ಕನ್ನಡದ ಮೇಲಿನ ಗೌರವಕ್ಕೋ ಏನೋ ತಾವು ನಿರ್ಮಿಸಿ ನಟಿಸುತ್ತಿರುವ 'ಚಕ್ರ' ಚಿತ್ರಕ್ಕೆ ಕನ್ನಡತಿ ಶ್ರದ್ಧಾ ಕಪೂರ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಫಿಲ್ಮ್ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ತಯಾರಾಗಿರುವ 'ಚಕ್ರ' ಸಿನಿಮಾ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ಒಟಿಟಿಯಲ್ಲಿ ತಮಿಳಿನೊಂದಿಗೆ ಈ ಸಿನಿಮಾ ಕನ್ನಡ, ತೆಲುಗು, ಮಲಯಾಳಂ ಭಾಷೆಗಳಲ್ಲಿ ಕೂಡಾ ಬಿಡುಗಡೆ ಆಗಲಿದೆ ಎನ್ನಲಾಗಿದೆ. ಆದರೆ ಇದೀಗ ಈ ಸಿನಿಮಾ ಸಮಸ್ಯೆಯ ಸುಳಿಯಲ್ಲಿ ಸಿಲುಕಿದೆ. ಇದಕ್ಕೆ ಕಾರಣ ವಿಶಾಲ್ ಈ ಮುನ್ನ ಅಭಿನಯಿಸಿದ್ದ 'ಆ್ಯಕ್ಷನ್' ಸಿನಿಮಾ.
ವಿಶಾಲ್ ಅಭಿನಯಿಸಿದ್ದ'ಆ್ಯಕ್ಷನ್' ಸಿನಿಮಾ ಸುಮಾರು 44 ಕೋಟಿ ರೂಪಾಯಿ ವೆಚ್ಚದಲ್ಲಿ ಸಿ. ಸುಂದರ್ ನಿರ್ದೇಶಿಸಿದಂತ ಚಿತ್ರ. ಆದರೆ ಈ ಚಿತ್ರ ಬಾಕ್ಸ್ ಆಫೀಸಿನಲ್ಲಿ ಸೋಲು ಅನುಭವಿಸಿತ್ತು. ಈ ಸಿನಿಮಾ 20 ಕೋಟಿ ರೂಪಾಯಿಗಿಂತ ಕಡಿಮೆ ಲಾಭ ಮಾಡಿದರೆ ನಾನು ಅದಕ್ಕೆ ಪರ್ಯಾಯ ವ್ಯವಸ್ಥೆ ಮಾಡುತ್ತೇನೆ ಎಂದು ಚಿತ್ರ ಬಿಡುಗಡೆಯಾದಾಗ ವಿಶಾಲ್ ಟ್ರಿಡೆಂಟ್ ಆರ್ಟ್ಸ್ ನಿರ್ಮಾಣ ಸಂಸ್ಥೆಗೆ ಮಾತು ಕೊಟ್ಟಿದ್ದರು. ಆದರೆ ಆ ಸಿನಿಮಾ ತಮಿಳು ನಾಡಿನಲ್ಲಿ 7.7 ಕೋಟಿ ರೂಪಾಯಿ ಹಾಗೂ ಆಂಧ್ರ, ತೆಲಂಗಾಣ ಸೇರಿ 4 ಕೋಟಿ ರೂಪಾಯಿ ಲಾಭ ಮಾಡಿತ್ತು.
ನಮ್ಮ ಸಂಸ್ಥೆಗೆ ಮತ್ತೊಂದು ಸಿನಿಮಾ ಮಾಡಿಕೊಡುತ್ತೇನೆ ಎಂದು ವಿಶಾಲ್ ಹೇಳಿದ್ದ ಮಾತನ್ನು ಹುಸಿಗೊಳಿಸಿದ್ದಾರೆ. ಎಂ.ಎಸ್. ಆನಂದನ್ ನಿರ್ದೇಶನದಲ್ಲಿ ಬಿಡುಗಡೆಯಾಗುತ್ತಿರುವ ಚಕ್ರ ಚಿತ್ರವನ್ನು ತಮ್ಮ ಬ್ಯಾನರ್ ಮೂಲಕ ನಿರ್ಮಿಸುತ್ತಿದ್ದಾರೆ ಚಕ್ರ ಚಿತ್ರವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಬಾರದು, ವಿಶಾಲ್ ನಮಗೆ 8 ಕೋಟಿ ರೂಪಾಯಿ ಹಣ ಕಟ್ಟಿ ಕೊಡಬೇಕು ಎಂದು ಚೆನ್ನೈ ಹೈಕೋರ್ಟಿನಲ್ಲಿ ದಾವೆ ಹೂಡಲಾಗಿದೆ. ಆದರೆ ಈ ಸಮಸ್ಯೆ ಯಾವ ರೀತಿ ಇತ್ಯರ್ಥ ಆಗಲಿದೆ ಕಾದು ನೋಡಬೇಕು.