ETV Bharat / sitara

ತಂದೆಯ ಹೆಸರಿನಲ್ಲಿ 'ಟೈಗರ್​ ಟಾಕೀಸ್​' ನಿರ್ಮಾಣ ಸಂಸ್ಥೆ ಶುರು ಮಾಡಿದ ವಿನೋದ್ ಪ್ರಭಾಕರ್ - ವಿನೋದ್​ ಪ್ರಭಾಕರ್​ ಅಭಿನಯದ ಲಂಕಾಸುರ ಸಿನಿಮಾ

ವಿನೋದ್ ‌ಪ್ರಭಾಕರ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದು, ವಿಶೇಷ ಪಾತ್ರದಲ್ಲಿ ಲೂಸ್ ಮಾದ ಯೋಗಿ ಅಭಿನಯಿಸುತ್ತಿದ್ದಾರೆ. ಇದು ಇವರಿಬ್ಬರೂ ಒಟ್ಟಾಗಿ ಅಭಿನಯಿಸುತ್ತಿರುವ ಮೊದಲ ಚಿತ್ರವಾಗಿದೆ. ದೇವರಾಜ್, ರವಿಶಂಕರ್ ಮುಂತಾದವರ ತಾರಾಬಳಗ ಸಹ ಈ ಚಿತ್ರದಲ್ಲಿದೆ..

tiger-talkies
ವಿನೋದ್ ಪ್ರಭಾಕರ್
author img

By

Published : Jan 17, 2022, 2:49 PM IST

ಶ್ಯಾಡೋ, ಟೈಸನ್ ಹಾಗೂ ರಾಬರ್ಟ್ ಸಿನಿಮಾಗಳ ಯಶಸ್ಸಿನ ಬಳಿಕ ನಟ ವಿನೋದ್ ಪ್ರಭಾಕರ್ ಹೊಸ ಸಾಹಸಕ್ಕೆ ಇಳಿದಿದ್ದಾರೆ. ಅಭಿನಯದ ಜೊತೆಗೆ ನಿರ್ಮಾಣ ಸಂಸ್ಥೆಯನ್ನು ಹುಟ್ಟು ಹಾಕುವ ಮೂಲಕ ನಿರ್ಮಾಪಕರಾಗಲು ಹೊರಟಿದ್ದಾರೆ ವಿನೋದ್ ಪ್ರಭಾಕರ್.

ವಿನೋದ್ ಪ್ರಭಾಕರ್ 'ಟೈಗರ್ ಟಾಕೀಸ್' ನಿರ್ಮಾಣ ಸಂಸ್ಥೆಯ ಹೆಸರಿನಡಿ ನಿರ್ಮಾಣದ ಮೊದಲ ಹೆಜ್ಜೆಯಾಗಿ‌ 'ಲಂಕಾಸುರ' ಚಿತ್ರವನ್ನು ನಿರ್ಮಿಸುತ್ತಿದ್ದಾರೆ.‌ ವಿನೋದ್ ಪ್ರಭಾಕರ್ ಅವರ ಪತ್ನಿ ನಿಶಾ ಈ ಚಿತ್ರದ ನಿರ್ಮಾಪಕರಾಗಿದ್ದಾರೆ. ತಂದೆ ಟೈಗರ್ ಪ್ರಭಾಕರ್ ಅವರ ಹೆಸರಿನಲ್ಲಿ ಹೊಸ ಹೆಜ್ಜೆ ಇಡುವ ಮೂಲಕ ಟೈಗರ್ ಟಾಕೀಸ್ ಶುರು ಮಾಡಿದ್ದಾರೆ.

ವಿನೋದ್ ‌ಪ್ರಭಾಕರ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದು, ವಿಶೇಷ ಪಾತ್ರದಲ್ಲಿ ಲೂಸ್ ಮಾದ ಯೋಗಿ ಅಭಿನಯಿಸುತ್ತಿದ್ದಾರೆ. ಇದು ಇವರಿಬ್ಬರೂ ಒಟ್ಟಾಗಿ ಅಭಿನಯಿಸುತ್ತಿರುವ ಮೊದಲ ಚಿತ್ರವಾಗಿದೆ. ದೇವರಾಜ್, ರವಿಶಂಕರ್ ಮುಂತಾದವರ ತಾರಾಬಳಗ ಸಹ ಈ ಚಿತ್ರದಲ್ಲಿದೆ.

ಆ್ಯಕ್ಷನ್ ಕಥಾಹಂದರದ ಈ ಚಿತ್ರವನ್ನು ಡಿ.ಎಸ್. ಪ್ರಮೋದ್ ಕುಮಾರ್ ನಿರ್ದೇಶಿಸುತ್ತಿದ್ದಾರೆ. ಡಿಫರೆಂಟ್​ ಡ್ಯಾನಿ, ವಿ‌ನೋದ್, ಕುಂಪ್ಫು ಚಂದ್ರು, ಅರ್ಜುನ್ ರಾಜ್ ಹಾಗೂ ಚೇತನ್ ಡಿಸೋಜಾ ಸಾಹಸ ನಿರ್ದೇಶನ ಮಾಡಿದ್ದಾರೆ. ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆ ವಿಜೇತ್ ಕೃಷ್ಣ ಸಂಗೀತ ನೀಡಿದ್ದಾರೆ. ಭರ್ಜರಿ ಚೇತನ್ ಗೀತರಚನೆ ಮಾಡಿದ್ದಾರೆ.

ಸಿದ್ಲಿಂಗು, ಜಯಮ್ಮನ ಮಗ ಹಾಗೂ ಐ ಲವ್ ಯು ಮುಂತಾದ ಜನಪ್ರಿಯ ಚಿತ್ರಗಳಿಗೆ ಛಾಯಾಗ್ರಹಕರಾಗಿ ಕಾರ್ಯನಿರ್ವಹಿಸಿರುವ ಸುಜ್ಞಾನ್(ಜ್ಞಾನ ಮೂರ್ತಿ) ಈ ಚಿತ್ರಕ್ಕೂ ಛಾಯಾಗ್ರಾಹಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮುರಳಿ, ಮೋಹನ್ ಅವರ ನೃತ್ಯ ನಿರ್ದೇಶನ ಹಾಗೂ ದೀಪು ಎಸ್. ಕುಮಾರ್ ಅವರ ಸಂಕಲನ ಈ ಚಿತ್ರಕ್ಕಿದೆ.

ಬೆಂಗಳೂರಿನಲ್ಲಿ ಈ ಚಿತ್ರದ ಚಿತ್ರೀಕರಣವು ಬಿರುಸಿನಿಂದ ಸಾಗಿದೆ. ಕಳೆದ ವರ್ಷ ತೆರೆಕಂಡ ದರ್ಶನ್ ಅಭಿನಯದ ರಾಬರ್ಟ್ ಚಿತ್ರದಲ್ಲಿ ವಿನೋದ್ ಪ್ರಭಾಕರ್ ವಿಶೇಷ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿನ ಅವರ ಹೊಸ ಲುಕ್​ಗೆ ಅಭಿಮಾನಿಗಳು ಫಿದಾ‌ ಆಗಿದ್ದರು.

ಇದನ್ನೂ ಓದಿ: ಕಿಯಾರಾ ನ್ಯೂ ಲುಕ್​ಗೆ ಸಮಂತಾ ಫಿದಾ...!

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.