ಅಕ್ಟೋಬರ್ 4 ರಂದು ಮೇಘನಾ ರಾಜ್ ಸೀಮಂತ ಕಾರ್ಯ ಕೆಲವೇ ಆಪ್ತರು ಹಾಗೂ ಕುಟುಂಬದ ಸಮ್ಮುಖದಲ್ಲಿ ಸರಳವಾಗಿ ನೆರವೇರಿದೆ. ಚಿರಂಜೀವಿ ಸರ್ಜಾ ಕಟೌಟ್ ಪಕ್ಕದಲ್ಲೇ ಮೇಘನಾರನ್ನು ಕೂರಿಸಿ ಮಡಿಲು ತುಂಬಿ ಸಂಪ್ರದಾಯಬದ್ಧವಾಗಿ ಶಾಸ್ತ್ರ ಮಾಡಲಾಗಿದೆ. ಮೇಘನಾ ಸ್ನೇಹಿತರು, ಆಪ್ತರು ಮಾತ್ರವಲ್ಲ ಇಡೀ ರಾಜ್ಯದ ಜನತೆಯೇ ಮೇಘನಾ ರಾಜ್ಗೆ ಶುಭ ಹಾರೈಸಿದ್ದಾರೆ.
![Navya nair blessed to Meghana raj](https://etvbharatimages.akamaized.net/etvbharat/prod-images/9078980_948_9078980_1602040217222.png)
'ಗಜ' ಚಿತ್ರದ ನಾಯಕಿ ನವ್ಯಾ ನಾಯರ್ ಕೂಡಾ ಮೇಘನಾಗೆ ಶುಭ ಹಾರೈಸಿದ್ದಾರೆ. ನವ್ಯಾ ನಾಯರ್ ಹಾಗೂ ಮೇಘನಾ ರಾಜ್ ಇದುವರೆಗೂ ಒಬ್ಬರಿಗೊಬ್ಬರು ಮಾತನಾಡಿಲ್ಲ, ಭೇಟಿ ಆಗಿಲ್ಲ. ಆದರೂ ಮೇಘನಾಗೆ ನವ್ಯಾ ತಮ್ಮ ಇನ್ಸ್ಟಾಗ್ರಾಮ್ ಮೂಲಕ ಸಾಂತ್ವನದ ಮಾತುಗಳನ್ನು ಆಡಿ ಶುಭ ಹಾರೈಸಿದ್ದಾರೆ. 'ತಾಯಿ ಆಗುತ್ತಿರುವ ಮೇಘನಾ ರಾಜ್ಗೆ ಒಳ್ಳೆಯದಾಗಲಿ, ಬ್ಲೆಸ್ ಯು ವಿತ್ ಗ್ರೇಟ್ ಚೈಲ್ಡ್, ನಿಮ್ಮ ಭವಿಷ್ಯ ಚೆನ್ನಾಗಿರಲಿ' ಎಂದು ಬಯಸಿದ್ದಾರೆ.
ನವ್ಯಾ ನಾಯರ್ ಮಲಯಾಲಂ ಮಾತ್ರವಲ್ಲದೆ ತಮಿಳು, ಕನ್ನಡ ಭಾಷೆಗಳಲ್ಲೂ ನಟಿಸಿದ್ದಾರೆ. ಕನ್ನಡದಲ್ಲಿ ದರ್ಶನ್ ಜೊತೆ 'ಗಜ' ಚಿತ್ರದ ಮೂಲಕ ಆ್ಯಕ್ಟಿಂಗ್ ಆರಂಭಿಸಿದ ನವ್ಯಾ ನಾಯರ್ ಡಾ. ವಿಷ್ಣುವರ್ಧನ್ ಜೊತೆ 'ನಮ್ ಯಜಮಾನ್ರು', ಶಿವಣ್ಣ ಜೊತೆ 'ಭಾಗ್ಯದ ಬಳೆಗಾರ', ಮತ್ತೆ ದರ್ಶನ್ ಜೊತೆ 'ಬಾಸ್', ರವಿಚಂದ್ರನ್ ಜೊತೆ 'ದೃಶ್ಯ' ಸಿನಿಮಾದಲ್ಲಿ ನಟಿಸಿ ಹೆಸರು ಮಾಡಿದ್ದಾರೆ.
![Navya nair blessed to Meghana raj](https://etvbharatimages.akamaized.net/etvbharat/prod-images/drishyam-remake--navya-nair-11602036059666-41_0710email_1602036070_928.jpg)