ETV Bharat / sitara

ವರದ ಟ್ರೈಲರ್​​​ನಲ್ಲಿ ಪುನೀತ್ ಫೋಟೋ ಇಲ್ಲ: ನಿರ್ದೇಶಕ ಉದಯ್ ಪ್ರಕಾಶ್ ವಿರುದ್ಧ ವಿನೋದ್ ಪ್ರಭಾಕರ್ ಅಸಮಾಧಾನ - ನಿರ್ದೇಶಕ ಉದಯ್ ಪ್ರಕಾಶ್ ವಿರುದ್ಧ ವಿನೋದ್ ಪ್ರಭಾಕರ್ ಅಸಮಾಧಾನ

ಸಮಸ್ಯೆ ಯಾಕೆ ಶುರುವಾಯಿತು, ಈ‌ ಸಮಸ್ಯೆ ಪರಿಹಾರವಾಗಿದ್ಯಾ?, ವಿನೋದ್ ಪ್ರಭಾಕರ್ ಹಾಗೂ ಉದಯ್ ಪ್ರಕಾಶ್ ನಡುವಿನ ಮನಸ್ತಾಪ ಕಡಿಮೆ ಆಗಿದಿಯ್ಯಾ ಅನ್ನೋದನ್ನು ಇಬ್ಬರು ಒಪ್ಪಿಕೊಳ್ಳಲಿಲ್ಲ. ಆದರೆ, ಕೊನೆಗೆ ವಿನೋದ್ ಪ್ರಭಾಕರ್ ಎಷ್ಟೇ ವೈಮನಸ್ಸು ಇದ್ದರೂ ಚಿತ್ರ ಪ್ರಮೋಷನ್​ಗೆ ನಾನು ಸಾಥ್​​ ನೀಡುತ್ತೇನೆ..

Actor vinod prabhakar expresses his displeasure about not adding puneeth rajkumar  photo in varada trailer
ನಿರ್ದೇಶಕ ಉದಯ್ ಪ್ರಕಾಶ್ ವಿರುದ್ಧ ವಿನೋದ್ ಪ್ರಭಾಕರ್ ಅಸಮಾಧಾನ
author img

By

Published : Feb 12, 2022, 6:01 PM IST

ಸ್ಯಾಂಡಲ್​​ವುಡ್​​​​ನಲ್ಲಿ ಮಾಸ್ ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ನಟ ವಿನೋದ್ ಪ್ರಭಾಕರ್, ವರದ ಸಿನಿಮಾದಲ್ಲಿಅಭಿನಹಿಸುತ್ತಿದ್ದಾರೆ. ಸದ್ಯ ವರದ ಚಿತ್ರದ ಟ್ರೇಲರ್​ ಬಿಡುಗಡೆ ಆಗಿದೆ. ಟ್ರೇಲರ್​ ರಿಲೀಸ್​ ಕಾರ್ಯಕ್ರಮಕ್ಕೆ ಆಗಮಿಸಿದ್ದ ವಿನೋದ್​ ​ತಮ್ಮದೇ ಚಿತ್ರತಂಡದವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಿರ್ದೇಶಕ ಉದಯ್ ಪ್ರಕಾಶ್ ವಿರುದ್ಧ ವಿನೋದ್ ಪ್ರಭಾಕರ್ ಅಸಮಾಧಾನ..

ಪುನೀತ್​ ರಾಜ್​ಕುಮಾರ್ ನಿಧನದ ನಂತರ ಅನೇಕ ಚಿತ್ರತಂಡಗಳು ಅವರಿಗೆ ನಮನ ಸಲ್ಲಿಸುತ್ತಿವೆ. ಸದ್ಯ ವರದ ಚಿತ್ರದ ಟ್ರೈಲರ್​​​ನಲ್ಲಿ ಪುನೀತ್ ನಮನ ಭಾವಚಿತ್ರ ಇಲ್ಲ. ಒಂದೇ ಒಂದು ಫೋಟೋ ಕೂಡ ಹಾಕಿಲ್ಲ ಎಂದು ವಿನೋದ್ ಪ್ರಭಾಕರ್ ಅವರು ನಿರ್ದೇಶಕ ಉದಯ್ ಪ್ರಕಾಶ್ ಮೇಲೆ ಕೋಪಗೊಂಡರು.

ಇದೇ ವೇಳೆ ಹಣದ ವಿಚಾರವಾಗಿ ವೇದಿಕೆ ಮೇಲೆ ವಿನೋದ್ ಹಾಗೂ ನಿರ್ದೇಶಕ ಉದಯ್ ಪ್ರಕಾಶ್ ಆರೋಪ-ಪ್ರತ್ಯಾರೋಪ ಮಾಡಿಕೊಂಡರು. ನಿರ್ದೇಶಕ ಉದಯ್ ಪ್ರಕಾಶ್, ವಿನೋದ್ ಪ್ರಭಾಕರ್ ವಿರುದ್ಧ ನಿರ್ಮಾಪಕರ ಸಂಘದಲ್ಲಿ ಚರ್ಚೆ ಮಾಡಿದ್ದು ಕೂಡ ಅವರಿಗೆ ಬೇಸರ ತಂದಿತ್ತು. ಇದೇ ವಿಷಯ ವೇದಿಕೆ ಮೇಲೆ ಚರ್ಚೆಗೆ ಗ್ರಾಸವಾಗಿತ್ತು.

ಸಮಸ್ಯೆ ಯಾಕೆ ಶುರುವಾಯಿತು, ಈ‌ ಸಮಸ್ಯೆ ಪರಿಹಾರವಾಗಿದ್ಯಾ?, ವಿನೋದ್ ಪ್ರಭಾಕರ್ ಹಾಗೂ ಉದಯ್ ಪ್ರಕಾಶ್ ನಡುವಿನ ಮನಸ್ತಾಪ ಕಡಿಮೆ ಆಗಿದಿಯ್ಯಾ ಅನ್ನೋದನ್ನು ಇಬ್ಬರು ಒಪ್ಪಿಕೊಳ್ಳಲಿಲ್ಲ. ಆದರೆ, ಕೊನೆಗೆ ವಿನೋದ್ ಪ್ರಭಾಕರ್ ಎಷ್ಟೇ ವೈಮನಸ್ಸು ಇದ್ದರೂ ಚಿತ್ರ ಪ್ರಮೋಷನ್​ಗೆ ನಾನು ಸಾಥ್​​ ನೀಡುತ್ತೇನೆ ಎಂದರು.

ಉದಯ ಪ್ರಕಾಶ್ ನಿರ್ಮಿಸಿ ನಿರ್ದೇಶಿಸಿರುವ ಸಿನಿಮಾ ವರದ ಚಿತ್ರದಲ್ಲಿ ವಿನೋದ್ ಪ್ರಭಾಕರ್‌, ಅಮೃತಾ ರಂಗನಾಥ್, ಚರಣ್ ರಾಜ್, ಅನಿಲ್ ಸಿದ್ದು, ಅಶ್ವಿನಿಗೌಡ, ಉಮೇಶ್ ಬಣಕರ್ ಹಾಗೂ ಮುಂತಾದವರ ಅಭಿನಯವಿದೆ. ಚಿತ್ರಕ್ಕೆ ಪ್ರದೀಪ್ ವರ್ಮಾ ಸಂಗೀತ ನೀಡಿದ್ದಾರೆ.

ಇದನ್ನೂ ಓದಿ: ಮಾತೃಶ್ರೀ‌ ಮನೋವಿಕಾಸ ಕೇಂದ್ರದಿಂದ ಇಬ್ಬರು ದಿವ್ಯಾಂಗ ಮಕ್ಕಳನ್ನು ದತ್ತು ಪಡೆದ ನಟಿ ಶ್ರೀಲೀಲಾ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.