ETV Bharat / sitara

2 ಸಾವಿರ ನೆರೆ ಸಂತ್ರಸ್ತ ಕುಟುಂಬಗಳಿಗೆ ನಟ ವಶಿಷ್ಠ ಸಿಂಹ ನೆರವು - ಜಲಪ್ರಳಯ

ನಟ ವಶಿಷ್ಠ ಸಿಂಹ ಎರಡು ಸಾವಿರ ನೆರೆ ಸಂತ್ರಸ್ತ ಕುಟುಂಬಗಳಿಗೆ ಅಗತ್ಯ ಸಾಮಗ್ರಿಗಳನ್ನು ಮತ್ತೆ ಕಳುಹಿಸಿದ್ದಾರೆ.

Actor Vashishtha
author img

By

Published : Aug 22, 2019, 11:05 PM IST

ಬೆಂಗಳೂರು: ಅತಿವೃಷ್ಟಿಗೆ ಒಳಗಾಗಿರುವ ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕ ಭಾಗದ ನೆರೆ ಸಂತ್ರಸ್ತರಿಗೆ ನಟ ವಶಿಷ್ಠ ಸಿಂಹ ಮತ್ತೆ ನೆರವು ನೀಡಿದ್ದಾರೆ. ಕಳೆದ ನಾಲ್ಕು ದಿನಗಳ ಹಿಂದೆ ಎರಡು ಲಾರಿಗಳಲ್ಲಿ ಪರಿಹಾರ ಸಾಮಗ್ರಿ ಕಳುಹಿಸಿದ್ದ ಅವರು, ಇದೀಗ ಮತ್ತೆರಡು ವಾಹನಗಳನ್ನು ಕಳುಹಿಸಿದ್ದಾರೆ.

Actor Vashishtha
ನಟ ವಶಿಷ್ಠ ಸಿಂಹ

ಜಲಪ್ರಳಯದಿಂದ ನಲುಗಿರುವ ನೆರೆ ಸಂತ್ರಸ್ತರಿಗೆ ಅಭಿಮಾನಿಗಳು, ಸ್ನೇಹಿತರು ಹಾಗೂ ಬೆಸ್ಕಾಂ ಜತೆ ಕೈಜೋಡಿಸಿ ಅಗತ್ಯ ವಸ್ತುಗಳನ್ನು ರವಾನಿಸಿದ್ದಾರೆ. ಈ ಎಲ್ಲ ವಸ್ತುಗಳನ್ನು ಕಿಟ್​ ರೂಪದಲ್ಲಿ 2000 ಕುಟುಂಬಗಳಿಗೆ ನೀಡುವ ಉದ್ದೇಶ ಹೊಂದಿದ್ದಾರೆ. ಸ್ವತಃ ತಾವೇ ಮುಂದೆ ನಿಂತು ಕಿಟ್​ ತಯಾರಿಸಿದ್ದಾರೆ.

ನೆರೆ ಸಂತ್ರಸ್ತ ಕುಟುಂಬಗಳಿಗೆ ನಟ ವಶಿಷ್ಠ ಸಿಂಹ ನೆರವು

ಈ ಬಗ್ಗೆ ಮಾತಾಡಿರುವ ನಟ ವಶಿಷ್ಠ, ಸುಮಾರು 2 ಸಾವಿರ ಕುಟುಂಬಗಳಿಗೆ ಅಗತ್ಯ ವಸ್ತುಗಳನ್ನು ನೀಡುತ್ತಿದ್ದೇವೆ. ಈ ಕಿಟ್​ನಲ್ಲಿ ಒಂದು ವಾರಕ್ಕೆ ಆಗುವಷ್ಟು ವಸ್ತುಗಳಿವೆ. ನಮ್ಮ ಹುಡುಗರೇ ಪ್ರತಿ ಮನೆ ಮನೆಗೆ ತೆರಳಿ ಈ ಕಿಟ್​ ವಿತರಿಸಲಿದ್ದಾರೆ ಎಂದು ತಿಳಿಸಿದರು.

Intro:ಎರಡು ಸಾವಿರ ಸಂತ್ರಸ್ತ ಕುಟುಂಬಗಳಿಗೆ ಅಗತ್ಯ ಸಾಮಗ್ರಿಗಳನ್ನು ಮತ್ತೆ ಕಳುಹಿಸಿದ ನಟ ವಶಿಷ್ಠ ಸಿಂಹ..!!!

ಭೀಕರ ಮಳೆಗೆ ತತ್ತರಿಸಿರುವ ಬೆಳಗಾವಿ ಹಾಗೂ ಅಥಣಿ ನೆರೆ ಸಂತ್ರಸ್ತರಿಗೆ ನಟ ವಶಿಷ್ಠ. ಸಿಂಹ ಕಳೆದ ನಾಲ್ಕು ದಿನಗಳ ಹಿಂದೆ ಎರಡು ಟ್ರಕ್ ಆಗತ್ಯ ವಸ್ತುಗಳನ್ನು‌ ಕಳುಹಿಸಿ ಕೊಟ್ಟಿದ್ರು ಅಲ್ಲದೆ ಈಗ ಮತ್ತೆ ವಶಿಷ್ಠ ಸಿಂಹ
ಜಲಪ್ರಳಯಕ್ಕೆ ಕೊಚ್ಚಿಹೋಗಿರುವ ನೆರೆ ಸಂತ್ರಸ್ತರಿಗೆ ಅಭಿಮಾನಿಗಳು ,ಸ್ನೇಹಿತರು ಹಾಗೂ ಬೆಸ್ಕಾಂ ನ ವತಿಯಿಂದ ಲೋಡ್ ಗಟ್ಟಲೆ ಆಹಾರ ಸಾಮಗ್ರಿಗಳನ್ನು ಸಂಗ್ರಹಿಸುವುದ ಜೊತೆಗೆ ವಶಿಷ್ಠ ಸಿಂಹ ಕೂಡ ಕೈಲಾದಷ್ಟು ಸಹಾಯ ಮಾಡಿದ್ದಾರೆ. ಜೊತೆಗೆ ಈ ಆಗತ್ಯ ವಸ್ತುಗಳನ್ನು ಕಳೆದ ನಾಲ್ಕುದಿನಗಳಿಂದ ವಶಿಷ್ಠ ಹಾಗೂ ಅವರ ಸ್ನೇಹಿರು ವಶಿಷ್ಠ ಅವರ ಮನೆಯಲ್ಲೆ ಒಂದು ಸಂಸಾರ ಒಂದು ವಾರ ಜೀವನ ನಡೆಸಲು ಬೇಕಾದ ಎಲ್ಲಾ ಅಗತ್ಯವಸ್ತುಗಳನ್ನು ಪ್ಯಾಕ್ ಮಾಡಿ ಇಂದು ನೆರೆ ಸಂತ್ರಸ್ತರಿಗೆ ಕಳಿಸಿದ್ದಾರೆ.Body:.ಸುಮಾರು ಎರಡು ಸಾವಿರ ಕುಟುಂಬಗಳಿಗೆ ಒಂದು ವಾರ ಜೀವನಕ್ಕೆ ಏನೇನು ಬೇಕು ಎಲ್ಲಾ ವಸ್ತುಗಳನ್ನು ಪ್ಯಾಕ್ ಮಾಡಿದ್ದು.ಪ್ರವಾಹಕ್ಕೆ ತತ್ತರಿಸಿರುವ ಜನರಿಗೆ ನೆರವಾಗುವುದು ನಮ್ಮ ಕರ್ತವ್ಯ.ಈಗ ನಮ್ಮ ಕೈಲಾದ ಮಟ್ಟಿಗೆ ನಾವು ಆವರ ನೆರವಿಗೆ ನಿಲ್ಲೋಣ ಎಂದಿ ಚಿಟ್ಟೆ ವಶಿಷ್ಠ ಸಿಂಹ ಕನ್ನಡಿಗರಲ್ಲಿ ಮನವಿಮಾಡಿದ್ದಾರೆ.

ಸತೀಶ ಎಂಬಿ
Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.