ವಿಭಿನ್ನ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಬುದ್ಧಿವಂತ ನಟ ಹಾಗೂ ನಿರ್ದೇಶಕ ಎಂದು ಕರೆಯಿಸಿಕೊಂಡಿರುವ ಉಪೇಂದ್ರ ನಟನೆ ಜೊತೆಗೆ ರಾಜಕೀಯದಲ್ಲಿ ಬದಲಾವಣೆ ತರಬೇಕೆಂದು ಪ್ರಜಾಕೀಯ ಪಕ್ಷ ಹುಟ್ಟಿ ಹಾಕಿ ಜನರಿಗೆ ಹತ್ತಿರವಾಗುತ್ತಿದ್ದಾರೆ.
ಈ ಲಾಕ್ಡೌನ್ ಸಮಯದಲ್ಲಿ ಉಪೇಂದ್ರ ದೊಡ್ಡ ಆಲದ ಮರ ರಸ್ತೆಯಲ್ಲಿರುವ ರಾಮೋನಹಳ್ಳಿಯ ಜಮೀನಿನಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ತಮ್ಮ ಜಮೀನಿನಲ್ಲಿ ಬದನೆಕಾಯಿ, ಚೆಂಡು ಹೂವು, ಸೌತೆಕಾಯಿಗಳನ್ನ ಬಿತ್ತನೆ ಮಾಡಿದ್ರು. ಎರಡು ತಿಂಗಳ ಬಳಿಕ ಉಪೇಂದ್ರ ಅವರ ಜಮೀನಿನಲ್ಲಿ ಮೊದಲ ಬೆಳೆ ಬಂದಿದೆ.
ಯಾವುದೇ ಕೆಮಿಕಲ್ಸ್ ಗೊಬ್ಬರ ಬಳಸದೇ ಸಾವಯವ ಗೊಬ್ಬರ ಬಳಸಿ ತರಕಾರಿಗಳನ್ನ ಬೆಳೆದು ರೈತರಿಗೆ ಮಾದರಿಯಾಗಿದ್ದಾರೆ. ಉಪೇಂದ್ರ ತಮ್ಮ ಜಮೀನಿನಲ್ಲಿ ಹೇಗೆ ಸಾವಯವ ಗೊಬ್ಬರ ಬಳಸಿ ಈ ತಾಜಾ ತರಕಾರಿಗಳನ್ನ ಬೆಳೆದಿದ್ದಾರೆ ಎಂಬ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.