

ಬಹುಭಾಷಾ ತಾರೆ ರಶ್ಮಿಕಾ ಮಂದಣ್ಣ ಬೇಡದ ವಿಚಾರಗಳಿಂದಲೇ ಸಾಕಷ್ಟು ಸುದ್ದಿಯಾಗುತ್ತಿರುತ್ತಾರೆ. ಈಗ ಮತ್ತೆ ತೆಲುಗು ನಟ ವಿಜಯ್ ದೇವರಕೊಂಡ ಅವರ ವಿಚಾರವಾಗಿ ಈ ನಟಿಯ ಹೆಸರು ಸಖತ್​ ಸದ್ದು ಮಾಡುತ್ತಿದೆ. 'ಗೀತ ಗೋವಿಂದಂ' ಹಾಗೂ 'ಡಿಯರ್ ಕಾಮ್ರೇಡ್' ಸಿನಿಮಾಗಳಲ್ಲಿ ಜತೆಯಾಗಿ ನಟಿಸಿರುವ ಈ ಜೋಡಿ ಡೇಟಿಂಗ್​ನಲ್ಲಿದೆ ಎನ್ನುವ ಗುಲ್ಲು ಇಡೀ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಹರಿದಾಡುತ್ತಿದೆ. ಆದರೆ, ಈ ರೂಮರ್​​ ತಳ್ಳಿ ಹಾಕಿರುವ ರಶ್ಮಿಕಾ, ನಾವಿಬ್ಬರು ಜಸ್ಟ್​ ಫ್ರೆಂಡ್ಸ್​ ಮಾತ್ರ ಎಂದಿದ್ದಾರೆ.

actress Rashmika Mandanna
ವಿಜಯ್ ಜತೆ ರಶ್ಮಿಕಾ

ಖಾಸಗಿ ಎಫ್​​​ಎಂ ರೆಡಿಯೋಗೆ ನೀಡಿರುವ ಸಂದರ್ಶನದಲ್ಲಿ ವಿಜಯ್ ಹಾಗೂ ತಮ್ಮ ನಡುವಿನ ಗೆಳೆತನದ ಬಗ್ಗೆ ಮಾತಾಡಿದ್ದಾರೆ. ವಿಜಯ್ ನಂಗೆ ಒಳ್ಳೆಯ ಸ್ನೇಹಿತನಷ್ಟೆ ಎಂದು ಕಡ್ಡಿಮುರಿದಂತೆ ಉತ್ತರ ಕೊಟ್ಟಿದ್ದಾರೆ.

ಕನ್ನಡ ಚಿತ್ರಗಳಿಂದ ಸಿನಿರಂಗಕ್ಕೆ ಕಾಲಿಟ್ಟ ಈ ನಟಿ ಸದ್ಯ ಟಾಲಿವುಡ್​ಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಮೊನ್ನೆಯಷ್ಟೆ ಅರ್ಜುನ್ ರೆಡ್ಡಿ ಸ್ಟಾರ್ ವಿಜಯ್ ದೇವರಕೊಂಡ ಜತೆ ನಟಿಸಿದ್ದ ಡಿಯರ್ ಕಾಮ್ರೇಡ್ ಸಿನಿಮಾ ನಾಲ್ಕು ಭಾಷೆಯಲ್ಲಿ ತೆರೆಕಂಡಿತು. ಬಿಡುಗಡೆ ಮುನ್ನ ಸಖತ್ ಹೈಪ್ ಕ್ರಿಯೇಟ್ ಮಾಡಿದ್ದ ಈ ಸಿನಿಮಾ ಗಲ್ಲಾ ಪೆಟ್ಟಿಗೆಯಲ್ಲಿ ಮಕಾಡೆ ಮಲಗಿತು. ವಿಜಯ್ ಹಾಗೂ ರಶ್ಮಿಕಾ ಕಾಲಿಗೆ ಚಕ್ರಕಟ್ಟಿಕೊಂಡು ಈ ಚಿತ್ರ ಪ್ರಮೋಷನ್ ಮಾಡಿದ್ದರೂ ಕೂಡ ನಿರೀಕ್ಷಿತ ಗೆಲುವು ಡಿಯರ್ ಕಾಮ್ರೇಡ್​ಗೆ ಕೊಡಲಿಲ್ಲ ಸಿನಿ ರಸಿಕರು.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.