'ಹಾಗೇ ಸುಮ್ಮನೆ' ಚಿತ್ರದ ನಟ ಕಿರಣ್ ಶ್ರೀನಿವಾಸ್ಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಅವರು ಗುರು-ಹಿರಿಯರ ಸಮ್ಮುಖದಲ್ಲಿ ಸಿಹಿಕಹಿ ಚಂದ್ರು ಪುತ್ರಿ ಹಿತಾ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಸ್ಯಾಂಡಲ್ವುಡ್ ಹಿರಿಯ ನಟ ಸಿಹಿಕಹಿ ಚಂದ್ರು ತಮ್ಮ ಪುತ್ರಿ ಹಿತಾ ಹಾಗೂ ಕಿರಣ್ ಮದುವೆಗೆ ಕೆಲವು ತಿಂಗಳುಗಳ ಹಿಂದೆ ಗ್ರೀನ್ ಸಿಗ್ನಲ್ ಕೊಟ್ಟಿದ್ರು. ಇಂದು ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಎರಡು ಕುಟುಂಬಗಳ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಎಂಗೇಜ್ಮೆಂಟ್ ನಡೆಯಿತು.
2008ರಲ್ಲಿ 'ಹಾಗೇ ಸುಮ್ಮನೆ' ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟ ಕಿರಣ್ ಕನ್ನಡಿಗರಿಗೆ ಚಿರಪರಿಚಿತರು. ಕೆಲ ವರ್ಷಗಳಿಂದ ಕಿರಣ್ ಹಾಗೂ ಹಿತಾ ಪರಸ್ಪರ ಪ್ರೀತಿಸುತ್ತಿದ್ರು.'ಒಂಥರಾ ಬಣ್ಣಗಳು' ಚಿತ್ರದಲ್ಲಿ ಕಿರಣ್ ಹಾಗೂ ಹಿತಾ ಒಟ್ಟಿಗೆ ನಟಿಸಿದ್ದರು. ಇದೀಗ ತಮ್ಮ ಪ್ರೀತಿಗೆ ಹಿರಿಯರ ಒಪ್ಪಿಗೆ ಪಡೆದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.
ಇನ್ನು ಸದ್ಯ ಕಿರಣ್ ವೆಬ್ ಸಿರೀಸ್ನಲ್ಲಿ ಬ್ಯುಸಿಯಾಗಿದ್ದು, ಹಿತಾ ಕೂಡ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕಳೆದ ವಾರ ತೆರೆಕಂಡಿರುವ ಪ್ರೀಮಿಯರ್ ಪದ್ಮಿನಿ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.