ಭಾರತೀಯ ನಾರಿ ಉಡುಪು ಎಂದಾಕ್ಷಣ ಕಣ್ಣ ಮುಂದೆ ಮೊದಲು ಕಾಣುವುದು ಸೀರೆ. ಭಾರತ ಸಂಸ್ಕೃತಿಯ ಪ್ರತಿಬಿಂಬ ಆಗಿರುವ ಸೀರೆಯನ್ನು ಉಟ್ಟಾಗ ಹೆಣ್ಣಿನ ಅಂದ ಹೆಚ್ಚಾದಂತೆ ಭಾಸವಾಗುತ್ತದೆ. ಇದೀಗ ಕಿರಿತೆರೆಯ ಈ ನಟಿಯೂ ಅಷ್ಟೇ! ಸೀರೆ ಉಟ್ಟು ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಕಪ್ಪು ಬಣ್ಣದ ಸೀರೆಯಲ್ಲಿ ದಂತದ ಬೊಂಬೆಯಂತೆ ಮಿಂಚುತ್ತಿದ್ದಾರೆ.
ಅದು ಬೇರಾರೂ ಅಲ್ಲ. ರಮಣನ ಆರಾಧನಾ. ಮಾಧವನ ಮೀರಾ. ಕಾವ್ಯ ಗೌಡ. ಕಪ್ಪು ಬಣ್ಣದ ಸೀರೆಯಲ್ಲಿ ಮಿರಮಿರ ಮಿಂಚುವ ಕಾವ್ಯ ಗೌಡ 'ಮೀರಾ ಮಾಧವ' ಧಾರಾವಾಹಿಯ ಮೀರಾ ಆಗಿ ನಟನಾ ಕ್ಷೇತ್ರಕ್ಕೆ ಕಾಲಿಟ್ಟವರು.
ಈಕೆಗೆ ಸೀರೆ ಅಂದ್ರೆ ಅಚ್ಚುಮೆಚ್ಚು. ಇವರು ಡಿಫ್ರೆಂಟ್ ಡಿಸೈನ್ ಡಿಫರೆಂಟ್ ಬ್ಲೌಸ್ ಟ್ರೈ ಮಾಡ್ತಾನೆ ಇರ್ತಾರೆ. ಇವರ ಡಿಸೈನರ್ಸ್ ಇವರಿಗಾಗಿಯೇ ವಿಶೇಷವಾಗಿ ಡ್ರೆಸ್ಗಳನ್ನು ರೆಡಿ ಮಾಡ್ತಾರಂತೆ.
'ಶುಭವಿವಾಹ' ಧಾರಾವಾಹಿಯಲ್ಲಿ ನಾಯಕಿಯ ತಂಗಿಯಾಗಿ ನಟಸಿದ್ದ ಚೆಂದುಳ್ಳಿ ಚೆಲುವೆ ಮುಂದೆ 'ಗಾಂಧಾರಿ'ಯಲ್ಲಿ ದ್ವಿಪಾತ್ರದಲ್ಲಿ ಅಭಿನಯಿಸಿದ್ದರು. ದೀಪ್ತಿ, ದೃಷ್ಟಿ ಎಂಬ ದ್ವಿಪಾತ್ರಗಳಲ್ಲಿ ನಟಿಸಿರುವ ಕಾವ್ಯ ಗೌಡ ಮುಂದೆ ಆರಾಧನಾ ಆಗಿ ಬದಲಾದರು. ರಾಧಾಳಾಗಿ ಕಿರುತೆರೆ ಪ್ರಿಯರ ಮನ ಸೆಳೆದಿರುವ ಇವರು ಬೆಳ್ಳಿತೆರೆಗೂ ಕಾಲಿಟ್ಟಿದ್ದಾರೆ. ಆರ್ ಜೆ ರೋಹಿತ್ ನಿರ್ದೇಶನದ ಬಕಾಸುರ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ದೊಡ್ಡ ತೆರೆ ಮೇಲೆಯೂ ಕಾಣಿಸಿಕೊಂಡಿದ್ದಾರೆ.
ಇಷ್ಟೆ ಅಲ್ಲದೆ ಅಕ್ಕಿನೇನಿ ನಾಗರ್ಜುನ ಅವರೊಂದಿಗೆ ಜಾಹೀರಾತಿನಲ್ಲೂ ನಟಿಸಿದ್ದಾರೆ. ಕಿಚ್ಚ ಸುದೀಪ್ ನನ್ನ ಫೇವರಿಟ್ ಎಂದು ಹೇಳುವ ಕಾವ್ಯರಿಗೆ ಸುದೀಪ್ ಅವರೊಂದಿಗೆ ತೆರೆ ಹಂಚಿಕೊಳ್ಳುವ ಬಯಕೆಯಂತೆ. ಗ್ಲಾಮರಸ್ ಪಾತ್ರ ಮಾಡಲು ಇಷ್ಟವಿಲ್ಲ ಎನ್ನುವ ಮುದ್ದು ಮುಖದ ಬೆಡಗಿ, ಕುರುಡಿ, ಭಿಕ್ಷುಕಿ ಪಾತ್ರಕ್ಕೆ ಜೀವ ತುಂಬುವ ಆಸೆಯಿದೆಯಂತೆ.