ಬೆಂಗಳೂರು: ಕನ್ನಡ ಸೇರಿದಂತೆ ದಕ್ಷಿಣ ಭಾರತದ ಅನೇಕ ಭಾಷೆಯ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡ ಚಂದುಳ್ಳಿ ಚೆಲುವೆ ವೇಧಿಕ ಕುಮಾರ್ ಲಾಕ್ಡೌನ್ ಸಮಯದಲ್ಲಿ ಸುಮ್ಮನೆ ಕುಳಿತುಕೊಳ್ಳದೆ, ಕುಣಿದು ಕುಪ್ಪಳಿಸಿದ್ದಾರೆ. ಇದೀಗ ಅವರ ಡ್ಯಾನ್ಸ್ ವಿಡಿಯೋ ವೈರಲ್ ಆಗಿದ್ದು ಸಖತ್ ಸದ್ದು ಮಾಡುತ್ತಿದೆ.
ಸಖತ್ ಹಾಟ್ ಲುಕ್ನಲ್ಲಿ ಹೆಜ್ಜೆ ಹಾಕಿರುವ ನಟಿಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಹಿಟ್ ಆಗಿದೆ, ಮಾತ್ರವಲ್ಲ ನೋಡುಗರು ಫುಲ್ ಖುಷಿಯಾಗಿದ್ದಾರೆ.
ಕನ್ನಡದಲ್ಲಿ ವೇಧಿಕ ಅಭಿನಯಿಸಿದ ಮೊದಲ ಸಿನಿಮಾ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ‘ಸಂಗಮ’ ದಲ್ಲಿ, ನಂತರ ಡಾ. ಶಿವರಾಜಕುಮಾರ್ ಜೊತೆ ‘ಶಿವಲಿಂಗ’ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಆನಂತರ ‘ಗೌಡ್ರು ಹೋಟೆಲ್’ ಸಿನಿಮಾದಲ್ಲಿ ನಟಿಸಿದ್ದರೂ ಅಷ್ಟೇನು ಸದ್ದು ಮಾಡಲಿಲ್ಲ, ಇದೀಗ ಉಪೇಂದ್ರ ಜೊತೆ ‘ಹೋಂ ಮಿನಿಸ್ಟರ್’ನಲ್ಲಿ ನಟಿಸಿದ್ದುಸಿನೆಮಾ ಇನ್ನೂ ಬಿಡುಗಡೆಯಾಗಿಲ್ಲಿ.
14 ವರ್ಷದ ಸಿನಿಮಾ ಪಯಣದಲ್ಲಿ 25 ಸಿನಿಮಾಗಳಲ್ಲಿ ನಟಿಸಿರುವ ಇವರು, ತೆಲುಗು, ಮಲಯಾಳಂ, ತಮಿಳು ಭಾಷೆಗಳಲ್ಲಿ ಪ್ರಸಿದ್ದ ನಿರ್ದೇಶಕರ ಜೊತೆ ಕೆಲಸ ಮಾಡಿದ್ದಾರೆ.
ಸದ್ಯ ವೆಬ್ ಸೀರೀಸ್ನಲ್ಲಿ ಸಹ ನಟಿಸಲು ಸಜ್ಜಾಗಿರುವ ವೇಧಿಕ ನೃತ್ಯದಲ್ಲಿ ತರಬೇತಿ ಪಡೆದಿದ್ದಾರೆ. ರಾಘವ ಲಾರೆನ್ಸ್ ಹಾಗೂ ಸಿಂಬು ಅವರ ಜೊತೆ ತಮಿಳು ಸಿನಿಮಾಗಳಲ್ಲಿ ಕುಣಿದಿರುವುದು ಅವರ ನೃತ್ಯ ಚಾತುರ್ಯಕ್ಕೆ ಕನ್ನಡಿ ಹಿಡಿದಿದೆ.