ಪೊರ್ಕಿ, ಜರಾಸಂಧ, ಬ್ರಹ್ಮ.. ಹೀಗೆ ಹಲವು ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ನಟಿ ಪ್ರಣೀತಾ ಸುಭಾಷ್. ಕನ್ನಡ ಮಾತ್ರವಲ್ಲದೆ ಇವರು ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಮಿಂಚುತ್ತಿದ್ದು, ಉದ್ಯಮಿ ನಿತೀನ್ ಎಂಬವರೊಂದಿಗೆ ರಹಸ್ಯವಾಗಿ ಮದುವೆ ಆಗಿದ್ದಾರೆ ಎಂಬ ಮಾಹಿತಿ ದೊರೆತಿದೆ.

ಕನಕಪುರ ರಸ್ತೆಯ ರೆಸಾರ್ಟ್ ಒಂದರಲ್ಲಿ ಕೆಲವೇ ಕೆಲವು ಆಪ್ತರ ಸಮ್ಮುಖದಲ್ಲಿ ಪ್ರಣೀತಾ ಹಸೆಮಣೆ ಏರಿದ್ದಾರೆ ಎಂದು ಹೇಳಲಾಗ್ತಿದೆ. ಈ ಸುದ್ದಿ ವೈರಲ್ ಆಗುತ್ತಿದ್ದಂತೆ, ಪ್ರಣೀತಾ ಅವರಿಗೆ ಕರೆ ಮಾಡಿ, "ಏನ್ ಮೇಡಂ, ಮದುವೆ ಆದ್ರಂತೆ ನಿಜಾನಾ? ಅಂತ ಕೇಳಿದ್ರೆ, ಅದಕ್ಕವರು, ಯಾರು ಹೇಳಿದ್ದು?, ಆ ರೀತಿ ಮದುವೆ ಆದ್ರೆ ನಾನು ನಿಮಗೆ ಹೇಳಲ್ವಾ? " ಅಂತ ಉತ್ತರ ಕೊಟ್ಟಿದ್ದಾರೆ.

ಇದೀಗ ಪ್ರಣೀತಾ ಉದ್ಯಮಿ ರಾಜೀವ್ ಜೊತೆ ಮದುವೆ ಆಗಿದ್ದಾರೆ ಎನ್ನಲಾದ ಫೋಟೋ ಒಂದು ವೈರಲ್ ಆಗಿದೆ. ಗಾಂಧಿನಗರದ ಜನ ಹೇಳುವ ಪ್ರಕಾರ, ಪ್ರಣೀತಾ ಅವರಿಗೆ ಮದುವೆ ಆಗಿರುವುದು ನಿಜ. ಆದ್ರೆ, ಈ ಬಗ್ಗೆ ಅವರೇ ಬಂದು ಸ್ಪಷ್ಟನೆ ಕೊಡಬೇಕಷ್ಟೆ.