ETV Bharat / sitara

'ನಾವು ಯಾರಿಗೂ ಕಮ್ಮಿ ಇಲ್ಲ' ಎನ್ನುತ್ತಿದ್ದಾರೆ ಚಂದನವನದ ನಟರು - undefined

ನಟ ವಿಜಯ ರಾಘವೇಂದ್ರ ‘ಮಾಲ್ಗುಡಿ ಡೇಸ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ತಮ್ಮ ಮೈ ತೂಕ ಕಡಿಮೆ ಮಾಡಿಕೊಳ್ಳುತ್ತಿದ್ದಾರೆ.

ನಟ ವಿಜಯ ರಾಘವೇಂದ್ರ
author img

By

Published : Apr 16, 2019, 9:02 PM IST

ಪಾತ್ರಕ್ಕಾಗಿ ವರ್ಕೌಟ್ ಮಾಡೋದರಲ್ಲಿ ಬಾಲಿವುಡ್ ನಟರು ಮುಂದು ಎನ್ನುವ ಮಾತಿತ್ತು. ಇದೀಗ ಅದು ಸ್ಯಾಂಡಲ್​​ವುಡ್​ಗೂ ವ್ಯಾಪಿಸಿದೆ. ನಾವು ಯಾರಿಗೂ ಕಮ್ಮಿ ಇಲ್ಲ ಎನ್ನುವಂತೆ ಚಂದನವನದ ನಟರು ಜಿಮ್​​ನಲ್ಲಿ ಹಾರ್ಡ್​​ವರ್ಕ್ ಮಾಡಿ ಪಾತ್ರಕ್ಕೆ ತಕ್ಕಂತೆ ತಮ್ಮ ದೇಹ ಹದಗೊಳಿಸುತ್ತಿದ್ದಾರೆ.

ಇತ್ತೀಚಿಗೆ ನಟ ಧ್ರುವ ಸರ್ಜಾ ‘ಪೊಗರು’ ಸಿನಿಮಾದಲ್ಲಿ ಶಾಲಾ ಹುಡುಗನ ಹಾಗೆ ಕಾಣಲು 20 ಕೆಜಿ ತೂಕ ಇಳಿಸಿಕೊಂಡಿದ್ದರು. ವಿನೋದ್ ಪ್ರಭಾಕರ್ ‘ರಗ್ಗಡ್’ ಸಿನಿಮಾಕ್ಕೆ 8 ಪ್ಯಾಕ್ ಗಳಿಸಲು ಕಷ್ಟ ಪಟ್ಟಿದ್ದರು. ಶಿವಣ್ಣ ಸಹ ಅವರ ಹಿಂದಿನ ಸಿನಿಮಾಗೆ ಸಿಕ್ಸ್ ಪ್ಯಾಕ್ ಮಾಡಿಕೊಳ್ಳಲು ಬೆವರು ಸುರಿಸಿದ್ದರು. ಪೈಲ್ವಾನ್ ಚಿತ್ರಕ್ಕೆ ಕಿಚ್ಚ ಸುದೀಪ್ ಕಸರತ್ತು ಜೋರಾಗೆ ಇತ್ತು. ಐರಾವತ ಚಿತ್ರಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹ ವ್ಯಾಯಾಮ ಮಾಡಿ ಪೊಲೀಸ್ ಅಧಿಕಾರಿ ಹಾಗೂ ಫಿಟ್ ಆಗುವಂತೆ ದೇಹ ದಂಡಿಸಿದ್ದರು. ಈಗ ಚಿನ್ನಾರಿ ಮುತ್ತ ಖ್ಯಾತಿಯ ವಿಜಯ ರಾಘವೇಂದ್ರ ಸರದಿ. ‘ಮಾಲ್ಗುಡಿ ಡೇಸ್’ ಸಿನಿಮಾಕ್ಕೆ ಅವರು 18 ಕೆಜಿ ತೂಕ ಕಡಿಮೆ ಮಾಡಿಕೊಳ್ಳುತ್ತಿದ್ದಾರೆ.

ಹೌದು, ಮೈತೂಕ ಇಳಿಸಿಕೊಳ್ಳಲು ಪ್ರತಿ ದಿವಸ ವರ್ಕ್ ಔಟ್ ಜೋರಾಗೆ ಮಾಡುತ್ತಿದ್ದಾರಂತೆ ವಿಜಯ. ಮಾಲ್ಗುಡಿ ಡೇಸ್ ಅವರಿಗೆ ಒಂದು ಹೊಸ ಇಮೇಜ್ ತಂದು ಕೊಡಲಿದೆ ಎನ್ನುವ ಬಲವಾದ ಭರವಸೆ ಅವರಲ್ಲಿದೆಯಂತೆ.

ಇನ್ನು ಶಂಕರ್ ನಾಗ್ ನಿರ್ದೇಶನ ಮಾಡಿದ ಕಿರು ತೆರೆ ‘ಮಾಲ್ಗುಡಿ ಡೇಸ್’ ಹಾಗೂ ಈಗಿನ ಸಿನಿಮಾಕ್ಕೆ ಯಾವುದೇ ಸಂಬಂದ ಇಲ್ಲ ಎಂದು ನಿರ್ದೇಶಕ ಕಿಶೋರ್ ಮೂಡಬಿದರೆ ಹೇಳಿದ್ದಾಗಿದೆ. ನಿರ್ಮಾಪಕ ರತ್ನಾಕರ್ ಕಾಮತ್ ಜೊತೆ ಸಧ್ಯಕ್ಕೆ ಈ ಚಿತ್ರ ತೀರ್ಥಹಳ್ಳಿ, ಆಗೊಂಬೆ, ಹೊರನಾಡು ಸುತ್ತ ಚಿತ್ರೀಕರಣದ ಭಾಗವನ್ನು ಪೂರ್ತಿಗೊಳಿಸಿದೆ. ಮುಂದಿನ ದಿನಗಳಲ್ಲಿ ಪಾಂಡಿಚೇರಿಯಲ್ಲಿ ಶೂಟಿಂಗ್​ ನಡೆಯಲಿದೆ.

---------- Forwarded message ---------
From: pravi akki <praviakki@gmail.com>
Date: Tue, Apr 16, 2019, 9:27 AM
Subject: Fwd: VIJAYA RAGHAVENDRA LOSES WEIGHT
To: Praveen Akki <praveen.akki@etvbharat.com>

---------- Forwarded message ---------
From: Vasu K.S. Vasu <sasuvas@gmail.com>
Date: Tue, Apr 16, 2019, 8:27 AM
Subject: VIJAYA RAGHAVENDRA LOSES WEIGHT
To: <praveen.akki@etvbharath.com>, pravi akki <praviakki@gmail.com>, EenaduIndia kannada <kannadadesk@gmail.com>

ವಿಜಯ ರಾಘವೇಂದ್ರ ತೂಕ ಇಳಿಕೆ

ಒಂದು ಕಡೆ ಗೈನ್ ಆಗಬೇಕು ಅಂದರೆ ಮತ್ತೊಂದು ಕಡೆ ಲಾಸ್ ಆಗಬೇಕು. ಇತ್ತೀಚಿಗೆ ಧ್ರುವ ಸರ್ಜಾ ಶಾಲಾ ಹುಡುಗನ ಹಾಗೆ ಕಾಣಲು ಪೊಗರು ಸಿನಿಮಾಕ್ಕೆ 20 ಕೆಜಿ ತೂಕ ಇಳಿಸಿಕೊಂಡಿದ್ದರು, ವಿನೋದ್ ಪ್ರಭಾಕರ್ 8 ಪ್ಯಾಕ್ ಗಳಿಸಲು ರಗ್ಗಡ್ ಸಿನಿಮಾಕ್ಕೆ ಕಷ್ಟ ಪಟ್ಟಿದ್ದರು, ಶಿವರಾಜಕುಮಾರ್ ಸಹ ಸಿಕ್ಸ್ ಪ್ಯಾಕ್ ಅವರ ಹಿಂದಿನ ಸಿನಿಮಾಕ್ಕೆ ತಂದುಕೊಂಡಿದ್ದರು. ಪೈಲ್ವಾನ್ ಚಿತ್ರಕ್ಕೆ ಕಿಚ್ಚ ಸುದೀಪ್ ಕಸರತ್ತು ಜೋರಗೆ ಇತ್ತು, ಐರಾವತ ಚಿತ್ರಕ್ಕೆ ಛಾಲೆಂಜಿಂಗ್ ಸ್ಟಾರ್ ದರ್ಶನ್ ಸಹ ವ್ಯಾಯಾಮ ಹೆಚ್ಚಿಗೆ ಮಾಡಿ ಪೊಲೀಸ್ ಅಧಿಕಾರಿಗೆ ಫಿಟ್ ಆಗುವ ಹಾಗೆ ದೇಹವನ್ನು ಧಂಡಿಸಿದ್ದರು.

ಈಗ ಚಿನ್ನಾರಿ ಮುತ್ತ ವಿಜಯ ರಾಘವೇಂದ್ರ ಸರದಿ ಮಾಲ್ಗುಡಿ ಡೇಸ್ ಸಿನಿಮಾಕ್ಕೆ. ಅವರು 18 ಕೆಜಿ ತೂಕ ಕಡಿಮೆ ಮಾಡಿಕೊಳ್ಳುತ್ತಿದ್ದಾರೆ.

ಪ್ರತಿ ದಿವಸ ವರ್ಕ್ ಔಟ್ ಜೋರಾಗೆ ಮಾಡುತ್ತಿದ್ದಾರೆ ವಿಜಯ ರಾಘವೇಂದ್ರ. ಮಾಲ್ಗುಡಿ ಡೇಸ್ ಅವರಿಗೆ ಒಂದು ಹೊಸ ಇಮೇಜ್ ಬರುವ ಸಾಧ್ಯತೆ ಇದೆ ಎಂಬ ನಂಬಿಕೆ.

ಶಂಕರ್ ನಾಗ್ ನಿರ್ದೇಶನ ಮಾಡಿದ ಕಿರು ತೆರೆ ಮಾಲ್ಗುಡಿ ಡೇಸ್ ಹಾಗೂ ಈಗಿನ ಸಿನಿಮಾಕ್ಕೆ ಯಾವುದೇ ಸಂಬಂದ ಇಲ್ಲ ಎಂದು ನಿರ್ದೇಶಕ ಕಿಶೋರ್ ಮೂಡಬಿದರೆ ಹೇಳಿದ್ದಾಗಿದೆ. ನಿರ್ಮಾಪಕ ರತ್ನಾಕರ್ ಕಾಮತ್ ಜೊತೆ ಸಧ್ಯಕ್ಕೆ ಈ ಚಿತ್ರ ತೀರ್ಥಹಳ್ಳಿ, ಆಗುಂಬೆ, ಹೊರನಾಡು ಸುತ್ತ ಚಿತ್ರೀಕರಣದ ಭಾಗವನ್ನು ಪೂರ್ತಿಗೊಳಿಸಿದೆ. ಮುಂದಿನ ದಿನಗಳಲ್ಲಿ ಪಾಂಡಿಚೇರಿಯಲ್ಲಿ ಚಿತ್ರೀಕರಣ ನಡೆಯಲಿದೆ. 

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.