ನಟ ವಿನೋದ್ ಪ್ರಭಾಕರ್ ಹಲವು ಚಿತ್ರಗಳಲ್ಲಿ ತಮ್ಮ ಸಿಕ್ಸ್ಪ್ಯಾಕ್ ಹಾಗೂ 8 ಪ್ಯಾಕ್ನಿಂದ ಗಮನ ಸೆಳೆದಿದ್ದಾರೆ. ಆದ್ರೀಗ ವಿನೋದ್, ಸಿನಿಮಾಗಳಲ್ಲಿ ತಮ್ಮ ಬೇರ್‌ಬಾಡಿ ತೋರಿಸುವುದಿಲ್ಲ ಎಂದಿದ್ದಾರೆ.
ಇಷ್ಟಕ್ಕೂ ವಿನೋದ್‍ಗೆ ಅಂಥದ್ದೇನಾಯಿತು ಎಂಬ ಪ್ರಶ್ನೆ ಸಹಜವಾಗಿಯೇ ಬರಬಹುದು. ವಿನೋದ್ ದೇಹ ದಂಡಿಸೋದಕ್ಕೆ ಹೋಗಿ ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು ಎದುರಿಸಿದ್ದಾರಂತೆ. ಹೀಗಾಗಿ ಬೇರ್‌ಬಾಡಿ ಪ್ರದರ್ಶನ ಬೇಡವೆಂದು ತೀರ್ಮಾನಿಸಿದ್ದಾರಂತೆ.
ಇತ್ತೀಚಿಗೆ 'ಶ್ಯಾಡೋ' ಸಿನಿಮಾದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಸಿಕ್ಸ್ಪ್ಯಾಕ್ ಹಾಗೂ ಬೇರ್‌ಬಾಡಿ ತೆರೆ ಮೇಲೆ ನೋಡುವುದಕ್ಕೆ ಬಹಳ ಚೆನ್ನಾಗಿರುತ್ತೆ. ಆದರೆ, ವರ್ಷಗಟ್ಟಲೇ ಅನ್ನ, ಉಪ್ಪು, ಹುಳಿ, ಖಾರ ಬಿಡಬೇಕು. ನೀರು ಕುಡಿಯುವುದನ್ನೂ ನಿಲ್ಲಿಸಬೇಕು. ಇದರಿಂದ ಮೂಳೆ ಸಮಸ್ಯೆ ಎದುರಿಸಿದ್ದೇನೆ. ಸಾಕಷ್ಟು ನೋವು ತಿಂದಿದ್ದೇನೆ. ಆ ಹಿಂಸೆ ಯಾರಿಗೂ ಬೇಡ. ಹಾಗಾಗಿ, ದಯವಿಟ್ಟು ಇನ್ಮುಂದೆ ಯಾರೂ ನನಗೆ ಬೇರ್‌ಬಾಡಿ ಮಾಡಿಕೊಳ್ಳುವುದಕ್ಕೆ ಹೇಳಬೇಡಿ ಎಂದು ಮನವಿ ಮಾಡಿದ್ದಾರೆ.