ದಿನೇ ದಿನೆ ಹೆಚ್ಚಾಗುತ್ತಿರುವ ಕೊರೊನಾದಿಂದ ಜನ ಕಂಗೆಟ್ಟಿದ್ದಾರೆ. ಸದ್ಯ ಸೋಂಕಿತರಿಗೆ ಆಕ್ಸಿಜನ್, ರೆಮ್ಡೆಸಿವಿರ್, ಪ್ಲಾಸ್ಮಾ ಅಗತ್ಯವಿದೆ. ಈ ನಿಟ್ಟಿನಲ್ಲಿ ನಟಿ ಕಾವ್ಯಾ ಶಾಸ್ತ್ರಿ ಪ್ಲಾಸ್ಮಾ ಡೊನೇಟ್ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಕಳೆದ ನವೆಂಬರ್ನಲ್ಲಿಯೇ ಕಾವ್ಯಾ ಅವರಿಗೆ ಕೋವಿಡ್ ಸೋಂಕು ತಗುಲಿತ್ತು. ಅದರಿಂದ ಚೇತರಿಕೆಯನ್ನೂ ಕಂಡಿದ್ದರು. ಪ್ಲಾಸ್ಮಾ ದಾನ ಕುರಿತು ಸಾಕಷ್ಟು ಚರ್ಚೆಗಳು ನಡೆದಿಯುವುದನ್ನು ಗಮನದಲ್ಲಿಟ್ಟುಕೊಂಡು ಪ್ಲಾಸ್ಮಾ ದಾನ ಮಾಡಿದ್ದಾರೆ.
ಈ ಕುರಿತು ತಮ್ಮ ಇನ್ಸ್ಸ್ಟಾಗ್ರಾಂ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು , ಕಳೆದ ಕೋವಿಡ್ ಸಮಯದಲ್ಲಿಯೇ ನಾನು ಪ್ಲಾಸ್ಮಾ ನೀಡಬೇಕಿತ್ತು. ಆಗ ಹಿಮೋಗ್ಲೊಬಿನ್ ಪ್ರಮಾಣ ಕಡಿಮೆ ಇದ್ದಿದ್ದರಿಂದ ಸಾಧ್ಯವಾಗಿರಲಿಲ್ಲ. ಈ ಸಲ ರಕ್ತದ ಪ್ರಮಾಣ ಹೆಚ್ಚಿಸಿಕೊಂಡು ಪ್ಲಾಸ್ಮಾ ನೀಡಿದ್ದೇನೆ. ಕೋವಿಡ್ನಿಂದ ಸುಧಾರಿಸಿಕೊಂಡು 28 ದಿನಗಳ ನಂತರ 6 ತಿಂಗಳ ಒಳಗೆ ಪ್ಲಾಸ್ಮಾ ನೀಡಬಹುದು.
ನಮ್ಮ ತಂದೆಯವರೆಗೂ ಕೋವಿಡ್ ಆದಾಗ ದಾನಿಯೊಬ್ಬರು ಪ್ಲಾಸ್ಮಾ ನೀಡಿದ್ದರು. ಅದರ ಮಹತ್ವ ಗೊತ್ತಾಗಿ ಇದೀಗ ನಾನೇ ನೀಡಿದ್ದೇನೆ. ಈಗ ಪ್ಲಾಸ್ಮಾ ನೀಡಲು ಜನ ಮುಂದೆ ಬರುತ್ತಿಲ್ಲ. ಭಯದಲ್ಲಿಯೇ ಇದ್ದಾರೆ. ಆ ಕಾರಣಕ್ಕೆ ನಾನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದೇನೆ. ಹೀಗಾದರೂ ಜನರು ಪ್ಲಾಸ್ಮಾ ನೀಡಬಹುದು ಎಂಬುದು ನನ್ನ ಆಶಯ ಅಂತಾ ಕಾವ್ಯ ಶಾಸ್ತ್ರೀ ಹೇಳಿದ್ದಾರೆ.
https://www.instagram.com/p/COZbyuzj7nl/?igshid=cqwn9yhtwi8
ಪ್ಲಾಸ್ಮಾ ದಾನ ಮಾಡಿದ ನಟಿ ಕಾವ್ಯ ಶಾಸ್ತ್ರೀ - ಪ್ಲಾಸ್ಮಾ ದಾನ
ನಮ್ಮ ತಂದೆಯವರೆಗೂ ಕೋವಿಡ್ ಆದಾಗ ದಾನಿಯೊಬ್ಬರು ಪ್ಲಾಸ್ಮಾ ನೀಡಿದ್ದರು. ಅದರ ಮಹತ್ವ ಗೊತ್ತಾಗಿ ಇದೀಗ ನಾನೇ ನೀಡಿದ್ದೇನೆ. ಈಗ ಪ್ಲಾಸ್ಮಾ ನೀಡಲು ಜನ ಮುಂದೆ ಬರುತ್ತಿಲ್ಲ. ಭಯದಲ್ಲಿಯೇ ಇದ್ದಾರೆ. ಆ ಕಾರಣಕ್ಕೆ ನಾನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದೇನೆ