90ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಮಿಂಚಿದವರಲ್ಲಿ ಓಂ ಸಿನಿಮಾ ಖ್ಯಾತಿಯ ಪ್ರೇಮಾ ಕೂಡ ಒಬ್ಬರು. ಆ ಕಾಲದಲ್ಲಿಯೇ ಸ್ಯಾಂಡಲ್‌ವುಡ್ ಸಕ್ಸಸ್ ಫುಲ್ ನಟಿಯಾಗಿದ್ದರು. ವಿವಾಹದ ಬಳಿಕ ಚಿತ್ರರಂಗದಿಂದ ದೂರ ಉಳಿದಿದ್ದ ನಟಿ, ಉಪೇಂದ್ರ ಮತ್ತೆ ಹುಟ್ಟಿ ಬಾ ಸಿನಿಮಾದಿಂದ ಕಮ್ ಬ್ಯಾಕ್ ಮಾಡಿದ್ದ ಪ್ರೇಮಾ, ಈ ಸಿನಿಮಾ ಆದ್ಮೇಲೆ ಮತ್ತೆ ಯಾವ ಚಿತ್ರದಲ್ಲೂ ನಟಿಸಲಿಲ್ಲ. ಇದೀಗ ವೆಡ್ಡಿಂಗ್ ಗಿಫ್ಟ್ ಸಿನಿಮಾದ ಮೂಲಕ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ.
ಬಹುತೇಕ ಚಿತ್ರೀಕರಣ ಮುಗಿಸಿರುವ ವೆಡ್ಡಿಂಗ್ ಗಿಫ್ಟ್ ಚಿತ್ರತಂಡ, ಸದ್ಯ ಡಬ್ಬಿಂಗ್ ಮಾಡೋದ್ರಲ್ಲಿ ಬ್ಯುಸಿಯಾಗಿದೆ. ಇಂದು ನಾಗರಭಾವಿಯ ಸಾಧುಕೋಕಿಲ ಸ್ಟುಡಿಯೋದಲ್ಲಿ ಪ್ರೇಮಾ, ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮಾಡುತ್ತಿದ್ದರು. ಮೊದಲ ಬಾರಿಗೆ ವಕೀಲೆ ಪಾತ್ರವನ್ನು ನಿರ್ವಹಿಸುತ್ತಿರುವ ಅವರು ಸಮಯ ತೆಗೆದುಕೊಂಡು ತಮ್ಮ ಪಾತ್ರಕ್ಕೆ ಧ್ವನಿ ನೀಡುತ್ತಿದ್ದಾರೆ.
ಎಲ್ಲಾ ಸಿನಿಮಾಗಳನ್ನು ಒಪ್ಪಿಕೊಳ್ಳುವುದಿಲ್ಲ. ಪಾತ್ರ ಉತ್ತಮವಾಗಿದ್ದರಷ್ಟೇ ಒಪ್ಪಿಕೊಳ್ಳುತ್ತೇನೆ. ಈ ಚಿತ್ರಕಥೆ ಕೇಳಿದಾಗ ಒಳ್ಳೆಯ ಸಿನಿಮಾ ಎಂದೆನಿಸಿತು. ಇದು ಉತ್ತಮ ಸಂದೇಶವಿರುವ ಚಿತ್ರ. ಹಾಗಾಗಿ ನಟಿಸಿದ್ದೇನೆ. ನಾನು ಹಣಕ್ಕಾಗಿ ಸಿನಿಮಾಗಳನ್ನು ಮಾಡಲ್ಲ. ಸಿನಿಮಾ ಮೇಲಿನ ಪ್ರೀತಿ ಹಾಗೂ ಫ್ಯಾಷನ್ ಗಾಗಿ ಸಿನಿಮಾಗಳನ್ನು ಮಾಡುತ್ತೇನೆ ಎಂದು ಪ್ರೇಮಾ ಹೇಳಿದರು.
ಇದನ್ನೂ ಓದಿ:"ದೇವರು ನನ್ನ ಬ್ರಾ ಸೈಜ್ ತೆಗೆದುಕೊಳ್ಳುತ್ತಿದ್ದಾನೆ": ವಿವಾದಾತ್ಮಕ ಹೇಳಿಕೆ ನೀಡಿದ ನಟಿ ಶ್ವೇತಾ ತಿವಾರಿ
ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಬಳಿ ಸಹಾಯ ನಿರ್ದೇಶಕನಾಗಿ ಕೆಲಸ ಮಾಡಿದ್ದ ವಿಕ್ರಂ ಪ್ರಭು ವೆಡ್ಡಿಂಗ್ ಗಿಫ್ಟ್ ಸಿನಿಮಾವನ್ನು ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ಪ್ರೇಮಾ ಜೊತೆಗೆ ಯುವ ನಟ ನಿಶಾನ್ ನಾಣಯ್ಯ ಹಾಗೂ ಸೋನುಗೌಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಚ್ಯುತ್ ಕುಮಾರ್, ಪವಿತ್ರ ಲೋಕೇಶ್ ಸೇರಿದಂತೆ ಸಾಕಷ್ಟು ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಗಂಡ ಹಾಗೂ ಹೆಂಡತಿ ನಡುವೆ ನಡೆಯುವ ಕಥಾಹಂದರ ಹೊಂದಿರುವ ಚಿತ್ರ ವೆಡ್ಡಿಂಗ್ ಗಿಫ್ಟ್ ಆಗಿದೆ. ಕೊರೊನಾ ಕಡಿಮೆ ಆದಮೇಲೆ ಸಿನಿಮಾ ಬಿಡುಗಡೆಗೆ ನಿರ್ದೇಶಕ ವಿಕ್ರಂ ಪ್ರಭು ಪ್ಲಾನ್ ಮಾಡಿಕೊಂಡಿದ್ದಾರೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ